ಮೀಟೂ: ಲೈಂಗಿಕಾತಿರೇಕಗಳನ್ನು ಬಹಿರಂಗಪಡಿಸಿದ ಅಭಿಯಾನ

0
1269

ಮನುಷ್ಯ ಜೀವನದಲ್ಲಿ ಅತ್ಯಂತ ಹೇಯ ಸ್ಥಿತಿ ಸ್ವಚ್ಛಂಧ ವರ್ತನೆ. ಅದರಲ್ಲೂ ಲೈಂಗಿಕ ಸ್ವಚ್ಛಂದತೆ ಮನುಷ್ಯ ಎಷ್ಟು ಕೆಳಮಟ್ಟಕ್ಕಿಳಿಯಬ ಲ್ಲನೆಂಬುದನ್ನು ಮತ್ತು ಅನೈತಿಕ, ವಿಕೃತ ಮನೋಭಾವವಾಗಿದೆ ಎನ್ನುವುದನ್ನು ಸಹ ಮೀಟೂ ಮೂಲಕ ದೊಡ್ಡ ಕುಳಗಳು, ಗಣ್ಯಾತಿಗಣ್ಯರು ಬಟಾ ಬಯಲಾಗುತ್ತಿರುವ ಈ ದಿನಗಳಲ್ಲಿ ತೋರಿಸಿಕೊಡು ತ್ತಿದೆ. ಸಚಿವ, ಎಂಜೆ ಅಕ್ಬರ್, ನಟ ನಾನಾ ಪಾಟೇಕರ್, ನಿರ್ದೇಶನ ಸುಭಾಶ್ ಕಪೂರ್, ನಿರ್ದೇಶಕ ಅಗ್ನಿಹೋತ್ರಿ ಹೀಗೆ ಇಂಥವರೆಲ್ಲ ಕ್ಷೇತ್ರಗಳಲ್ಲಿಯೂ ಬೇಲಿಯೇ ಹೊಲವನ್ನು ಮೇಯ್ದ ಕತೆ ಬಹಿರಂಗವಾಗುತ್ತಿದೆ.

ನಟ ನಾನಾ ಪಟೇಕರ್ ವಿರುದ್ಧ ತನುಶ್ರೀದತ್ತ ಆರೋಪಕ್ಕಿಂತ ತೀವ್ರವಾಗಿ ವಿದೇಶ ಸಹ ಸಚಿವ ಎಂಜೆ ಅಕ್ಬರ್ ರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕಾಡುತ್ತದೆ. ಈ ವ್ಯಕ್ತಿ ಸಮಾಜಕ್ಕೆ ಕನ್ನಡಿ ಹಿಡಿದು ಸರಕಾರದ ಹುಳುಕುಗಳನ್ನೆತ್ತಿ ಇಡೀ ಜನಸಾಮಾನ್ಯರಿಗೆ ರಕ್ಷಣೆ ಗಿರುವ ಮಾಧ್ಯಮ ರಂಗದಲ್ಲಿ ಕೂತು ತೋರಿಸಿದ್ದು ಹೆಣ್ಣು ಬಾಕತನ ಅಂದರೆ ಎಂಥವರೂ ಹೇಸಿಗೆ ಪಡಬೇಕಾಗುತ್ತದೆ.

ಹಾಲಿವುಡ್‍ನಲ್ಲಿ ಆರಂಭವಾದ ಮೀಟೂ ಭಾರತದಲ್ಲಿ ಬಾಲಿವುಡ್, ರಾಜಕೀಯ, ಸಾಮಾಜಿಕ, ಕ್ರೀಡಾಲೋಕವನ್ನೂ ಸುತ್ತುವರಿದಿದೆ. ಶ್ರೀಲಂಕಾದ ಕ್ರಿಕೆಟರ್ ಮಾಲಿಂಗ ವಿರುದ್ಧ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ಗಾಯಕಿಯೊಬ್ಬರು ಆರೋಪ ಹೊರಿಸಿದ್ದಾರೆ. ಶ್ರೀಲಂಕಾದ ಮಾಜಿ ಕ್ರಿಕೆಟರ್ ಮತ್ತು ಈಗಿನ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗಾ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಇದೆ. ಅಂತೂ ದೊಡ್ಡ ದೊಡ್ಡ ವರು ಇಷ್ಟು ಸಣ್ಣತನಕ್ಕೆ ಇಳಿದಿದ್ದಾರಾ… ಎನ್ನುವಷ್ಟು ವಿಶ್ವವನ್ನೇ ಮೀಟೂ ಅಭಿಯಾನ ಚಕಿತಗೊಳಿಸುತ್ತಿದೆ. ಕೇವಲ ಟ್ರಂಪ್ ಒಬ್ಬರೇ ಅಲ್ಲ. ಅವರಂತೆ ಆರೋಪ ಹೊರಿಸಬೇಕಾದ ಹಲವು ಗಣ್ಯರ ಸಾಲೇ ಇದೆ ಎಂದಾಯಿತು.

