ಲಾಸ್ ಏಂಜೆಲ್ಸ್ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಪುನಃ ಜೆಟ್ ಮ್ಯಾನ್ ಹಾರಾಟ: ವಿಮಾನಗಳಿಗೆ ಎಚ್ಚರಿಕೆ ಸಂದೇಶ

0
570

ಸನ್ಮಾರ್ಗ ವಾರ್ತೆ

ಕ್ಯಾಲಿಫೋರ್ನಿಯ,ಅ.16: ಅಮೆರಿಕದ ಲಾಸ್ ಏಂಜೆಲ್ಸ್ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಪುನಃ ಜೆಟ್ ಮ್ಯಾನ್ ಕಾಣಿಸಿಕೊಂಡಿದ್ದಾನೆ. ಹಾರುವ ಉಪಕರಣಗಳೊಂದಿಗೆ ಜೆಟ್ ಪ್ಯಾಕ್ ಉಪಯೋಗಿಸಿ 6500 ಅಡಿ ಎತ್ತರದಲ್ಲಿ ಕಂಡು ಬಂದಿದ್ದಾನೆ. ಇದಾದ ನಂತರ ವಿಮಾನಗಳಿಗೆ ಮುನ್ನೆಚ್ಚರಿಕೆಯನ್ನು ರವಾನಿಸಲಾಗಿದೆ. ಎರಡು ತಿಂಗಳ ಹಿಂದೆ ಇಂತಹ ಮನುಷ್ಯನನ್ನು ಪೈಲಟ್‍ಗಳು ನೋಡಿದ್ದರು.

ಚೈನ ಏರ್‍ಲೆನ್ಸ್‍ನ ವಿಮಾನದಲ್ಲಿದ್ದವರು ಹಾರುವ ಜೆಟ್‍ಪ್ಯಾಕಿನಲ್ಲಿ ವ್ಯಕ್ತಿಯನ್ನು ನೋಡಿದ್ದಾರೆ. ನಂತರ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲಿನಿಂದ ವಿಮಾನಗಳಿಗೆ ಎಚ್ಚರದಲ್ಲಿರುವಂತೆ ಸಂದೇಶ ರವಾನಿಸಲಾಗಿದೆ.ವಿಮಾನ ಹಾರುವ ಮಾರ್ಗದಲ್ಲಿ ಹಾರುವ ಮನುಷ್ಯ ಕಂಡು ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತಂತೆ ತನಿಖೆಗೆ ಫೆಡರಲ್ ಏವಿಯೇಶನ್ ಅಡ್ಮಿಸ್ಟ್ರೇಶನ್ ಆದೇಶ ಹೊರಡಿಸಿದೆ. ಎಫ್‍ಬಿಐ ಕೂಡ ತನಿಖೆ ಆರಂಭಿಸಿದೆ. ಎರಡು ತಿಂಗಳ ಹಿಂದೆ 3000 ಸಾವಿರ ಅಡಿ ಎತ್ತರದಲ್ಲಿ ವಿಮಾನಗಳ ಜೊತೆ ಹಾರುವ ಮನುಷ್ಯನ್ನು ನೋಡಿದ್ದೇವೆ ಎಂದು ವಿಮಾನದ ಪೈಲಟ್‍ಗಳು ತಿಳಿಸಿದ್ದರು. ಮನುಷ್ಯ ಹಾರಲು ಸಹಾಯಕವಾದ ಸಲಕರಣೆಗಳೊಂದಿಗೆ ಮನುಷ್ಯ ಹಾರಾಡುತ್ತಿರುವುದನ್ನು ಎರಡು ವಿಮಾನಗಳ ಪೈಲಟ್‍ಗಳು ನೋಡಿದ್ದಾರೆ.

ಜೆಟ್ ಪ್ಯಾಕ್ ಎಂದರೆ ಮನುಷ್ಯನಿಗೆ ಹಾರಲು ನೆರವಾಗುವ ಉಪಕರಣವಾಗಿದೆ. ಮನುಷ್ಯನ ಭಾರ ಮತ್ತು ಆಕಾರವನ್ನು ಪರಿಗಣಿಸಿದರೆ ವಿಮಾನಗಳಿಗೆ ಢಿಕ್ಕಿ ಹೊಡೆದರೆ ದೊಡ್ಡ ದುರಂತ ಸಂಭವಿಸಬಹುದು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ಧಾರೆ. ಡ್ರೋನ್, ಜೆಟ್‍ಪ್ಯಾಕ್ ಅನ್ನು ಜನರು ಜವಾಬ್ದಾರಿಯಿಂದ ಉಪಯೋಗಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.