ಮಕ್ಕಾ ಯಾತ್ರೆಯಿಂದ 3 ಲಕ್ಷ ಫೆಲಸ್ತೀನಿಯರ ಮೇಲೆ ನಿಷೇಧ ಹೇರಿದ ಸೌದಿ ಅರೇಬಿಯಾ!

0
1472

ಲೆಬನಾನಿನಲ್ಲಿ ನೆಲೆಸಿರುವ 3 ಲಕ್ಷ ಫೆಲಸ್ತೀನಿಯನ್ ನಿರಾಶ್ರಿತರ ಮೇಲೆ ಮಕ್ಕಾ ತೀರ್ಥಯಾತ್ರೆಯ ಮೇಲೆ ನಿಷೇಧ ಹೇರುವ ನೂತನ ನಿರ್ದೇಶನವನ್ನು ಸೌದಿ ಅರೇಬಿಯಾ ಹೊರಡಿಸಿದೆ ಎಂದು ಅಲ್ ಅರಬ್.ಕ ವರದಿ ಮಾಡಿದೆ.

ಲೆಬನಾನ್ ನಲ್ಲಿ ನೆಲೆಸಿರುವ ಫೆಲಸ್ತೀನಿಯನ್ ನಿರಾಶ್ರಿತರಿಗೆ ವೀಸಾ ನೀಡುವುದನ್ನು ಸೌದಿ ಅರೇಬಿಯಾವು ನಿಲ್ಲಿಸಿರುವುದಾಗಿ ಕತಾರಿ ನ್ಯೂಸ್ ವೆಬ್‌ಸೈಟ್ ಆದ ಫೆಲಸ್ತೀನಿಯನ್ ಇನ್ಸ್ಟಿಟ್ಯೂಷನ್ ಫಾರ್ ಹ್ಯೂಮನ್ ರೈಟ್ಸ್( ಶಹೇದ್) ವರದಿ ಮಾಡಿದೆ.

“ಲೆಬನಾನ್ ನಲ್ಲಿರುವ ಟ್ರಾವೆಲ್ ಎಜೆಂಟರುಗಳಿಗೆ ಈಗಾಗಲೇ ಲೆಬನಾನ್ ನಲ್ಲಿರುವ ಸೌದಿ ರಾಯಭಾರವು ಫೆಲಸ್ತೀನಿಯನ್ ಅಸೋಸಿಯೇಷನಿನ ಪಾಸ್ ಪೋರ್ಟ್ ಹೊಂದಿರದ ನಿರಾಶ್ರಿತರ ಅರ್ಜಿಗಳನ್ನು ಸ್ವೀಕರಿಸಬಾರದೆಂದು ಸೂಚನೆ ನೀಡಿರುವುದಾಗಿ ಅದು ತಿಳಿಸಿದೆ.
“ಸೌದಿ ಅರೇಬಿಯಾವು ಹಠಾತ್ತನೆ ತೆಗೆದುಕೊಂಡಿರುವ ಈ ನಿರ್ಧಾರವು ಫೆಲಸ್ತೀನಿಯರ ಭವಿಷ್ಯದ ಮೇಲೆ ಗಂಭೀರ ಪರಿಣಾಮ‌ ಬೀರಲಿದೆ” ಎಂದು ಮಾನವ ಹಕ್ಕುಗಳ ಗುಂಪುಗಳು ಆತಂಕ ವ್ಯಕ್ತಪಡಿಸಿವೆ.

ಶಹೇದ್ ಗೆ ಲೆಬನಾನ್ ನಲ್ಲಿರುವ ಸೌದಿ ರಾಯಭಾರಿ ಕಛೇರಿಯನ್ನು ಸಂಪರ್ಕಿಸಲಾಗಲಿಲ್ಲವಾದರೆ ಫೆಲಸ್ತೀನಿಯನ್ ಅಸೋಸಿಯೇಷನ್ ರಾಯಭಾರಿ ಕಛೇರಿಗೆ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಅಧೀಕೃತ ನಿರ್ದೇಶನಗಳು ಲಭಿಸಿಲ್ಲವೆಂದು ತಿಳಿಸಿರುವುದಾಗಿ ಅಲ್ ಅರಬ್.ಕ ವರದಿ ಮಾಡಿದೆ.

ಈಗಾಗಲೇ ಸೌದಿ ಅರೇಬಿಯಾವು ಫೆಲಸ್ತೀನಿಯನ್ ಉದ್ಯೋಗಿಗಳಿಗೆ ನಿಷೇಧವನ್ನು ಹೇರಿದ್ದು ಇದೀಗ ಧಾರ್ಮಿಕ ಮೇರೆಗಳಿಗೂ ಕೂಡ ಅಡ್ಡಿ ವ್ಯಕ್ತಪಡಿಸುತ್ತಿದೆ ಎಂದು ಶಹೇದ್ ಅಸಮಾಧಾನ ವ್ಯಕ್ತಪಡಿಸಿದೆ.

ಇದೇ ವರ್ಷ ಜೋರ್ಡಾನಿನ ಪಾಸ್‌ಪೋರ್ಟ್ ಗಳನ್ನು ಹೊಂದಿದ್ದ ಸಾವಿರಾರು ಫೆಲಸ್ತೀನಿಯರಿಗೆ ಹಜ್ಜ್ ವೀಸಾ ಅರ್ಜಿಗಳನ್ನು ಸೌದಿ ಸರಕಾರವು ನಿಷೇಧಿಸಿತ್ತು. ಇದಲ್ಲದೇ 2013 ರ ರಿಂದಲೇ ಫೆಲಸ್ತೀನಿನ ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಿಗೆ ಉಮ್ರಾ ನಿರ್ವಹಿಸದಂತೆ ತಡೆಹಿಡಿದಿದ್ದು ಪ್ರಸ್ತುತ ಜಾರಿಯಲ್ಲಿಯೇ ಇದೆ.