ಅಕ್ಬರ್ ಲೈಂಗಿಕ ಅತಿಕ್ರಮತೆಯ ಬಗ್ಗೆ ಮಿಂಟ್ ಪತ್ರಿಕೆಯ ಪ್ರಿಯಾ ರಮಣಿ ಬಹಳ ವರ್ಷಗಳ ಹಿಂದಿನ ಅನುಭವವನ್ನು ಟ್ವಿಟರ್‍ನಲ್ಲಿ ಲೇಖನ ಬರೆದು ಬಹಿರಂಗಪಡಿಸಿದರು. ಅವರ ಪತ್ರಿಕಾ ಜೀವನದ ಆರಂಭದ ದಿನಗಳಲ್ಲಿ ಅಕ್ಬರ್ ಛೇಂಬರ್‍ಗೆ ಕರೆದು ಲೈಂಗಿಕಾತಿರೇಕಕ್ಕೆ ಯತ್ನಿಸಿದರು ಎನ್ನುತ್ತಾರೆ. ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡೆ ಎಂದು ರಮಣಿ ಬರೆದರು. ಒಬ್ಬ ಸಚಿವನ ಮೇಲೆ ನೇರಾತಿನೇರ ಆರೋಪ ಬಂದ ಬಳಿಕವೂ ಅವರನ್ನು ಅನುಭವಿಸುತ್ತಿರುವ ಪಕ್ಷವೊಂದು ಮುಖಮೂತಿ ನೋಡದೆ ಕ್ರಮ ಜರಗಿಸಬೇಕಿತ್ತು. ಆದರೆ ಅದು ಯಾಕೋ ತಡ ವಾಗುತ್ತಿದೆ. ಅಥವಾ ಕ್ರಮ ಜರಗಿಸದಿರಲೂಬಹುದು.

ಆದರೆ ಅಕ್ಬರ್ ಕುರಿತು ಇಂಥ ಸಾಧ್ಯತೆಗಳಿಲ್ಲ ಎಂದು ಬಿಜೆಪಿಗೆ ಸಂಬಂಧಿಸಿದ ಜನರ ಪ್ರತಿಕ್ರಿಯೆಗಳಿಂದ ಮತ್ತು ಮೀಟೂವನ್ನು ಆರೆಸ್ಸೆಸ್ ಬೆಂಬಲಿಸುತ್ತಿರುವುದರಿಂದ ಧೈರ್ಯ ಪಡಬಹುದು ಅನಿಸುತ್ತದೆ. ಎಂಜೆ ಅಕ್ಬರ್ ವಿರುದ್ಧ ಪ್ರಿಯಾ ರಮಣಿ ಆರೋಪ ಹೊರಿಸಿದ ನಂತರ ಒಬ್ಬರ ನಂತರ ಒಬ್ಬರಂತೆ ಅಕ್ಬರ್ ಕಚ್ಚೆ ಹರುಕುತನವನ್ನು ಬಹಿರಂಗಪಡಿಸುತ್ತಲೇ ಇದ್ದಾರೆ. ಇಂಥ ಮನುಷ್ಯ ರನ್ನು ಸಚಿವರಾಗಿ ಈ ದೇಶ ಇನ್ನೂ ಸಹಿಸಬೇಕಾ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಾಲವೇ ನೀಡಬಹುದು.

