ಮಗನೇ, ಸ್ನಾನ ಮಾಡಿಸುವಾಗ ಕಸ್ತೂರಿ ಹಚ್ಚಬೇಡ- ಖಲೀಫಾ ಉಮರ್

0
7406

ಇರಿತಕ್ಕೊಳಗಾಗಿದ್ದ ಖಲೀಫ ಉಮರ್(ರ)ರು ಮರಣಾಸನ್ನರಾಗಿ ಮಲಗಿದ್ದರು. ಅವರಿಗೆ 76 ಸಾವಿರ ದಿರ್‍ಹಂ ಸಾಲವಿತ್ತು. ಈ ಸಾಲದ ಹೊರೆಯಿಂದ ಮುಕ್ತರಾಗದೆ ಇಹಲೋಕದಿಂದ ವಿರಮಿಸಬಾರದೆಂದು ಅವರಿಗೆ ನಿರ್ಬಂಧವಿತ್ತು. ಪುತ್ರ ಅಬ್ದುಲ್ಲರನ್ನು ಹತ್ತಿರ ಕರೆದು, ತನ್ನ ಆಸ್ತಿಯನ್ನು ಮಾರಿ ಸಾಲವನ್ನು ಸಂದಾಯ ಮಾಡುವಂತೆ ಹೇಳಿದರು. ಈ ಆಸ್ತಿಯಿಂದ ಸಾಲದ ಹಣ ಸಾಲದೇ ಹೋದರೆ ಆದಿಯ್ಯ್ ಗೋತ್ರದಿಂದ ಉಳಿದ ಮೊತ್ತವನ್ನು ಪಡೆದು ಸಾಲ ಪಾವತಿಸಿರಿ. ಅದೂ ಕೂಡ ಸಾಲ ಸಂದಾಯಕ್ಕೆ ಸಾಲದಾದರೆ ಕುರೈಶಿಗಳಿಗೆ ಸಹಾಯದಿಂದ ಸಾಲದ ಮೊತ್ತ ಪಾವತಿಸಬೇಕೆಂದು ಪುತ್ರನಿಗೆ ಸೂಚಿಸಿದರು. ಉಮರ್ ರ ಈ ಸಾಲಕ್ಕೆ ದೇಶದ ಕಾರ್ಯದಲ್ಲಿ ವ್ಯಸ್ತವಾಗಿದ್ದುದು ಕಾರಣವಾಗಿತ್ತು. ಇದು ಎಲ್ಲರಿಗೂ ತಿಳಿದಿದ್ದ ವಿಷಯವೂ ಆಗಿತ್ತು. ಆದುದರಿಂದ ಈ ಸಾಲದ ಹಣವನ್ನು ಸಾರ್ವಜನಿಕ ಖಜಾನೆಯಿಂದ ಪಡೆದು ಸಾಲ ತೀರಿಸಬಹುದೆಂದು ಅಬ್ದುರ್ರಹ್ಮಾನಿಬ್ನು ಔಫ್‍ರು ಹೇಳಿದರು. ಆದರೆ ಉಮರ್ ಇದಕ್ಕೊಪ್ಪಲಿಲ್ಲ. ಅವರು ಔಫ್‍ರ ಸಲಹೆಯನ್ನು ನಿರಾಕರಿಸಿದರು. ತಾನು ಹೇಳಿದ ಮಾತು ನಡೆಸಿಕೊಡುವೆನೆಂದು ವಾಗ್ದಾನ ಮಾಡುವಂತೆ ಉಮರ್ ತನ್ನ ಪುತ್ರನಿಗೆ ಸೂಚಿಸಿದರು. ಅಬ್ದುಲ್ಲರು ಉಮರ್ ರ ಸಾಲ ಪಾವತಿಯ ಹೊಣೆಯನ್ನು ವಹಿಸಿಕೊಂಡರು. ತಾನು ತಂದೆ ನೀಡಿ ಜವಾಬ್ದಾರಿಕೆ ನಿರ್ವಹಿಸಲು ಸಮಾಜವನ್ನು ಸಾಕ್ಷಿಯಾಗಿಸಿದರು. ತದನಂತರವೇ ರ ತಂದೆಯ ಮೃತದೇಹ (ಜನಾಝ) ಸಂಸ್ಕಾರ ಕಾರ್ಯ ನಿರ್ವಹಿಸಿದ್ದರು. ಖಲೀಫ ನಿಧನರಾಗಿ ಒಂದು ವಾರದೊಳಗೆ ಖಲೀಫರ ಎಲ್ಲ ಸಾಲಗಳನ್ನು ಅಬ್ದುಲ್ಲ ಸಂದಾಯ ಮಾಡಿದರು. ಉಮರ್ ತನ್ನ ಆಸ್ತಿಯ ನಾಲ್ಕನೆ ಒಂದಂಶವನ್ನು ಪುತ್ರಿ ಮತ್ತು ಪ್ರವಾದಿ ಪತ್ನಿಯೂ ಆದ ಹಫ್ಸಾರಿಗೆ(ಸ) ಕೊಡುವಂತೆ ಸೂಚಿಸಿದ್ದರೆಂದು ಕೆಲವು ಇತಿಹಾಸಕಾರರು ಬರೆದಿದ್ದಾರೆ.

