ಸನ್ಮಾರ್ಗ ವಾರ್ತೆ
ಕೇರಳ, ಮಾ. 3: ಅಜ್ಜಿಗೆ ಹೊಡೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು 41 ವರ್ಷದ ಮೊಮ್ಮಗನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೆಲಪ್ಪನ್ ಎಂಬವರ ಪತ್ನಿ ರತ್ನಮ್ಮ (87) ಎಂಬವರಿಗೆ ಹೊಡೆಯುತ್ತಿರುವ ದೃಶ್ಯ ನಿನ್ನೆ ಬೆಳಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವೀಡಿಯೊ ನೋಡಿದ ಮಾವೇಲಿಕರ ಠಾಣೆಯ ಎಸ್ಐ ಸಾಬು ಜಾರ್ಜ್ ತಂಡದೊಂದಿಗೆ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಮೊಮ್ಮಗ ಶ್ರೀಕುಮಾರ (41) ತನಗೆ ಹೊಡೆದಿದ್ದರೂ ತಾನು ದೂರುವುದಿಲ್ಲ ಎಂದು ರತ್ನಮ್ಮ ಹೇಳಿದರು.
ಸ್ಥಳೀಯವಾಗಿ ಪೊಲೀಸರು ವಿವರ ಸಂಗ್ರಹಿಸಿ ಊರವರ ಸಾಕ್ಷ್ಯದ ಆಧಾರದಲ್ಲಿ ರತ್ಮಮ್ಮನ ಪುತ್ರಿ ಶ್ಯಾಮಲಾಳ ಪುತ್ರ ಶ್ರೀಕುಮಾರನ ವಿರುದ್ಧ ಕೇಸು ದಾಖಲಿಸಿದ್ದಾರೆ. ಈತ ತಲೆ ತಪ್ಪಿಸಿಕೊಂಡಿದ್ದಾನೆ. ಜಾತ್ರೆಗೆ ಹೋಗಲು 500 ರೂಪಾಯಿ ಕೊಡದ್ದಕ್ಕೆ ರತ್ಮಮ್ಮರನ್ನು ಶ್ರೀಕುಮಾರ್ ಹೊಡೆದಿದ್ದ. ಶ್ರೀಕುಮಾರ್ ವೆಲ್ಡಿಂಗ್ ಕೆಲಸ ಮಾಡುತ್ತಾನೆ. ಜೊತೆಗೆ ಅಜ್ಜಿಯನ್ನು ನಿರಂತರ ಹೊಡೆಯುತ್ತಾನೆ ಎಂದು ನೆರೆಯ ನಿವಾಸಿಗಳು ತಿಳಿಸಿದ್ದಾರೆ.












