ಅಪ್ರಾಪ್ತ ಯುವಕರನ್ನು ಅರೆನಗ್ನಗೊಳಿಸಿ ಮೆರವಣಿಗೆ ಮಾಡಿದ ಪೊಲೀಸರು: ವ್ಯಾಪಕ ಟೀಕೆ

0
433

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಸೆ.25: ನಾಗಪುರದ ಬಾರಿನಲ್ಲಿ ಮಾತಿನ ಚಕಮಕಿ ನಡೆಸಿದ ಅಪ್ರಾಪ್ತ ವಯಸ್ಸಿನ ಯುವಕರನ್ನು ಅರೆನಗ್ನಗೊಳಿಸಿ ರಸ್ತೆಯಲ್ಲಿ ಗುಜರಾತ್ ಪೊಲೀಸರು ಮೆರವಣಿಗೆ ಮಾಡಿದ್ದಾರೆ. ನಾಗಪುರದ ಜಾರಿಪತ್ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದೆ.

ಬಾರಿನಲ್ಲಿ ಜಗಳ ಮಾಡಿ ಬಾರ್ ಮಾಲಕನಿಂದ ಹಣ ಕಿತ್ತುಕೊಂಡಿದ್ದಾರೆ ಎಂದು ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಇವರನ್ನು ಒಳಉಡುಪಿನಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ ಜನನಿಬಿಡ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.

ಸ್ಥಳದಲ್ಲಿದ್ದ ಜನರು ಇದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದಾರೆ.
ದೃಶ್ಯದಲ್ಲಿ ಅರೆನಗ್ನರಾಗಿರುವ ಹದಿಹರೆಯದ ಯುವಕರಿಗೆ ಪೊಲೀಸರು ನಿಂದಿಸುವುದು, ಲಾಠಿ ಬೀಸುವುದು ಕಾಣಿಸುತ್ತಿದೆ. ಹದಿನೆಂಟು ವರ್ಷದ ಯುವಕನ ಸಹಿತ ಮುಂತಾದವರು ಖಾಯಂ ಅಪರಾಧಿಗಳೆಂದು ಪೊಲೀಸರು ಹೇಳಿದ್ದಾರೆ. ಇವರಿಗೆ ಮಾಸ್ಕ್ ಹಾಕುವುದಕ್ಕೂ ಪೊಲೀಸರು ಅನುಮಾಡಿರಲಿಲ್ಲ.

ಘಟನೆಯ ದೃಶ್ಯಗಳು ವೈರಲ್ ಆಗಿದ್ದು, ಹೀಗೆ ಮಾಡಿದ ಪೊಲೀಸರನ್ನು ಜನರು ತೀವ್ರವಾಗಿ ಟೀಕಿಸಿದ್ದಾರೆ. ನಾಗಪುರ ಪೊಲೀಸ್ ಕಮಿಷನರ್ ಘಟನೆಯ ತನಿಖೆಗೆ ಆದೇಶ ಹೊರಡಿಸಿದ್ದು, ಅಸಿಸ್ಟೆಂಟ್ ಕಮಿಶನರ್‌ರಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.