ತನ್ನ ಮರಣದ ಬಳಿಕ ನಾಡಿನಲ್ಲಿ ಸಮಸ್ಯೆಗಳು ಸೃಷ್ಟಿಯಾಗಿ ಜನರು ಕಷ್ಟನಷ್ಟ ಅನುಭವಿಸಬಾರದು ಎಂದು ಖಲೀಫರಲ್ಲಿ ನಿರ್ಬಂಧವಿತ್ತು. ಆದ್ದರಿಂದ ತನ್ನ ಉತ್ತರಾಧಿಕಾರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಲು ಮರಣಾಸನ್ನ ವೇಳೆಯೂ ಅವರು ಮರೆಯಲಿಲ್ಲ.

“ನನ್ನ ನಂತರ ಬರುವ ಆಡಳಿತಾಧಿಕಾರಿ ಅಲ್ಲಾಹನನ್ನು ಭಯಪಡಲಿ ಎಂದು ಉಪದೇಶಿಸುವೆನು. ಅವರು ಆದ್ಯ ಕಾಲದ ಮುಹಾಜಿರರ ಹಕ್ಕುಗಳಿಗೆ ಸಂರಕ್ಷ\ಣೆ ನೀಡಲಿ. ಅವರಿಗಿರುವ ಗೌರವರಗಳಿಗೆ ಅಂಗೀಕಾರ ನೀಡಿ ಅನ್ಸಾರರಿಗೆ ಒಳಿತನ್ನೇ ಮಾಡಬೇಕು. ಅವರು ಇಸ್ಲಾಮಿನ ಆಧಾರವಾಗಿದ್ದಾರೆ. ಸುಪ್ರಧಾನ ಸಂಪನ್ಮೂಲವೂ ಅವರೇ ಆಗಿದ್ದಾರೆ. ಆದ್ದರಿಂದ ಅವರ ಆಸ್ತಿಯಲ್ಲಿ ಅವರ ಅನುಮತಿಯ ಹೊರತು ಏನನ್ನೂ ತೆಗೆಯಬಾರದು.”

ನಂತರ ಅರಬರೊಡನೆ ಮತ್ತು ಅರಬೇತರರೋಡನೆ ಪರಸ್ಪರ ಉತ್ತಮವಾಗಿ ವರ್ತಿಸುವಂತೆ ಆದೇಶಿಸಿದರು. ಮುಸ್ಲಿಮೇತರ ಪ್ರಜೆಗಳಿಗೂ ಗೌರವ ನೀಡಬೇಕು. ಕೊನೆಗೆ ತಾನು ತನ್ನ ದೌತ್ಯವನ್ನು ನಿರ್ವಹಿಸಿದೆ ಎನ್ನುವುದಕ್ಕೆ ಜನರನ್ನು ಸಾಕ್ಷಿಯಾಗಿಸಿದರು.

