ಆರೆಸ್ಸೆಸ್ಸ್, ಬ್ರದರ್ ಹುಡ್‍ ಮತ್ತು ರಾಹುಲ್ ಗಾಂಧಿ

0
777

ಪರ್ವಾಝ್ ರಹ್ಮಾನಿ


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನ ಲಂಡನ್ ಪ್ರವಾಸದ ವೇಳೆ ಒಂದು ಸಭೆಯಲ್ಲಿ ತಲೆಬುಡವಿಲ್ಲದ ಮಾತನ್ನಾಡಿದ್ದಾರೆ. ಆರೆಸ್ಸೆಸ್ ಭಾರತ ದಲ್ಲಿ ಬ್ರದರ್ ಹುಡ್‍ನ ಕೆಲಸ ಮಾಡುತ್ತಿದೆಯೆಂದು ಹೇಳಿದ್ದಾರೆ. ಆರೆಸ್ಸೆಸ್ ಭಾರತದ ಬುನಾದಿಯನ್ನೇ ಬದಲಿಸ ಬಯಸುತ್ತದೆ. ಭಾರತೀಯರನ್ನು ಪರಸ್ಪರ ವಿಭಜಿಸುವ ಕೆಲಸ ಮಾಡುತ್ತದೆಂದು ಹೇಳಿದ್ದಾರೆ. ರಾಹುಲ್ ಗಾಂಧಿ ಆರೆಸ್ಸೆಸ್‍ನ ವಿರುದ್ಧ ಈ ಹಿಂದೆ ಮಾತಾಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಅವರು ಬ್ರದರ್ ಹುಡ್‍ನೊಂದಿಗೆ ಹೋಲಿಸಿ ಅದಕ್ಕೆ ಬಹಳ ದೊಡ್ಡ ಸರ್ಟಿಫಿಕೇಟ್ ನೀಡಿದ್ದಾರೆ.

ಬ್ರದರ್ ಹುಡ್ (ಇಖ್ವಾನುಲ್ ಮುಸ್ಲಿಮೂನ್) ಮತ್ತಿತರ ಇಸ್ಲಾಮೀ ಸಂಘಟನೆಗಳನ್ನು ಚೆನ್ನಾಗಿ ಅರಿತಿರುವವರ ದೃಷ್ಟಿಯಲ್ಲಿ ಈ ಸರ್ಟಿಫಿಕೇಟ್, ಅನ್ಯಥಾ ಸಾಮಾನ್ಯ ಜನರಿಗೆ ವಿಶೇಷವಾಗಿ ರಾಜಕೀಯ ಪಕ್ಷಗಳ ನಾಯಕರ ಮಟ್ಟಿಗೆ ಎಲ್ಲ ಇಸ್ಲಾಮೀ ಸಂಘಟನೆಗಳೂ ತಿರಸ್ಕಾರ ಯೋಗ್ಯವಾಗಿವೆ. ಆರೆಸ್ಸೆಸ್ ಮತ್ತು ಬಿಜೆಪಿಯ ಮಟ್ಟಿಗೆ ಅದು ತಿರಸ್ಕಾರ ಯೋಗ್ಯವಾಗಲು ಅದು `ಇಸ್ಲಾಮೀ’ ಅಥವಾ `ಮುಸ್ಲಿಮ್’ ಆಗಿರು ವುದೇ ಸಾಕು. ರಾಹುಲ್ ಗಾಂಧಿಗೆ ಇಖ್ವಾನ್‍ನ ಎಬಿಸಿ ಗೊತ್ತಿಲ್ಲವೆಂದು ಖಚಿತವಾಗಿ ಹೇಳಬಹುದು.

