ಸನ್ಮಾರ್ಗ ವಾರ್ತೆ
ಯವತ್‍ಮಲ್, ಮಾ.4: ಕಲಿಯದಿದ್ದರೂ ಪರೀಕ್ಷೆಯಲ್ಲಿ ಪಾಸಾಗಲು ಯುವಕರು ಸಹಾಯ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಹತ್ತನೆ ಕ್ಲಾಸು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಹೊಡೆಯಲು ಕಂಪೌಂಡ್ ಗೋಡೆ ಹತ್ತಿ ನಿಲ್ಲುವ ಒಂದು ಯುವಕರ ತಂಡದ ವೀಡಿಯೊ ಹೊರಬಂದಿದೆ.
ಮಹಾರಾಷ್ಟ್ರದ ಯವತ್‍ಮಲ್ ಮಹಾಗಣ್ ಸ್ಕೂಲ್‍ನ ಗೋಡೆ ಹತ್ತುವ ಯುವಕರು, ಕಾಪಿ ಹೊಡೆಯಲು ಚೀಟಿಗಳನ್ನು ಎಸೆಯುವ ದೃಶ್ಯಗಳು ವೀಡಿಯೊದಲ್ಲಿದೆ. ಆವರಣ ಗೋಡೆಯ ಕೆಲಸ ಪೂರ್ಣಗೊಂಡಿಲ್ಲ. ಆದ್ದರಿಂದ ಹೀಗಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ನಡೆದ ಹತ್ತನೆ ಕ್ಲಾಸು ಪಬ್ಲಿಕ್ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಕಂಪೌಂಡು ಗೋಡೆ ಅಪೂರ್ಣವಾಗಿತ್ತು. ಹೀಗಾಗಿ ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ಪರೀಕ್ಷೆ ನಿಯಂತ್ರಕ ಎ ಎಸ್ ಚೌಧರಿ ಹೇಳಿದರು. ಈಗ ಪೊಲೀಸರ ಸಹಾಯವನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು.
#WATCH Maharashtra: People seen climbing the boundary walls and providing chits to students, writing their class X Matriculation examination at Zila Parishad School, Mahagaon in Yavatmal district. (03.03.2020) pic.twitter.com/IqwC4tdhLQ
— ANI (@ANI) March 3, 2020