ಮುಸ್ಲಿಂ ಸಮಾಜದ ಗೌರವ ಆತ್ಮಾಭಿಮಾನ ಉನ್ನತವಾಗಿ ನೆಲೆಸಬೇಕೆಂದು ಉಮರ್ ಉತ್ಕಟವಾಗಿ ಬಯಸಿದ್ದರು. ಆದ್ದರಿಂದ ಅವರು ಮರಣಾಶಯ್ಯೆಯಲ್ಲಿ ಹೇಳಿದರು, “ನಾನು ಕೊನೆಯುಸಿರೆಳೆದರೆ ಅರಬರಾದ ಎಲ್ಲ ಗುಲಾಮರನ್ನು (ಬಂದಿಗಳನ್ನು) ಸಾರ್ವಜನಿಕ ಆಸ್ತಿಯನ್ನು ಬಳಸಿ ವಿಮೋಚನೆ ನಡೆಸಿರಿ”- ಇದು ಅಮೀರುಲ್ ಮೂಮಿನೀನ್‍ರ ಬಹುಕಾಲದ ಆಗ್ರಹವಾಗಿತ್ತು. ಆದ್ದರಿಂದ ಅವರು ಅಧಿಕಾರ ವಹಿಸಿಕೊಂಡೊಡನೆ ಪ್ರಸ್ತಾಪಿಸಿದ್ದು ಹೀಗೆ-

“ಅರಬರಲ್ಲಿ ಗುಲಾಮತ್ವವಿರುವುದನ್ನು ನಾನು ಬಯಸೆನು.” ಕೊನೆ ಕ್ಷಣದಲ್ಲಾದರೂ ಈ ಕಾರ್ಯದಲ್ಲಿ ಎಚ್ಚರಿಕೆಯನ್ನು ವಹಿಸದೆ ಹೋದರೆ ಈ ಲೋಪ ನಿರಂತರವಾಗಿ ಮುಂದು ವರಿಯಲಿದೆ ಎನ್ನುವ ಭೀತಿ ಅವರನ್ನು ಕಾಡುತಿತ್ತು. ಆದ್ದರಿಂದ ಗುಲಾಮ ವಿಮೋಚನೆಯ ಪ್ರಾಮುಖ್ಯತೆಯನ್ನು ಜನರ ಗಮನಕ್ಕೆ ಅವರು ತಂದಿರಬಹುದು. ಅಲ್ಲಾಹನ ಸನ್ನಿಧಿಯಲ್ಲಿ ಸೇರಿದಾಗ ನನ್ನ ಅವಸ್ಥೆ ಹೇಗಿರಬಹುದು? ಒಳಿತು ಕೆಡುಕನ್ನು ಮೀರಿಸಿತೇ? ಅಥವಾ ಪಾಪವೇ ಪುಣ್ಯಕ್ಕಿಂತ ಹೆಚ್ಚು ಭಾರವಾಗಿರಬಹುದೇ? ರಹಸ್ಯವೂ ಬಹಿರಂಗವೂ ಆದ ಕರ್ಮಗಳು ವಿಚಾರಣೆಗೊಳಗಾಗುವ ದಿನವು ನಾನು ಸಿಕ್ಕಿಬೀಳುವೆನೇ? ಉಮರ್ ರಲ್ಲಿ ಈ ಚಿಂತೆ ಹೆಚ್ಚಾಗಿ ಕಾಡುತ್ತಲೇ ಇತ್ತು. ಆದ್ದರಿಂದ ಅವರನ್ನು ಸಂದರ್ಶಿಸಿದ ಓರ್ವ ಹೇಳಿದರು, “ಅಲ್ಲಾಹನಾಣೆ. ಬೆಂಕಿ ನಿಮ್ಮ ಚರ್ಮವನ್ನು ಮುಟ್ಟಲಾರದು ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದಾಗ ಉಮರ್ ರ ಕಣ್ಣುಗಳು ತೇವಗೊಂಡವು. ಅವರು ಗದ್ಗದಿತರಾಗಿ ಹೀಗೆಂದರು, “ಆ ಬಗ್ಗೆ ನಿಮಗಿರುವ ಜ್ಞಾನವು ಅಲ್ಪ. ಭೂಮಿಯಲ್ಲಿ ಇರುವ ಎಲ್ಲವೂ ನನ್ನ ಒಡೆತನದಲ್ಲಿ ಇದ್ದರೂ ಆವೆಲ್ಲವನ್ನೂ ಆ ಭೀಕರ ಅವಸ್ಥೆಯಿಂದ ಪಾರಾಗಲು ಬದಲಿಯಾಗಿ ನೀಡುತ್ತಿದ್ದೆ.”

ಅಂತಿಮ ಕ್ಷಣದಲ್ಲಿ ಅವರ ಸಮೀಪದಲ್ಲಿದ್ದ ಇಬ್ನು ಅಬ್ಬಾಸ್ ಅವರು ಹೇಳಿದರು, ನಮ್ಮ ಅರಿವಿನಲ್ಲಿ ನೀವು ವಿಶ್ವಾಸಿಗಳ ನಾಯಕರು. ದೇವನ ಗ್ರಂಥದ ಪ್ರಕಾರ ತೀರ್ಪು ನೀಡುವಿರಿ.

ತನ್ನ ಜನಾಝದ ಸಂಸ್ಕಾರ ಕಾರ್ಯ ತುಂಬ ಸರಳ ರೀತಿಯಲ್ಲಿ ನಡೆಯಬೇಕೆಂಬುದು ಖಲೀಫ ಉಮರ್ ರ ಆಗ್ರಹವಾಗಿತ್ತು. ಜೀವಿಸಿದಾಗಲೂ ಮೃತನಾದಾಗಲೂ ಊರಿನ ಬಡ ಪ್ರಜೆಯ ಸ್ಥಾನವೇ ತನ್ನದು ಎಂದು ಅವರು ನಿರ್ಧಸಿದ್ದರು. ತನ್ನ ಜನಾಝಕ್ಕೆ ಸ್ನಾನ ಮಾಡಿಸುವಾಗ ಕಸ್ತೂರಿ ಹಚ್ಚಬಾರದೆಂದು ಹೇಳಿದರು. ನಂತರ ಪುತ್ರನನ್ನು ಕರೆದು ಹೀಗೆ ಹೇಳಿದರು, “ಮಗನೇ, ನನ್ನ ಕಫನ್ ವಸ್ತ್ರದಲ್ಲಿ ಸರಳತನವನ್ನು ಪಾಲಿಸು. ದೇವನ ಸನ್ನಿಧಿಯಲ್ಲಿ ನನಗಿರುವುದು ಒಳಿತೆಂದಾದರೆ ಕಸ್ತೂರಿಗಿಂತಲೂ ಉತ್ತಮವಾದ ಒಳಿತು ನನಗೆ ಲಭಿಸಲಿ. ನನ್ನ ಗೋರಿಯ ವಿಷಯದಲ್ಲಿ ಸರಳತ್ವವನ್ನು ಪಾಲಿಸು. ಇಲ್ಲದ್ದನ್ನೆಲ್ಲ ಹೇಳಿ ನನ್ನನ್ನು ಪ್ರಶಂಸಿಸದಿರಿ. ನನ್ನನು ಅತಿಹೆಚ್ಚು ತಿಳಿದಿರುವವನು ಅಲ್ಲಾಹನೇ. ನನ್ನ ಜನಾಝದೊಂದಿಗೆ ಹೊರಟಾಗ ವೇಗವಾಗಿ ಹೆಜ್ಜೆ ಹಾಕಿರಿ. ದೇವನ ಸನ್ನಿಧಾನದಲ್ಲಿ ಒಳಿತಿದೆಯೆಂದಾದರೆ ಅದು ಬೇಗನೆ ನನಗೆ ಸಿಗುವಂತಾಗಲಿ. ಅದಲ್ಲದಿದ್ದರೆ ನೀವು ಹೊತ್ತಿರುವ ಕೆಡುಕಿನ ಭಾರವನ್ನು ಬೇಗನೆ ಕೆಳಗಿಳಿಸಿರಿ.
ಅಬ್ದುಲ್ಲಾಹಿಬ್ನು ಉಮರ್ ತಂದೆಯ ಉಪದೇಶವನ್ನು ಅವರ ಹತ್ತಿರ ಕೂತು ಆಲಿಸಿದರು.