ಇಸ್ಲಾಮ್ ಮತ್ತು ಇಸ್ಲಾಮೀ ಸಂಘಟನೆಗಳ ಕುರಿತು ಈ ರಾಜಕಾರಣಿಗಳಿಗೆ ಅಮೆರಿಕನ್ ಮತ್ತು ಇಸ್ರೇಲಿಯನ್ ಏಜೆನ್ಸಿಗಳು ನೀಡುವ ಮಾಹಿತಿಗಳು ಮಾತ್ರ ಇರುತ್ತವೆ. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಸರಿಯಾಗಿ ತಿಳಿಯುವ ಪ್ರಯತ್ನ ಈ ದೇಶದಲ್ಲಿ ಬಹಳ ಕಡಿಮೆ ಆಗುತ್ತಿದೆ.

ಇಖ್ವಾನುಲ್ ಮುಸ್ಲಿಮೂನನ್ನು ಆರೆಸ್ಸೆಸ್‍ನೊಂದಿಗೆ ತಳಕು ಹಾಕುವುದಕ್ಕೆ ಮುಂಚೆ, ರಾಹುಲ್ ಗಾಂಧಿ ಅವುಗಳಲ್ಲೊಂದು, ಮಾನವೀಯತೆಯ ಉನ್ನತ ಮೌಲ್ಯಗಳ ಸ್ಥಾಪನೆಗಾಗಿರುವಂತಹದಾಗಿದ್ದರೆ ಇನ್ನೊಂದು ಮಾನವರ ಬಹುಸಂಖ್ಯೆಯನ್ನು ಅವಮಾನ ಮತ್ತು ನಿಂದನೆಯ ಶಾಶ್ವತ ಸ್ಥಿತಿಯಲ್ಲಿಡ ಬಯಸುತ್ತದೆಂದು ಯೋಚಿಸಿಯೂ ಇರಲಿಕ್ಕಿಲ್ಲ. ಇಖ್ವಾನ್ ಯಾವ ದೇಶದಲ್ಲೂ ಯಾವುದೇ ಪ್ರಾಣಿಗೆ ಪಾವಿತ್ರ್ಯದ ಸ್ಥಾನ ನೀಡಿ ಅದರ ರಕ್ಷಣೆಯ ಹೆಸರಲ್ಲಿ ಗಲಭೆ ಸೃಷ್ಟಿಸಲಿಲ್ಲ. ಆರೆಸ್ಸೆಸ್ ಈ ಕೆಲಸವನ್ನು ವ್ಯಾಪಕವಾಗಿ ಮಾಡುತ್ತಿದೆ.

ಇಖ್ವಾನ್ ಸಕಲ ಮಾನವರನ್ನು ಒಂದೇ ಎಂದು ಭಾವಿಸಿ ಅವರ ಸೇವೆಗೈಯುತ್ತಿದೆ. ಅದು ಮಾನವರ ಮತ್ತು ಸಕಲ ಪ್ರಪಂಚದ ಸೃಷ್ಟಿಕರ್ತನನ್ನು ಆರಾಧಿಸುತ್ತದೆ. ಜನರನ್ನು ಅದರೆಡೆಗೆ ಆಹ್ವಾನಿಸುತ್ತದೆ. ಆದರೆ ಆರೆಸ್ಸೆಸ್‍ನ ಬಳಿ ಅಂತಹ ಯಾವ ಕಾರ್ಯಕ್ರಮವೂ ಇಲ್ಲ. ಅದು ಕೆಲವರನ್ನು ಪವಿತ್ರರೆಂದೂ ಹೆಚ್ಚಿನವರನ್ನು ನಿಕೃಷ್ಟರೆಂದೂ ಭಾವಿಸುತ್ತದೆ. ಅದುವೇ ಅದರ ರಾಜಕೀಯವಾಗಿದೆ. ಆರೆಸ್ಸೆಸ್ ಭೂಮಿಯ ಒಂದು ಪ್ರದೇಶವನ್ನು ಪೂಜನೀಯವೆಂದು ಭಾವಿಸುತ್ತದೆ. ಇಖ್ವಾನ್ ಈ ಭೂಮಿಯನ್ನು ದೇವನ ಸೃಷ್ಟಿಯೆಂದು ಭಾವಿಸಿ ಅದರ ಸೇವೆಗೈಯುತ್ತಿದೆ.

