ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 11: ಜ್ಯೋತಿರಾದಿತ್ಯ ಸಿಂಧ್ಯರನ್ನು ಕಾಂಗ್ರೆಸ್ ಎಂದೂ ಮೂಲೆಗುಂಪು ಮಾಡಿಲ್ಲ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ರಾಜ್ಯ ಯಾವ ವಿಷಯವನ್ನೂ ಸಿಂಧ್ಯಗೆ ತಿಳಿಸದೆ ಅವರ ಅನುಮತಿ ಇಲ್ಲದೆ ಮಾಡಿಲ್ಲ. ಈ ವಿಷಯವನ್ನು ಗ್ವಾಲಿಯಾರ್ ಚಂಪಲ್ ಡಿವಿಷನ್ನ ಯಾರಲ್ಲಿ ಕೇಳಿದರೂ ಹೇಳುತ್ತಾರೆ. ಪಾರ್ಟಿ ತೊರೆದು ಮೋದಿ-ಶಾ ಆಳ್ವಿಯ ಅಧೀನಕ್ಕೆ ಬರುವ ಸಿಂಧ್ಯರಿಗೆ ಎಲ್ಲ ಶುಭಕಾಮನೆಗಳು ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದರು.
ಬಿಜೆಪಿಗೆ ಹೋಗುವ ಜ್ಯೋತಿರಾದಿತ್ಯ ಸಿಂಧ್ಯ ಮೋದಿ ಶಾ ಸರಕಾರದ ಅಧೀನದಲ್ಲಿ ಭವಿಷ್ಯಧ ಭಾರತದಲ್ಲಿ ಪ್ರಗತಿ ಕಾಣಲಿ. ನಮ್ಮ ಬ್ಯಾಂಕುಗಳು ಮುರಿದುಬಿದ್ದಿವೆ. ರೂಪಾಯಿ ಮೌಲ್ಯ ಕುಸಿದಿದೆ. ಆರ್ಥಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಈ ಪರಿಸ್ಥಿತಿಯಲ್ಲಿ ಸಿಂಧ್ಯರಿಗೆ ಬಿಜೆಪಿಯಲ್ಲಿ ಹೆಚ್ಚು ಕೆಲಸ ಮಾಡಲು ಇರಬಹುದು ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಕೇಂದ್ರ ಸಚಿವರಾದ ಅಮಿತ್ ಶಾರಿಗೂ ನಿರ್ಮಲಾ ಸೀತರಾಮನ್ರಿಗೂ ಬದಲಿಯಾಗಿರುವ ಸ್ಥಾನ ಸಿಗಬಹುದು. ಇವರಿಗಿಂತ ಈ ಸ್ಥಾನವನ್ನು ನಿರ್ವಹಿಸುವ ಉತ್ತಮ ಸಾಮರ್ಥ್ಯ ಸಿಂಧ್ಯಾರಿಗೆ ಇದೆ. ಮೋದಿ -ಶಾರ ಕೈಕೆಳಗೆ ದುಡಿಯುವ ಸಿಂಧ್ಯರಿಗೆ ಅಭಿನಂದನೆಗಳು.
ರಾಜ್ಯಸಭಾ ಚುನವಣೆಯ ಟಿಕೆಟಿನ ಕುರಿತ ಭಿನ್ನಾಭಿಪ್ರಾಯಗಳಿಂದ ಕಳೆದ ದಿವಸ ಜ್ಯೋತಿರಾದಿತ್ಯ ಸಿಂಧ್ಯ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಸಿಂಧ್ಯರ ನಿಕಟವರ್ತಿಗಳಾದ 22 ಶಾಸಕರೂ ರಾಜೀನಾಮೆ ನೀಡಿದ್ದರು.












