ನನ್ನ ಬಟ್ಟೆಯನ್ನು ನಾಯಿ ಸ್ಪರ್ಶಿಸಿದೆ, ನಾನು ನಮಾಜ್ ಮಾಡಬಹುದೇ?

0
7154

ಪ್ರಶ್ನೋತ್ತರ

ಪ್ರಶ್ನೆ: ನಾನು ಮನೆಯಿಂದ ನಮಾಝ್‍ಗೆ ಹೊರಡುವಾಗ ಒಂದು ನಾಯಿ ನನ್ನ ಬಟ್ಟೆಗೆ ಒರೆಸಿಕೊಂಡು ಹೋಯಿತು. ಇದರಿಂದ ನನ್ನ ಬಟ್ಟೆ ಮಲಿನವಾಯಿತೆ? ನಾನು ನಮಾಝ್ ಮಾಡುವಂತಿಲ್ಲವೇ?

ಉತ್ತರ: ನಾಯಿಯು `ನಜಸುಲ್ ಐನ್’ (ಪ್ರತ್ಯಕ್ಷ ಮಲಿನ) ಅಲ್ಲ, ಆದರೆ ಅದರ ಜೊಲ್ಲು ಮತ್ತು ಕೀವು ನಜಸ್ ಆಗಿದೆ. ನಾಯಿಯ ಶರೀರ ಒದ್ದೆಯಾಗಿದ್ದರೆ ಮತ್ತು ಅದು ಮನುಷ್ಯರ ಶರೀರ ಅಥವಾ ಬಟ್ಟೆಗೆ ತಾಗಿದ್ದರೆ ಅದು ಮಲಿನವಾಗುತ್ತದೆ. ನಾಯಿಯ ಶರೀರ ಒಣಗಿದ್ದರೆ ಅದು ತಾಗುವುದರಿಂದ ಮಲಿನವಾಗುವುದಿಲ್ಲ.