ಸನ್ಮಾರ್ಗ ವಾರ್ತೆ
ಹೈದರಾಬಾದ್, ಫೆ. 29: ಕೊರೊನಾ ವೈರಸ್ ಹೆದರಿಕೆಯನ್ನು ಜನರ ನಡುವಿನಿಂದ ದೂರ ಮಾಡುವ ಸಲುವಾಗಿ ತೆಲಂಗಾಣದ ಸಚಿವರು ಸಾರ್ವಜನಿಕ ವೇದಿಕೆಯಲ್ಲಿ ಚಿಕನ್ ಸೇವಿಸಿದ್ದಾರೆ. ಮೊಟ್ಟೆ, ಮಾಂಸದಿಂದ ವೈರಸ್ ಬರುತ್ತದೆ ಎಂಬ ಅಪಪ್ರಚಾರವನ್ನು ಪ್ರತಿರೋಧಿಸುವುದಕ್ಕಾಗಿ ಸಚಿವರು ಈ ರೀತಿ ಶ್ರಮಿಸಿದ್ದಾರೆ. ತಾಕ್ ಬುಂದ್ ಏರಿಯದಲ್ಲಿ ಆಯೋಜಿಸಲಾಗಿದ್ದ ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮದಲ್ಲಿ ಸಚಿವ ಕೆ ಟಿ ರಾಮರಾವ್, ಎದೆಲ ರಾಜೇಂದ್ರ, ತಲಸಾನಿ ಶ್ರೀನಿವಾಸ್ ಯಾದವ್ ಇದ್ದರು. ಚಿಕನ್, ಮೊಟ್ಟೆಯಿಂದ ವೈರಸ್ ಬಾಧೆಯಿದೆ ಎಂಬುದು ಸರಿಯಲ್ಲ. ಭಾರತದಲ್ಲಿ ವೈರಸ್ ಪರಿಸ್ಥಿತಿಯಿಲ್ಲ ಎಂದು ಸಚಿವರು ಹೇಳಿದರು. ಸಚಿವರ ಜೊತೆ ವೇದಿಕೆಯಲ್ಲಿದ್ದ ಎಲ್ಲರೂ ಚಿಕನ್ ಪ್ರೈ ತಿಂದರು.
ಚೀನದಿಂದ ಭಾರತಕ್ಕೆ ಬಂದ ವ್ಯಕ್ತಿಗಳನ್ನು ಐಸೊಲೇಶನ್ ವಾರ್ಡಿನಲ್ಲಿ ನಿಗಾ ಇರಿಸಲಾತ್ತಿತ್ತು. ಆದರೆ ಭಾರತದಲ್ಲಿ ಇದುವರೆಗೆ ಸಾವಿನ ಸಂಖ್ಯೆ ವರದಿಯಾಗಿಲ್ಲ.












