ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 4: ಭಾರತಕ್ಕೆ ಬಂದ ಹದಿನೈದು ಇಟಲಿ ಪ್ರವಾಸಿಗರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು ದಿಲ್ಲಿಯ ಐಟಿಬಿಪಿ ಕ್ಯಾಂಪ್ನಲ್ಲಿ ಇವರನ್ನುನಿಗಾದಲ್ಲಿರಿಸಲಾಗಿದೆ. ಕ್ಯಾಂಪಿನಲ್ಲಿರುವ ಆರು ಮಂದಿಗೆ ಕೊರೊನಾ ಇದೆ ಎಂಬ ಸಂದೇಹವೂ ಇದೆ. ಮಹಾರಾಷ್ಟ್ರದಲ್ಲಿ ಇಬ್ಬರಿಗೆ ಕೊರೊನಾ ರೋಗ ತಗಲಿದೆ ಎಂದು ಶಂಕಿಸಲಾಗಿದೆ. ಮುಂಬೈ, ಪುಣೆಯಲ್ಲಿ ವೈರಸ್ ಪೀಡಿತರೆಂದು ಶಂಕಿಸಲಾದ ಇಬ್ಬರನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ನಿಗಾದಲ್ಲಿರಿಸಲಾಗಿದೆ.
ಇದೇವೇಳೆ ಕೊರೊನಾ ತೀವ್ರ ಗತಿಯಲ್ಲಿ ಹರಡುವ ಪರಿಸ್ಥಿತಿಯಿದ್ದು ಕೇಂದ್ರ ಆರೋಗ್ಯ ಸಚಿವ ಹರ್ಷವಧನ್ ತುರ್ತು ಸಭೆ ಕರೆದಿದ್ದಾರೆ. ಉನ್ನತ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುತ್ತಿದ್ದಾರೆ.












