ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಜಯಕ್ಕಾಗಿ ಕಾಂಗ್ರೆಸ್‌ನಿಂದ ಮಿಷನ್ ಯುಪಿ ಯೋಜನೆ

0
444

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರ ಪ್ರದೇಶ ವಿಧಾನಸಭೆಗೆ 2022ರಲ್ಲಿ ಚುನಾವಣೆಯು ನಡೆಯಲಿದ್ದು ಕಾಂಗ್ರೆಸ್ ಮಿಶನ್ ಯುಪಿ ಯೋಜನೆಯೊಂದಿಗೆ ಉತ್ತರ ಪ್ರದೇಶದಲ್ಲಿ ಜಯಗಳಿಸಲು ಸಿದ್ಧತೆ ನಡೆಸುತ್ತಿದೆ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಯುಪಿ ಕಾಂಗ್ರೆಸ್‍ನಲ್ಲಿ ಬದಲಾವಣೆಗಳು ನಡೆಯಲಿದ್ದು ಪ್ರಿಯಾಂಕಾ ಗಾಂಧಿ ಮುಂದಿನ ತಿಂಗಳು ಲಕ್ನೊಕ್ಕೆ ವಾಸ ಬದಲಾಯಿಸಲಿದ್ದಾರೆ ಎನ್ನಲಾಗಿದೆ.

ಪಾರ್ಟಿಯನ್ನು ತಳ ಹಂತದಿಂದ ಬಲಿಷ್ಠಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಂಶಿಕವಾಗಿ ಆರಂಭಿಸಲಾಗಿದೆ. ಪಂಚಾಯತ್ ಮಟ್ಟದಿಂದ ದುರಸ್ತಿ ಕಾರ್ಯ ನಡೆಸುವುದು ಗುರಿಯಾಗಿದೆ. ಇದಕ್ಕಾಗಿ ಕೈಲಾಸ್ ನಾಥ್ ಕೌಲ್‍ರ ಪತ್ನಿ ಶೀಲಾ ಕೌಲ್‍ರ ಲಕ್ನೊದ ಮನೆಯಲ್ಲಿ ಪ್ರಿಯಾಂಕಾ ಖಾಯಂ ವಾಸಕ್ಕಾಗಿ ಸಜ್ಜುಗೊಳಿಸಲಾಗಿದೆ.

ಕಾಂಗ್ರೆಸಿನ ಜಿಲ್ಲಾಧ್ಯಕ್ಷರೊಂದಿಗೆ ವರ್ಚುವಲ್ ಮೂಲಕ ಪ್ರಿಯಾಂಕ ಸಮಾಲೋಚನೆ ನಡೆಸಿದ್ದಾರೆ. ಪಂಚಾಯತ್ ಮಟ್ಟದಲ್ಲಿ ಸಭೆ ಕರೆಯಲು ಪಾರ್ಟಿಯನ್ನು ಬಲಪಡಿಸಲು ಅವರು ನಾಯಕರನ್ನು ಹುರಿದುಂಬಿಸಿದ್ದಾರೆ. ಸಭೆಗಳಿಗೆ ತಾನು ಅನಿರೀಕ್ಷಿತವಾಗಿ ಭೇಟಿ ನೀಡುವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.