ಮುಸ್ಲಿಮ್ ಸಂಘಟನೆಗಳು ಮತ್ತು ವ್ಯಕ್ತಿತ್ವಗಳ ಕುರಿತು ಜನರು ಸಾಮಾನ್ಯವಾಗಿ ಅಜ್ಞರಾಗಿರುತ್ತಾರೆ. ಅಪನಂಬಿಕೆಯಲ್ಲಿ ಸಿಲುಕಿರುತ್ತಾರೆ. ಅದು ದೇಶೀಯ ವಾಗಲಿ, ಅಂತಾರಾಷ್ಟ್ರೀಯವಾಗಲಿ. ಅದಕ್ಕೆ ಕಾರಣ ಅವರ ಅಜ್ಞಾನವಾಗಿರುತ್ತದೆ. ಕೆಲವು ಅಪ ಪ್ರಚಾರವಾಗಿದೆ. ಈ ಅಪಪ್ರಚಾರವನ್ನು ಯೋಜನಾ ಬದ್ಧವಾಗಿ ನಿರಂತರ ಮಾಡಲಾಗುತ್ತದೆ. ಆಧುನಿಕ ಮಾಧ್ಯಮಗಳ ಆಗಮನದಿಂದ ಇದು ಬಹಳ ಹೆಚ್ಚಾಗಿದೆ. ಮಾತ್ರವಲ್ಲ ಕೆಲವು ಮುಸಲ್ಮಾನರೂ ಈ ಅಪಪ್ರಚಾರಕ್ಕೆ ಬಲಿಯಾಗಿದ್ದಾರೆ. ಕೆಲವು ಶ್ರೀಮಂತ ರಾಷ್ಟ್ರಗಳು ಇಖ್ವಾನನ್ನು ನಿಷೇಧಿಸಿವೆ.

ಅಮಾಯಕ ಮುಸಲ್ಮಾನರಿಗೆ ಅಷ್ಟೇ ಸಾಕು. ಕೆಲವು ಸುಶಿಕ್ಷಿತರು, ವಾಗ್ಮಿಗಳು ಭಾಷಣಕರ್ತರೂ ಮುಸ್ಲಿಮ್ ಸಂಘಟನೆಗಳ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಇದರಿಂದಲೂ ವಿರೋಧಿಗಳ ಧೈರ್ಯ ಹೆಚ್ಚುತ್ತದೆ. ಒಂದು ದೊಡ್ಡ ಕೊರತೆ ನಮ್ಮದೂ ಇದೆ. ನಾವು ದೇಶವಾಸಿಗಳಿಗೆ ಇಸ್ಲಾಮ್ ಮತ್ತು ಇಸ್ಲಾಮೀ ಜಗತ್ತಿನ ಕುರಿತು ಮಾಹಿತಿ ನೀಡುವುದಿಲ್ಲ.

ಕಾಂಗ್ರೆಸ್‍ನಲ್ಲಿರುವ ಕೆಲವು ಮುಸಲ್ಮಾನರು ರಾಹುಲ್ ಗಾಂಧಿಗೆ ಇಸ್ಲಾಮೀ ಸಂಘಟನೆಗಳ ವಾಸ್ತವಿಕತೆಗಳ ಕುರಿತು ಮಾಹಿತಿ ನೀಡಿ ಅವರ ಪ್ರತಿಕ್ರಿಯೆ ನೋಡಿದರೆ ಒಳ್ಳೆಯದಲ್ಲವೇ. ಸತ್ಯ ಹೊರಬಂದ ಬಳಿಕ ಅವರು ಹೊಣೆಗಾರಿಕೆಯಿಂದ ಮಾತಾಡಬಹುದೆಂದು ನಿರೀಕ್ಷಿಸಬಹುದು. ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಮುಸಲ್ಮಾನರು ಕೂಡಾ ತಮ್ಮ ಹೊಣೆಗಾರಿಕೆಯನ್ನು ಅರಿಯುವುದು ಉತ್ತಮ.

ಕೃಪೆ: ದಅ್ ವತ್