ಜಪಾನ್: ದೇಶದಲ್ಲಿ ಎಲ್ಲರಿಗೂ ಉಚಿತ ಕೊರೋನ ವ್ಯಾಕ್ಸಿನ್

0
437

ಸನ್ಮಾರ್ಗ ವಾರ್ತೆ

ಟೋಕಿಯೊ,ಡಿ.2: ದೇಶದಲ್ಲಿ ಎಲ್ಲರಿಗೂ ಉಚಿತ ಕೊರೋನ ವ್ಯಾಕ್ಸಿನ್ ವಿತರಿಸುವ ಮಸೂದೆಯನ್ನು ಜಪಾನ್ ಪಾರ್ಲಿಮೆಂಟು ಪಾಸು ಮಾಡಿದೆ. ಬುಧವಾರ ಪಾರ್ಲಿಮೆಂಟಿನಲ್ಲಿ ಪಾಸು ಆಗಿದ್ದು ಕಾನೂನು ಜಾರಿಗೊಳ್ಳಲಿದೆ. ಮುಂದಿನ ವರ್ಷದಲ್ಲಿ ಜನರಿಗೆ ಅಗತ್ಯವಾದ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭ್ಯಗೊಳಿಸುವುದಾಗಿ ಜಪಾನಿನ ಪ್ರಧಾನಿ ಯೊಶಿಹೈಡ್ ಸುಗ ತಿಳಿಸಿದರು. ಇದರೊಂದಿಗೆ ಸ್ಥಳೀಯ ಆಡಳಿತ ನಿರ್ವಹಣಾ ಇಲಾಖೆಗಳಿಗೆ ಕೊರೋನ ಪ್ರತಿರೋಧ ಚಟುವಟಿಕೆಗಳಿಗೆ ಹೆಚ್ಚಿನ ಜವಾಬ್ದಾರಿ ಲಭಿಸಲಿದೆ ಎಂದು ಜಪಾನಿನ ಆರೋಗ್ಯ, ಉದ್ಯೋಗ, ಕಲ್ಯಾಣ ಸಚಿವಾಲಯ ತಿಳಿಸಿದೆ.

ವ್ಯಾಕ್ಸಿನ್ ಚುಚ್ಚಿದ ಮೇಲೆ ಆರೋಗ್ಯ ಸಮಸ್ಯೆ ಕಂಡು ಬಂದರೆ ಖಾಸಗಿ ಕಂಪೆನಿಗಳು ನಷ್ಟ ಪರಿಹಾರ ನೀಡಬೇಕಾದ ಮಸೂದೆಯನ್ನೂ ಸರಕಾರ ಪಾಸು ಮಾಡಿದೆ. ವ್ಯಾಕ್ಸಿನ್ ಲಭ್ಯಗೊಳಿಸುವ ನಿಟ್ಟಿನಲ್ಲಿ ಜಪಾನ್ ಮೊಡೊನೊ ಇನ್‍ ಕಾರ್ಪೊರೇಷನ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮಾತ್ರವಲ್ಲ, ಅಸ್ಟ್ರೊಸೆನಕ ಪಿಎಲ್‍ಸಿ ಫೈಸಾರ ಇನ್‍ಕಾರ್ಪೊರೇಷ್‍‌ನ್‌ಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.

ಏಳು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಜಪಾನ್‍ನಲ್ಲಿ ಸಾವಿನ ದರ ಅತ್ಯಂತ ಕಡಿಮೆಯಾಗಿದೆ. ವೈರಸ್ ಹೆಚ್ಚು ವ್ಯಾಪಿಸಿದ್ದಲ್ಲಿ ಕಠಿಣ ನಿಯಂತ್ರಣಗಳಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.