ನಾನಾ ಪಾಟೇಕರ್ ತಾನು ಯಾವಾಗ ಹಾಗೆ ಮಾಡಿದೆ ಎಂದು ಮುಗ್ಧವಾಗಿ ಕೇಳುತ್ತಾರೆ. ತನುಶ್ರೀ ದತ್ತಾರ ಆರೋಪವನ್ನು ನಾನಾ ಪಟೇಕರ್ ನಿರಾಕರಿಸುತ್ತಾರೆ. ಇವರಿಗೆ ಹೋಲಿಸಿದರೆ ಎಂಜೆ ಅಕ್ಬರ್- ಹೌದು, ಅವರ ಒಪ್ಪಿಗೆಯಿಂದ ಹಾಗೆ ಮಾಡಿದ್ದೇನೆ ಎಂಬ ಹುಂಬ ಧೈರ್ಯ ದಲ್ಲಿ ಮಾತಾಡಿದ್ದಾರೆ. ಆದರೆ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಸಮ್ಮತಿಯಿದ್ದರೆ ಕಚ್ಚೆಹರಕುತನ ಪ್ರದರ್ಶಿಸಬಹುದೇ? ಅಂತಹದ್ದನ್ನು ಈ ಸಮಾಜ ಅಪರಾಧ ವೆಂದು ಕರೆದಿಲ್ಲವೇ. ತಾನು ತಪ್ಪಾಗಿ ಬಳಸುವಂಥ ಮಹಿಳೆಯ ಭವಿಷ್ಯಕ್ಕೆ ಕತ್ತಲು ಕವಿಯುತ್ತದೆ ಎಂಬ ವಾಸ್ತವ ಪತ್ರಕರ್ತರಂತಹ ಜವಾಬ್ದಾರ ಸ್ಥಾನ ದಲ್ಲಿರುವವರು ಮತ್ತು ಈಗ ಸಚಿವ ರಾದವರಲ್ಲಿ ಪ್ರಜ್ಞೆ ಇರಬೇಕಾಗಿತ್ತಲ್ಲವೇ?

ನಾನಾ ಪಾಟೇಕರ್ ಅಂತಹವರಲ್ಲ, ತನುಶ್ರೀಯದ್ದು ಸುಳ್ಳಾರೋಪ ಎಂದು ಕೆಲವು ನಟಿಮಣಿಯರೇ ಕೂಗುವುದು ಕೇಳಿಸುತ್ತಿದೆ. ನಡೆದಿದೆ ಎನ್ನುವುದು ತನಗೆ ಗೊತ್ತಿಲ್ಲ ಸಲ್ಮಾನ್ ಖಾನ್ ಎಂದು ಪಾಟೇಕರ್ ನೆರವಿಗೆ ನಿಂತಂತೆ ಕಂಡು ಬಂದರು. ಆದರೆ ನಾನಾ ಪಟೇಕರ್ ವಿರುದ್ಧ ಎಫ್‍ಐಆರ್ ದಾಖ ಲಾಗಿದ್ದು ಇನ್ನು ಯಾರು ಎಂತಹ ವರೋ ಅದನ್ನು ನ್ಯಾಯಾಲಯ ತೀರ್ಮಾನಿಸಬಹುದು.

ಮಹಿಳೆಯನ್ನು ದುರುಗುಟ್ಟಿದರೂ ಶಿಕ್ಷಿಸುವ ಕಾನೂನು ಇಲ್ಲಿದೆ. ಪುರುಷನ ಬಲಿಷ್ಠ ಕೈಗಳಿಂದ ಮಹಿಳೆಗೆ ತಪ್ಪಿಸಿ ಕೊಳ್ಳಲು ಆಗದಿದ್ದರೆ, ಆತ ಅವಳ ಕೆರಿ ಯರ್ ಮೇಲೆ ಹಾನಿ ಮಾಡುವುದಕ್ಕೆ ಹೆದರಿ, ಆತನಾಡಿಸಿದಂತೆ ಅವಳು ಕೇಳಿ ದರೆ ಅದು ಕಾನೂನಿನ ದೃಷ್ಟಿಯಲ್ಲಿ, ಸಮಾಜದ ದೃಷ್ಟಿಯಲ್ಲಿ ಸಮ್ಮತಿ ಆಗುವು ದಿಲ್ಲ. ಬಹುತೇಕ ಇಂದು ಮೀಟೂ ಮೂಲಕ ತಮ್ಮ ಕೆಟ್ಟ ಅನುಭವಗಳನ್ನು ಬಹಿರಂಗಪಡಿಸುತ್ತಿರುವುದು ಅಂದು ನಾವೆಲ್ಲ ಬಲಿಪಶುಗಳು, ನಾವು, ಶೋಕಿ ಗಿರಿಯರಾಗಿರಲಿಲ್ಲ ಎನ್ನುವುದನ್ನು ಎತ್ತಿ ಹಿಡಿದಿದ್ದಾರೆ ಅನಿಸುತ್ತದೆ. ಹೀಗಾಗಿ ಅಕ್ಬರ್ ರ ಸಮ್ಮತಿ ಸೆಕ್ಸ್ ಎನ್ನುವ ವಾದಕ್ಕೆ ಅರ್ಥವಿಲ್ಲ. ಅವರು ಅಂತಹ ಇನ್ನೊಂದು ಸುಳ್ಳಾಡಿದ್ದಕ್ಕೂ ಶಿಕ್ಷಿಸಲ್ಪಡಬೇಕು. ಭಾರತ ದಲ್ಲಿ ತಪ್ಪಾದ ರೀತಿಯಲ್ಲಿ ಸ್ಪರ್ಶಿಸಿ ದರೂ 5 ವರ್ಷದ ವರೆಗೆ ಜೈಲು ಶಿಕ್ಷೆಯಾಗುವ ಕಾನೂನು ಇದೆ. ಕೆಲವು ಸಂದರ್ಭದಲ್ಲಿ ಏಳು ವರ್ಷಗಳ ವರೆಗೂ ಶಿಕ್ಷೆಯಾಗ ಬಹುದು.

