ಜಲ್ಲಿಕಟ್ಟು ಫೈಟ್; ಇಬ್ಬರ ಸಾವು, 70 ಮಂದಿಗೆ ಗಾಯ

0
131

ಸನ್ಮಾರ್ಗ ವಾರ್ತೆ

ಚೆನ್ನೈ, ಜ. 17: ಪೊಂಗಲಿಗೆ ಸಂಬಂಧಪಟ್ಟಂತೆ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅಪ್ರಾಪ್ತ ವಯಸ್ಸಿನ ಒಬ್ಬ ಸಹಿತ ಇಬ್ಬರು ಮೃತಪಟ್ಟಿದ್ದಾರೆ. 70 ಮಂದಿ ಗಾಯಗೊಂಡಿದ್ದಾರೆ.

ತಮಿಳ್ನಾಡಿನ ಶಿವಗಂಗ ಜಿಲ್ಲೆಯಲ್ಲಿ ಘಟನೆ ನಡೆದಿದೆ. ವಳಯಂ ಪಟ್ಟಿ ರವಿ(11) ಮತ್ತು 35 ವರ್ಷದ ಯುವಕ ಮೃತಪಟ್ಟಿದ್ದಾರೆ. ಜಿಲ್ಲಾಧಿಕಾರಿ ಆಶಾ ಅಜಿತ್, ಸ್ಥಳೀಯ ಸಂಸದ ಕಾರ್ತಿ ಪಿ. ಚಿದಂಬರಂ, ಡಿಎಂಕೆಯ ಸಚಿವ ಪರೆಯ ಕುರುಪ್ಪನ್ ಇದ್ದಂತೆ ಬುಧವಾರ ನಡೆದ ಕಾರ್ಯಕ್ರಮದಲ್ಲಿ 271 ಎತ್ತುಗಳು ಮತ್ತು 81 ವೀರರು ಭಾಗವಹಿಸಿದ್ದರು.

ಮಧುರೆ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ನಡೆದ ಜೆಲ್ಲಿಕಟ್ಟಿನಲ್ಲಿ ಮೂವರು ಗಾಯಗೊಂಡಿದ್ದಾರೆ. 1,200 ಎತ್ತುಗಳು 800 ಹೋರಿಗಳನ್ನು ಮಣಿಸುವವರು ಈ ಜಲ್ಲಿಕಟ್ಟಿನಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಗೆದ್ದವರಿಗೆ ನಿಸಾನ್ ಮ್ಯಾಗ್ನೆಟ್ ಕಾರು ಬಹುಮಾನವಿತ್ತು. ಮಾತ್ರವಲ್ಲ ಭಾಗವಹಿಸಿದ ಪ್ರತಿಯೊಂದು ಜಾನುವಾರುಗಳಿಗೆ ಒಂದೊಂದು ಚಿನ್ನದ ನಾಣ್ಯ ನೀಡಲಾಗಿತ್ತು. ಸುರಕ್ಷೆ ಖಚಿತಗೊಳಿಸಲು ವೈದ್ಯಕೀಯ ತಂಡವೂ ಇತ್ತು. ವೆಟರನರಿ ತಂಡ, ರೆಡ್‍ಕ್ರಾಸ್ ಸ್ವಯಂಸೇವಕರು, ಅಂಬುಲೆನ್ಸ್‍ಗಳು ಇದ್ದವು.

ತಮಿಳ್ನಾಡಿನಲ್ಲಿ ಪೊಂಗಲ್ ಆಚರಣೆಯ ಪ್ರಯುಕ್ತ ನಡೆಯುವ ಜಲ್ಲಿಕಟ್ಟು ಸ್ಪರ್ಧೆ ನೋಡಲು ರಸ್ಸಿರುತ್ತದೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಹಲವು ದಿನಗಳವರೆಗೆ ಜಲ್ಲಿಕಟ್ಟು ಸ್ಪರ್ಧೆ ಈ ಹಬ್ಬಕ್ಕೆ ಸಂಬಂಧಪಟ್ಟು ನಡೆಯುತ್ತದೆ. ಸ್ಪರ್ಧೆಯಲ್ಲಿ ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿಯ ಸೂಚನೆಯ ಮೇರೆ ಭಾರೀ ಸುರಕ್ಷಾ ವ್ಯವಸ್ಥೆ ಮಾಡಲಾಗಿತ್ತು.