ಗಡಿ ಮುಚ್ಚಿದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ್ದೇವೆ- ಕಾಸರಗೋಡು ಬಿಜೆಪಿ ನಾಯಕ

0
549

ಸನ್ಮಾರ್ಗ ವಾರ್ತೆ

ಕಾಸರಗೋಡು: ಗಡಿ ಪ್ರದೇಶಗಳನ್ನು ಮುಚ್ಚುವ ಕರ್ನಾಟಕ ಸರಕಾರದ ಕ್ರಮವನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ್ದೇನೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಅಡ್ವೊಕೇಟ್ ಕೆ. ಶ್ರೀಕಾಂತ್ ಹೇಳಿದ್ದಾರೆ. ಯಾಕೆ ಕರ್ನಾಟಕ ಇಂತಹ ಸ್ಥಿತಿಗೆ ತಲುಪಿದೆ ಎಂಬ ವಿಷಯವನ್ನು ಅರ್ಥಮಾಡಿಕೊಳ್ಳಲು ಶ್ರಮಿಸಿದ್ದೇನೆ. ಕರ್ನಾಟಕದಲ್ಲಿ ಪ್ರೀತಿಯಿಂದ ನಾವು ಮಂಗಳೂರಿಗೆ ಹೋಗುವುದಲ್ಲವಷ್ಟೇ. ಅಲ್ಲಿಗೆ ಚಿಕಿತ್ಸೆಗಾಗಿ ಹಲವರು ಹೋಗುತ್ತಾರೆ ಎಂದು ಕೆ.ಶ್ರೀಕಾಂತ್ ಕಾಸರಗೋಡಿನ ವೆಬ್‍ಪೋರ್ಟರೊಂದಕ್ಕೆ ಹೇಳಿದ್ದಾರೆ.

ಇದೇ ವೇಳೆ ರೋಗಿಗಳನ್ನೂ ತಲಪಾಡಿಯಲ್ಲಿ ತಡೆಯುತ್ತಿರುವ ಘಟನೆಯ ವಿಚಾರದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ವಾದವನ್ನು ಶ್ರೀಕಾಂತ್ ಪುನರುಚ್ಚರಿಸಿದ್ದಾರೆ. ಮಂಗಳೂರಿನ ಆಸ್ಪತ್ರೆಯು ರೋಗಿಗಳಿಂದ ತುಂಬಿಕೊಂಡಿದೆ. ಆದ್ದರಿಂದ ಈವರೆಗೆ ಮಂಗಳೂರಿನ ಆಸ್ಪತ್ರೆಯನ್ನು ಆಶ್ರಯಿಸಿದವರಿಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗದ ಪರಿಸ್ಥಿತಿ ಇದೆ ಎಂದು ಶ್ರೀಕಾಂತ್ ಹೇಳಿದರು.

ಕಾಸರಗೋಡು ಜಿಲ್ಲೆಯ ಚಿಕಿತ್ಸಾರಂಗದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ರಾಜ್ಯ(ಕೇರಳ) ಸರಕಾರ ಕ್ರಮಕೈಗೊಳ್ಳಬೇಕೆಂದು ತಾನು ಮನವಿ ಮಾಡಿರುವುದಾಗಿಯೂ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.