ಹಾಲಿವುಡ್ ನಂತರ ಮೀಟೂ ಅಭಿ ಯಾನ ಭಾರತಕ್ಕೆ ಪ್ರವಾಹದಂತೆ ಬಂದೆರಗಿದ್ದು ಇದರಿಂದಾಗಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಆರೋಪಿಗಳ ಕಟಕಟೆ ಯಲ್ಲಿ ನಿಲ್ಲುವಂತಾಗಿದೆ. ನಾನಾ ಪಟೇಕರ್-ತನುಶ್ರೀ ದತ್ತಾರ ನಡುವಿನ ವಿವಾದದೊಂದಿಗೆ ಶುರುವಾದ ಮೀಟೂ ಅಭಿಯಾನ ಈಗ ತೀವ್ರಗತಿ ಯನ್ನು ಪಡೆದುಕೊಂಡಿದೆ. ಆದರೆ, ಭಾರತದಲ್ಲಿ ಯಾವುದೇ ಮಹಿಳೆ ಯಾವುದೇ ರೀತಿಯ ಕಿರುಕುಳಕ್ಕೊಳಗಾದರೆ ಭಾರತ ದಲ್ಲಿ ಕಾನೂನಿನ ಸಹಾಯ ಪಡೆಯಲು ಅವಕಾಶ ಇದೆ. 1977ರಲ್ಲಿ ಸುಪ್ರೀಂ ಕೋರ್ಟು ಇದಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿಯನ್ನು ತಂದಿತ್ತು.

2013ರಲ್ಲಿ ಪ್ರಿವೆನ್ಶನ್ ಆಫ್ ಸೆಕ್ಷುವಲ್ ಹಾರ್ಸ್‍ಮೆಂಟ್ ಆಫ್ ವಿಮೆನ್ ಎಟ್ ವರ್ಕ್ ಪ್ಲೇಸ್ ಆಕ್ಟ್ ಜಾರಿಗೆ ಬಂತು. 2013ರ ಕ್ರಿಮಿನಲ್ ಕಾನೂನು ತಿದ್ದುಪಡಿ ಅಧಿನಿಯಮದ ಪ್ರಕಾರ ಸೆಕ್ಷುವಲ್ ಹಾರಾಸ್‍ಮೆಂಟ್‍ಗೆ ಬೇರೆ ಬೇರೆ ರೀತಿಯ ಶಿಕ್ಷೆಗಳು ಆಗಬಹುದಾಗಿದೆ.
ಇಷ್ಟೆಲ್ಲ ಕಾನೂನುಗಳಿದ್ದೂ ಅಧಿ ಕಾರ, ತೋಳ್ಬಲ ಇರುವವರು ಎದುರಿಗೆ ಸಿಕ್ಕ ಮಹಿಳೆಯರನ್ನು ಬಕ ಪಕ್ಷಿ ಮೀನನ್ನು ನುಂಗುವಂತೆ ತಿಂದು ತೇಗಿ ದ್ದಾರೆಂದರೆ ಏನರ್ಥ? ಇಂತಹವರನ್ನು ಪ್ರತಿನಿಧಿಸುವ ಲೈಂಗಿಕತೆ ಇಷ್ಟು ಕೀಳ್ಮಟ್ಟಕ್ಕೆ ಅಂದರೆ ಪ್ರಾಣಿಗಿಂತಲೂ ಕೀಳ್ಮಟ್ಟಕ್ಕೆ ಹೊರಳಿತೇ!

