ಹೊಸದಿಲ್ಲಿ, ಜೂ.13: ಗಂಭೀರ ಸವಾಲುಗಳಿಂದ ದೇಶವನ್ನು ರಕ್ಷಿಸಲು ಎಲ್ಲ ಧಾರ್ಮಿಕ ನಾಯಕರು, ಸಾಮಾಜಿಕ ಕಾರ್ಯಕರ್ತರು, ಯುವಕರು ಒಗ್ಗೂಡಿ ಕೆಲಸ ಮಾಡಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಅಖಿಲಭಾರ ಅಧ್ಯಕ್ಷ ಸಯ್ಯಿದ್ ಸಅದತುಲ್ಲ ಹುಸೈನಿ ಹೇಳಿದರು. ವಿವಿಧ ಧರ್ಮ, ಭಾಷೆ, ಸಂಸ್ಕøತಿ, ತತ್ವಶಾಸ್ತ್ರಗಳವರ ಒಗ್ಗಟ್ಟು, ಸೌಹಾರ್ದ ನಮ್ಮ ದೇಶದ ವಿಶೇಷತೆಯಾಗಿದೆ. ಅವರು ಇದನ್ನು ನಾಶಪಡಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದವರು ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್ ನೇತೃತ್ವದಲ್ಲಿ ದಿಲ್ಲಿಯಲ್ಲಿ ಆಯೋಜಿಸಿದ್ದ ಈದ್ ಸಂಗಮದಲ್ಲಿ ಅವರು ಮಾತಾಡುತ್ತಿದ್ದರು.
ಮುಖ್ಯವಾಗಿ ದೇಶ ಮೂರು ಸವಾಲುಗಳನ್ನು ಎದುರಿಸುತ್ತಿದೆ. ಕೆಲವು ಸಮಾಜ ವಿರೋಧಿ ಘಟಕಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದೆ. ಗೋರಕ್ಷೆ ಇತ್ಯಾದಿ ಹೆಸರಿನಲ್ಲಿ ನಿರಪರಾಧಿಗಳ ಮೇಲೆ ದಾಳಿ ಮಾಡುತ್ತಿದೆ. ಎರಡನೆಯದಾಗಿ ಕೋಮು ಧ್ರುವೀಕರಣ ಇನ್ನೊಂದು ಸವಾಲಾಗಿದೆ. ಆರ್ಥಿಕ ಅಸಮಾನತೆಯಿಂದಾಗಿ ದೇಶದ ಬಹುದೊಡ್ಡ ವಿಭಾಗ ಹಸಿವಿನಿಂದ ನರಳುತ್ತಿದ್ದಾರೆ. ಇವರನ್ನು ಹಸಿವಿನಿಂದ ಮೇಲೆತ್ತಲು ಸರಕಾರ ಅಸಮರ್ಥವಾಗಿದೆ. ಈ ಮೂರು ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಜಮಾಅತೆ ಇಸ್ಲಾಮೀ ಹಿಂದೆ ಎಲ್ಲ ಸಹಕಾರಕ್ಕೂ ಸಿದ್ಧ ಎಂದು ಅಧ್ಯಕ್ಷರು ಹೇಳಿದರು. ಮಾಜಿ ವಿದೇಶ ಕಾರ್ಯದರ್ಶಿ ಮತ್ತು ರಾಯಭಾರಿ ಆಗಿದ್ದ ಮುಚ್ಕುಂದ್ ದುಬೆ, ಮಣಿಶಂಕರ್ ಅಯ್ಯರ್, ಅತುಲ್ ಕುಮಾರ್, ಸ್ವಾಮೀ ಅಗ್ನಿವೇಶ್. ಪಾ. ಎಂಡಿ ಥಾಮಸ್, ಚಂದ್ರಶೇಖರ್ ಆಝಾದ್, ಮೌಲಾನ ಮಹ್ಮೂದ್ ಮದನಿ, ಕಾಲ್ ಫಾರೂಕಿ ಈದ್ಸಂಗಮದಲ್ಲಿ ಭಾಗವಹಿಸಿದ್ದರು.












