ಪ.ಬಂಗಾಳದಲ್ಲಿ ಬಿಜೆಪಿಯತ್ತ ಸಿಪಿಎಂ ಮತಗಳ ವಲಸೆ- ಮಮತಾರ ಸಂದೇಹ ಸರಿ

0
617

ಕೊಲ್ಕತಾ,ಮೇ 24: ಲೋಕಸಭಾ ಚುನಾವಣೆಯ ಕೊನೆಹಂತದ ಮತ ಎಣಿಕೆ ಮೊದಲು ತೃಣಮೂಲ ಕಾಂಗ್ರೆಸ್‍ನ ಆಂತರಿಕ ವರದಿ ಬಹಿರಂಗವಾಗಿತ್ತು. ಸಿಪಿಎಂ ಮತಗಳು ಗಣನೀಯ ಸಂಖ್ಯೆಯಲ್ಲಿ ಬಿಜೆಪಿ ಪಾಲಾಗಲಿದೆ ಎಂದು ಅದರಲ್ಲಿ ವಿವರಿಸಲಾಗಿತ್ತು. ಅದು ಈಗ ನಿಜವಾಗಿದೆ. ಒಂದು ಸೀಟು ಗಳಿಸಲು ಸಿಪಿಎಂಗೆ ಸಾಧ್ಯವಾಗಿಲ್ಲ. ಒಂದು ಕಡೆಯೂ ಎರಡನೆ ಸ್ಥಾನದಲ್ಲಿ ಸಿಪಿಎಂ ಇಲ್ಲ. ಸಿಪಿಎಂ ಬಿಜೆಪಿ ಮತವಾಗಿ ಬದಲಾಗಿದ್ದು ಇಲ್ಲಿ ಸ್ಪಷ್ಟವಾಗಿದೆ.

ಬಿಜೆಪಿಗೆ ತಮ್ಮ ಮತಗಳು ವಲಸೆ ಹೋಗಿದೆ ಎಂದು ಪಶ್ಚಿಮಬಂಗಾಳದ ಹಿರಿಯ ಸಿಪಿಎಂ ನಾಯಕ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಚುನಾವಣೆಯ ಸಮಯದಲ್ಲಿಯೇ ಕಾರ್ಯಕರ್ತರಿಗೆ ಈ ಮುನ್ನೆಚ್ಚರಿಕೆ ನೀಡಿದ್ದರು. ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕೂಡ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ತೃಣಮೂಲದ ಮುಂದೆ ತಲೆ ಎತ್ತಿ ನಿಲ್ಲಲು ಸಾಧ್ಯವಾದಿದ್ದಾಗಲೂ ಸಿಪಿಎಂ ಮತಗಳಲ್ಲಿ ಹೆಚ್ಚಿನ ಸೋರಿಕೆ ಆಗಿರಲಿಲ್ಲ. 2014ರಲ್ಲಿ ಎರಡು ಸೀಟಿಗೆ ಸಿಪಿಎಂಗೆ ಸಿಕ್ಕಿದ್ದಾಗಲೂ ಶೇ 30ರಷ್ಟು ಮತಗಳನ್ನು ಎಡ ಪಕ್ಷಗಳಿಗೆ ಪಡೆಯಲು ಸಾಧ್ಯವಾಗಿತ್ತು. ಆದರೆ ಈ ಸಲ ಎಡಪಕ್ಷಗಳಿಗೆ ಶೇ. ಎಂಟರಷ್ಟು ಮತಗಳು ಮಾತ್ರ ಸಿಕ್ಕಿವೆ. ತೃಣಮೂಲ ಕಾಂಗ್ರೆಸ್ಸಿಗರ ಬೆದರಿಕೆ ಸಿಕ್ಕವರನ್ನೆಲ್ಲ ತನ್ನತ್ತ ಸೆಳೆಯಲು ಬಿಜೆಪಿಗೆ ಸಾಧ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಿದೆ.