ಜುಮಾ ನಮಾಜ್; ಜಮಾಅತೆ ಇಸ್ಲಾಮಿ ಹಿಂದ್ ಷರಿಯಾ ಕೌನ್ಸಿಲ್ ನಿಂದ ಸಾರ್ವಜನಿಕರಿಗೆ ಸೂಚನೆ

0
3190

ಸನ್ಮಾರ್ಗ ವಾರ್ತೆ

ನವದೆಹಲಿ; ಮಾ. 26-  ಕೊರೋನಾ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಜುಮಾ ನಮಾಜ್ ಮಾಡುವ ಕುರಿತು ಜಮಾಅತೆ ಇಸ್ಲಾಮೀ ಹಿಂದ್ ಶರಿಯಾ ಕೌನ್ಸಿಲ್ ಚರ್ಚಿಸಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಕೌನ್ಸಿಲ್ ನ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ಉಮ್ರಿ  ಹೇಳಿದ್ದಾರೆ.

1. ಇಮಾಮ್, ಮುಅದ್ದಿನ್, ಪರಿಚಾರಕ ಮತ್ತು ಆಡಳಿತಗಾರ ಹೀಗೆ ನಾಲ್ಕು ಮಂದಿ ಮಾತ್ರ ಜುಮಾ ನಮಾಜ್ ನಲ್ಲಿ ಭಾಗವಹಿಸಬೇಕು. ಖುತುಬ ಮತ್ತು ನಮಾಝ್ ಸಂಕ್ಷಿಪ್ತವಾಗಿರಬೇಕು. ಉಳಿದವರು ತಮ್ಮ ತಮ್ಮ ಮನೆಗಳಲ್ಲಿ ಝೊಹರ್ ನಮಾಜ್ ನಿರ್ವಹಿಸಬೇಕು.

2. ಮಸೀದಿಗಳಲ್ಲಿ ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಿಸಬೇಕು. ವೈದ್ಯಕೀಯ ತಜ್ಞರು ಶಿಫಾರಸು ಮಾಡಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.

3. ಮಸೀದಿಗಳಲ್ಲಿ ಐದು ಹೊತ್ತು ಅದಾನ್ ಕರೆ ಕೊಡಬೇಕು.

4. ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಸಾಮೂಹಿಕ ನಮಾಝ್ ನಿರ್ವಹಿಸಬೇಕು. ಮಸೀದಿಯಲ್ಲಿ ಇಮಾಮ್, ಮುಅದ್ದಿನ್, ಪರಿಚಾರಕ ಮತ್ತು ಆಡಳಿತಗಾರ ಹೀಗೆ ನಾಲ್ಕು ಮಂದಿಯನ್ನು ಬಿಟ್ಟು ಮೊಹಲ್ಲದ ಉಳಿದ ಜನರು ತಮ್ಮ ತಮ್ಮ ಮನೆಗಳಲ್ಲಿ ( ಸ್ತ್ರೀಯರೂ ಸೇರಿದಂತೆ) ಕುಟುಂಬ ಸಮೇತವಾಗಿ ಪ್ರತಿದಿನದ ಐದು ಹೊತ್ತಿನ ಸಾಮೂಹಿಕ ನಮಾಝನ್ನು ನಿರ್ವಹಿಸಬೇಕು

5. ವೈಯಕ್ತಿಕವಾಗಿ ದಿಕ್ರ್ ತಸ್ಬಿಹ್ ಗಳಲ್ಲಿ, ತೌಬಾ- ಇಸ್ತಿಗ್ ಫಾರ್ ಗಳನ್ನು ಹೆಚ್ಚು ಹೆಚ್ಚು ಮಾಡಬೇಕು.

6. ಬಡವರು, ಉದ್ಯೋಗ ರಹಿತರು ಮತ್ತು ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕಿರುವವರ ನೆರವಿಗಾಗಿ ದಾನ ಧರ್ಮಗಳನ್ನು ಮಾಡುತ್ತಿರಬೇಕು.