ಅಫ್ಘಾನ್: ವಿಶ್ವಸಂಸ್ಥೆ ಕಚೇರಿಯ ಮೇಲೆ ತಾಲಿಬಾನ್ ದಾಳಿ; ಸುರಕ್ಷಾಧಿಕಾರಿ ಹತ್ಯೆ

0
4136

ಸನ್ಮಾರ್ಗ ವಾರ್ತೆ

ಕಾಬೂಲ್: ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಕಚೇರಿಯ ಮೇಲೆ ತಾಲಿಬಾನಿಗಳು ದಾಳಿ ಮಾಡಿದ ಪರಿಣಾಮ ಸುರಕ್ಷಾ ಅಧಿಕಾರಿಯೊಬ್ಬರು ಕೊಲ್ಲಲ್ಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿಯ ಪಶ್ಚಿಮ ಪ್ರಾಂತ್ಯ ಹೆರಾತ್‍ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಪ್ರವೇಶ ದ್ವಾರದ ಮೇಲೆ ಗ್ರೆನೇಡ್ ದಾಳಿ ಮತ್ತು ಗುಂಡು ಹಾರಟ ನಡೆಯಿತು. ಕಳೆದ ದಿವಸ ಹೆರಾತ್ ನಗರಕ್ಕೆ ತಾಲಿಬಾನ್ ನುಗ್ಗಿತ್ತು ಮತ್ತು ದಾಳಿ ನಡೆಸಿತ್ತು. ಇದರ ನಂತರ ವಿಶ್ವಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆದಿದ್ದು ಘಟನೆಯಲ್ಲಿ ವಿಶ್ವಸಂಸ್ಥೆಯ ಇತರ ಅಧಿಕಾರಿಗಳಿಗೆ ಸುರಕ್ಷಿತರಾಗಿದ್ದರೆ. ಘಟನೆಯನ್ನು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದ ಪ್ರತಿನಿಧಿ ಎಬೊರ ಲಿಯೊನಸ್ ಖಂಡಿಸಿದ್ದಾರೆ. ಆರೋಪಿಗಳನ್ನು ಕಾನೂನಿನ ಮುಂದೆ ತರಬೇಕೆಂದು ವಿಶ್ವಸಂಸ್ಥೆ ಪ್ರತಿನಿಧಿ ಹೇಳಿದರು.