2 ಗಂಟೆಗಳ ಕಾಲ ರೈಲ್ವೆ ನಿಲ್ದಾಣದ ಮೇಲೆ ನಿಯಂತ್ರಣ ಸಾಧಿಸಿದ ಮಾವೋವಾದಿಗಳು

0
582

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಹಾರದ ರೈಲ್ವೆ ನಿಲ್ದಾಣ ನಿಯಂತ್ರಣ ಸಾಧಿಸಿದ ಮಾವೋವಾದಿಗಳಿಂದಾಗಿ ಶನಿವಾರ ಬೆಳಗ್ಗೆ ಜಾಮು ಜಿಲ್ಲೆಯ ಚೌರ ರೈಲ್ವೆ ನಿಲ್ದಾಣ ಅವರ ನಿಯಂತ್ರಣಕ್ಕೊಳಗಾಯಿತು. ನಂತರ ದಿಲ್ಲಿ -ಹೌರಾ ಮುಖ್ಯ ಮಾರ್ಗದಲ್ಲಿ ರೈಲುಗಳು ಎರಡು ಗಂಟೆ ತಡವಾಗಿ ಚಲಿಸಿವೆ. ಬಿಹಾರದಲ್ಲಿ ಒಂದು ವಾರದ ಬಂದ್‍ಗೆ ಮಾವೋವಾದಿಗಳು ಕರೆ ನೀಡಿದ್ದರು. ಇದರ ಭಾಗವಾಗಿ ರೈಲ್ವೆ ನಿಲ್ದಾಣ ಅವರ ನಿಯಂತ್ರಣಕೊಳಗಾಗಿತ್ತು.

ನಿಲ್ದಾಣಕ್ಕೆ ಪ್ರವೇಶಿಸುವ ಮೊದಲೇ ಮಾವೋವಾದಿಗಳು ಕಟ್ಟಡವನ್ನು ಸುತ್ತುವರಿದರು. ನಂತರ ಸ್ಟೇಶನ್ ಮಾಸ್ಟರ್ ಬಿನಯ್ ಕುಮಾರ್ ಕಚೇರಿಗೆ ಬಂದು ಕೆಂಪು ಸಿಗ್ನಲ್ ತೋರಿಸಿ ರೈಲುಗಳನ್ನು ತಡೆಯಲು ಹೇಳಿದರು. ಇಲ್ಲದಿದ್ರೆ ಬಾಂಬಿನಿಂದ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರು.

ರೈಲ್ವೆ ನಿಲ್ದಾಣ ನಿಯಂತ್ರಣ ಮಾವೋವಾದಿಗಳ ಕೈಯಲ್ಲಾದ ಮೇಲೆ ಸ್ಟೇಶನ್ ಮಾಸ್ಟರ್ ಉನ್ನತ ಅಧಿಕಾರಿಗಳಿಗೆ ಸಂದೇಶ ರವಾನಿಸಿದರು. ನಿಲ್ದಾಣದಲ್ಲಿದ್ದ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕುಳಿತಿರುವಂತೆ ಮಾವೋವಾದಿಗಳು ಹೇಳಿದರು. ನಂತರ ಪ್ಯಾರಮಿಲಿಟರಿ ಘಟನಾಸ್ಥಳಕ್ಕೆ ಬರುವಷ್ಟರಲ್ಲಿ ಮಾವೋವಾದಿಗಳು ಸ್ಥಳದಿಂದ ಪರಾರಿಯಾದರು.

ಮಾವೋವಾದಿಗಳು ನಿಲ್ದಾಣ ವಶಕ್ಕೆ ಪಡೆದ ಕಾರಣ ಬೆಳಗ್ಗೆ 3:20ರಿಂದ 5:30ರವರೆಗಿನ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ನಂತರ ರೈಲು ಹಳಿಗಳಲ್ಲಿ ಸ್ಫೋಟಕ ವಸ್ತುಗಳಿವೆಯೇ ಎಂದು ಪರಿಶೀಲಿಸಿದ ಬಳಿಕ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.