ಹೀಗೆಲ್ಲ ವರ್ತಿಸಿದಾಗಲೆಲ್ಲ ತಮ್ಮ ಅಧಿಕಾರ ಬಲದಲ್ಲಿ ಯಾರನ್ನೂ ಏನೇ ಮಾಡಿದರೂ ನಡೆಯುತ್ತೆ ಎನ್ನುವ ಬಲ ವಾದ ಧೈರ್ಯ ಇವರಲ್ಲಿತ್ತು. ಬಹುಶಃ ಹೆಣ್ಣುಮಕ್ಕಳನ್ನು ಬಲಿಪಶು ಮಾಡುವಾಗ ಮೀಟೂ ಎಂಬಂತಹ ಅಭಿಯಾನ ಮುಂದೊಂದು ದಿನ ಬರಬಹುದು, ತಮ್ಮಿಂದ ದಾಳಿಗೀಡಾದ ಅದೇ ಹೆಣ್ಣು ಮಕ್ಕಳ ದೆಸೆಯಿಂದ ಸಮಾಜದ ನಡುವೆ ನಾವು ಅವಮಾನಪಡಲಿಕ್ಕಿದ್ದೇವೆ ಎಂದು ಅವರು ಊಹಿಸಿರಲಾರರು. ಆದರೆ ಕಾಲ ಚಕ್ರ ತಿರುಗುತ್ತದೆ, ಉಪ್ಪು ತಿಂದವನು ನೀರು ಕುಡಿಯಲೇ ಬೇಕಾಗುತ್ತದೆ ಎನ್ನು ವುದನ್ನು ಒಂದು ಕಾಲದಲ್ಲಿ ಮೂಕ ರೋದನ ಅನುಭವಿಸಿದವರೆಲ್ಲ ಈ ಪ್ರತಿ ಷ್ಠಿತರಿಗೆ ಮೀಟೂ ಮೂಲಕ ನೆನಪಿಸಿ ಕೊಡುತ್ತಿದ್ದಾರೆ. ನಿರ್ದೇಶಕ ಸುಭಾಶ್ ವಿರುದ್ಧ ಆರೋಪ ಹೊರಿಸಿದ ನಟಿ ಅವರ ಪತ್ನಿಯ ಮುಂದೆಯೇ ಕಪಾಳ ಮೋಕ್ಷ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

ಮನುಷ್ಯನಿಗೆ ಚಾರಿತ್ರ್ಯ ಮುಖ್ಯ. ಅದಿಲ್ಲದ ವ್ಯಕ್ತಿಯನ್ನು ಜಗತ್ತು ಎಂದು ಒಳ್ಳೆಯವನೆಂದು ಕಂಡದ್ದಿಲ್ಲ. ಪಚೌರಿ ಯಂತಹ ವಿಜ್ಞಾನಿಗಳು ಕೂಡ ಎಷ್ಟೇ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಹೆಣ್ಣಿನ ಶೋಕಿಯ ಆರೋಪದಿಂದಾಗಿ ಇಂದು ಅವಮಾನಿತರಾಗಿದ್ದಾರೆ. ಹೌದು, ಎಲ್ಲ ಸಾಧನೆಗಳನ್ನು ಈ ವಿಷಯಾಸಕ್ತಿ ಒಂದಲ್ಲ ಒಂದು ದಿನ ಅಳಿಸಿಯೇ ಹಾಕು ತ್ತದೆ.

