ಸನ್ಮಾರ್ಗ ವಾರ್ತೆ
ಸಿಯೋಲ್, ಫೆ. 29: ವೈರಸ್ ತಡೆಯಲು ಆಗದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಉತ್ತರ ಕೊರಿಯ ಅಧ್ಯಕ್ಷ ಕಿಂ ಜೊಂಗ್ ಉನ್ ಮುನ್ನೆಚ್ಚರಿಕೆ ನೀಡಿದ್ದಾರೆ. ಭೂ-ವಾಯು ಮಾರ್ಗ ಸಹಿತ ವೈರಸ್ ದಾಟಿ ಬರುವ ಎಲ್ಲ ಮಾರ್ಗಗಳನ್ನು ಮುಚ್ಚಬೇಕು. ಕಟ್ಟು ನಿಟ್ಟಿನ ತಪಾಸಣೆ ನಡೆಸಬೇಕೆಂದು ಕಿಂ ಜೊಂಗ್ ಉನ್ ಸೂಚಿಸಿದ್ದಾರೆ. ಹೊರಜಗತ್ತಿಗೆ ಹೆಚ್ಚು ಸಂಬಂಧಗಳಿಲ್ಲದ ಉತ್ತರ ಕೊರಿಯದ ಆರೋಗ್ಯ ಕ್ಷೇತ್ರ ವೈರಸ್ ಪ್ರತಿರೋಧಿಸುವ ಶಕ್ತಿಯನ್ನು ಹೊಂದಿದೆಯೇ ಎಂದು ವಿಶ್ವದೇಶಗಳಿಗೆ ಸ್ಪಷ್ಟವಿಲ್ಲ. ಉತ್ತರ ಕೊರಿಯದ ಆರೋಗ್ಯ ಕ್ಷೇತ್ರ ಸಂಪೂರ್ಣ ದುರ್ಬಲವಾಗಿದೆ ಎಂದು ನಿರೀಕ್ಷಕರು ಹೇಳುತ್ತಿದ್ದಾರೆ. ಉತ್ತರ ಕೊರಿಯದ ನೆರೆಯ ದಕ್ಷಿಣ ಕೊರಿಯದಲ್ಲಿ 2300 ಮಂದಿಗೆ ಕೊರೊನಾ ತಗಲಿದ್ದು ದೃಢವಾಗಿದೆ. ಚೀನದ ಹೊರಗೆ ಅತಿಹೆಚ್ಚು ದಕ್ಷಿಣ ಕೊರಿಯಾದ ಕೊರೊನಾ ಬಾಧೆಯಿದೆ.
ಕೊರೊನಾ ಬಂದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ವೈರಸನ್ನು ಯಾವುದೇ ರೀತಿಯಿಂದ ತಡೆಯಬೇಕು ಎಂದು ಕಿಂಜೊಂಗ್ ಉನ್ ಅಧಿಕಾರಿಗಳಿಗೆ ಮತ್ತು ತನ್ನ ವರ್ಕರ್ಸ್ ಪಾರ್ಟಿ ಮುಖ್ಯಸ್ಥರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ ವರದಿ ಮಾಡಿದೆ.












