ಟಿಕ್ರಿ ಗಡಿಗೆ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ ಭೇಟಿ: ರೈತರ ಹೋರಾಟಕ್ಕೆ ಬೆಂಬಲ

0
610

ಸನ್ಮಾರ್ಗ ವಾರ್ತೆ

ನವದೆಹಲಿ: ಜಮಾಅತೆ ಇಸ್ಲಾಮೀ ಹಿಂದ್ (ಜೆಐಹೆಚ್) ರಾಷ್ಟ್ರೀಯ ಮತ್ತು ರಾಜ್ಯ ನಾಯಕರನ್ನೊಳಗೊಂಡ ನಿಯೋಗವು ದೆಹಲಿಯ ಟಿಕ್ರಿ ಗಡಿಗೆ ಭೇಟಿ ನೀಡಿ, ಆಂದೋಲನ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಬೆಂಬಲವನ್ನು ನೀಡಿದೆ.

ಜೆಐಎಚ್ ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮೊತಾಸಿಮ್ ಖಾನ್ ಅವರ ನೇತೃತ್ವದಲ್ಲಿ ನಿಯೋಗವು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ಮುಖ್ಯಸ್ಥ ಜೋಗಿಂದರ್ ಸಿಂಗ್ ಉಗ್ರಾಹನ್ ಮತ್ತು ಹಿರಿಯ ಉಪಾಧ್ಯಕ್ಷ ಜಂಡಾ ಸಿಂಗ್ ಜೆತುಕೆ ಸೇರಿದಂತೆ ಚಳವಳಿಯ ರೈತ ಚಳುವಳಿಗಳ (ಕಿಸಾನ್ ಆಂದೋಲನ್) ಮುಖಂಡರನ್ನು ಭೇಟಿಯಾದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ರೈತರ ಈ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಜಮಾಅತ್ ನಿಯೋಗವು ತಿಳಿಸಿತು.

ಜೆಐಹೆಚ್ ರಾಷ್ಟ್ರೀಯ ಕಾರ್ಯದರ್ಶಿ ಶಫಿ ಮದ್ನಿ, ಜೆಐಹೆಚ್ ಪಂಜಾಬ್ ಅಧ್ಯಕ್ಷ ಎ. ಶುಕೂರ್, ಇಶ್ತಿಯಾಕ್, ಝಾಹಿದ್ ಹುಸೇನ್, ಮುಹಮ್ಮದ್ ಅಲಿ ಫಲಾಹಿ ಹರಿಯಾಣ, ಅಸಾದ್ ಫಲಾಹಿ ಅವರು ನಿಯೋಗದಲ್ಲಿ ಉಪಸ್ಥಿತರಿದ್ದರು.