ಹೆಣ್ಣು ಮಕ್ಕಳಿಗೆ ಧೈರ್ಯವನ್ನು ತಂದು ಕೊಡುವಷ್ಟು ಮೀಟೂ ಅಭಿಯಾನ ಎತ್ತರಕ್ಕೇರಿದ್ದರಲ್ಲಿ ಕೂಡಾ ನೈತಿಕ ಮತ್ತೆಯ ಪುರುಷರ ಪಾತ್ರ ಇಲ್ಲ ಎನ್ನುವಂತಿಲ್ಲ. ಅಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಟ ಅಮೀರ್ ಖಾನ್, ಅಕ್ಷಯ್ ಕುಮಾರ್ ಇಂತಹವ ರೆಲ್ಲ ಮೀಟುವನ್ನು ಬೆಂಬಲಿಸಿದಾಗ ಮೀಟೂ ಇನ್ನಷ್ಟು ಶಕ್ತಿ ಗಳಿಸಿತು ಅನಿಸುತ್ತೆ. ಮೊಗಲ್ ಸಿನೆಮಾದಿಂದ ಅಮೀರ್ ಖಾನ್, ಅವರ ಪತ್ನಿ ಕಿರಣ್ ರಾವ್ ಹೊರಬಂದದ್ದು ಮೀಟೂ ಬೆಂಬಲಿಸಿಯಾಗಿದೆ.

ಅಕ್ಷಯ್ ಕುಮಾರ್ ರ ಹೌಸ್‍ಫುಲ್ ಸಿನೆಮಾ ನಿರ್ದೇಶಕ ಸಾಜಿದ್ ಖಾನ್ ಆರೋಪ ಸುಳ್ಳೆಂದು ಸಾಬೀತುಪಡಿಸುವವವರೆಗೆ ಹೌಸ್‍ಫುಲ್ ಸೆಟ್‍ಗೆ ಬರುವುದಿಲ್ಲ, ಎನ್ನುವ ಮೂಲಕ ತನ್ನನ್ನು ಸ್ವಯಂ ನಿಯಂತ್ರಿಸಿಕೊಂಡು ಸಿನೆಮಾವನ್ನು ಪಾರು ಮಾಡಿದ್ದಾರೆ ಎನ್ನ ಬಹುದು.. ನಟಿ ಸಲೋನಿ ಚೋಪ್ರ ಸಾಜಿದ್ ಖಾನ್ ವಿರುದ್ಧ ಮಾತ್ರ ಆರೋಪ ಹೊರಿಸಿದ್ದಲ್ಲ, ನಿರ್ದೇಶಕ ವಿಕಾಶ್ ಬಾನ್, ನಟ ಸೈನಿ ದುರಾನಿ ವಿರುದ್ಧವೂ ಲೈಂಗಿಕ ಅತಿಕ್ರಮದ ಆರೋಪ ಹೊರಿಸಿದ್ದಾರೆ. ಆದರೆ ಮಹಿಳೆ ಯರು ಯಾಕೆ ತಪ್ಪಿತಸ್ಥರಲ್ಲ ಎಂದು ನಟಿ ಪೂಜಾ ಭಟ್ ಪ್ರಶ್ನಿಸಿದ್ದಾರೆ. ಅಧಿಕಾರ, ಹುದ್ದೆಗಾಗಿ ತಮ್ಮ ಲೈಂಗಿಕತೆ ಯನ್ನು ಕೆಲವರು ಬಳಸಿಕೊಳ್ಳುತ್ತಾರೆ ಎಂಬ ತೀರಾ ಒಪ್ಪಬಹುದಾದ ಪ್ರಶ್ನೆ ಯನ್ನು ಪೂಜಾ ಸಮಾಜದ ಮುಂದಿಟ್ಟಿ ದ್ದಾರೆ. ಎಂಜೆ ಅಕ್ಬರ್ ಪ್ರಕರಣವನ್ನು ಉದ್ಧರಿಸಿ ಮಧ್ಯಪ್ರದೇಶ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲತಾ ಖೇಲ್ಕರ್ ಮಹಿಳಾ ಪತ್ರಕರ್ತರು ನಿಷ್ಕಳಂಕರೇನಲ್ಲ ಎಂದಿದ್ದಾರೆ.

ಇದೇ ವೇಳೆ, ಮಹಿಳೆಯೊಬ್ಬಳಿಂದ ಪುರುಷನ ವಿರುದ್ಧ ಹಗೆತೀರಿಸಿಕೊಳ್ಳಲು ಮೀಟು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂಬುದು ಇವರೆಲ್ಲರ ಇಂಗಿತ ವಾಗಿರಬಹುದು. ಅಂತಹದ್ದು ನಡೆಯಿ ತಾದರೆ ಮೀಟೂ ಏನನ್ನೂ ಮೀಟದೆ ಟುಸ್ ಆಗಲಿದೆ ಎನ್ನುವುದು ಇಲ್ಲಿನ ಕೊನೆ ಮಾತು.