ಸನ್ಮಾರ್ಗ ವಾರ್ತೆ
ಶಿಲ್ಲಾಂಗ್, ಮಾ. 2: ವಿವಾದ ಪೌರತ್ವ ತಿದ್ದು ಪಡಿ ಕಾನೂನು (ಸಿಎಎ), ಇನ್ನರ್ ಲೈನ್ ಪರ್ಮಿಟ್ (ಐಎಲ್ಪಿ) ಕುರಿತು ಮೇಘಾಲಯದಲ್ಲಿ ನಡೆದ ಸಭೆಯ ವೇಳೆ ಉಂಟಾದ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿಕೆಯಾಗಿದೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯದ ಪೊಲೀಸರು ತಿಳಿಸಿದ್ದು ರಾಜ್ಯದ ಬಹುಸಂಖ್ಯಾತ ಬುಡಕಟ್ಟನ್ನು ಪ್ರತಿನಿಧಿಸುವ ಖಾಝಿ ಸ್ಟೋಡೆಂಟ್ಸ್ ಯೂನಿಯನ್ ಮತ್ತು ಗೋತ್ರಕ್ಕೆ ಸೇರದವರ ನಡುವೆ ಪೂರ್ವ ಖಾಝಿ ಹಿಲ್ನಲ್ಲಿ ಶುಕ್ರವಾರ ಘರ್ಷಣೆ ನಡೆದಿತ್ತು.
ಘರ್ಷಣೆಯಲ್ಲಿ ಶಿಲ್ಲಾಂಗ್ನಲ್ಲಿ ಕರ್ಫ್ಯೂ ಹೇರಲಾಗಿತ್ತು. ನಾಲ್ಕುಗಂಟೆಯ ನಂತರ ಹಿಂಪಡೆಯಲಾಗಿತ್ತು. ನಂತರ ಶನಿವಾರ ಪುನಃ ಕರ್ಫ್ಯೂ ಹೇರಲಾಗಿತ್ತು. ಹನ್ನೊಂದು ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ, ಇಂಟರ್ ನೆಟ್ ಸೇವೆಯನ್ನು ಅಧಿಕಾರಿಗಳು ನಿಷೇಧಿಸಿದ್ದರು.
ಈಸ್ಟ್ ಜಯಿನ್ತಿಯ ಹಿಲ್ಸ್, ವೆಸ್ಟ್ ಜಯಿನ್ತಿಯ ಹಿಲ್ಸ್, ಭೋಯ್, ವೆಸ್ಟ್ ಖಾಝಿ ಹಿಲ್ಸ್, ಸೌತ್ವೆಸ್ಟ್ ಖಾಝಿ ಹಿಲ್ಸ್ ಜಿಲ್ಲೆಗಳಲ್ಲಿ ಇಂಟರ್ ನೆಟ್, ಮೊಬೈಲ್ ಸೇವೆಗಳನ್ನು ನಿಷೇಧಿಸಲಾಗಿದೆ.












