ಮುಝಪ್ಫರ್‌ನಗರ ಗಲಭೆ: ಆರೋಪಿ ಬಿಜೆಪಿ ಶಾಸಕನಿಗೆ ಜಾಮೀನು

0
861

ಸನ್ಮಾರ್ಗ ವಾರ್ತೆ

ಮುಝಫ್ಫರ್‌ನಗರ: 2013ರ ಮುಝಫ್ಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದ ಆರೋಪಿ ವಿಕ್ರಮ್ ಸೆಯ್ನಿ ಕೋರ್ಟಿಗೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾರೆ. ಈತ ಗಲಭೆ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಬಿಜೆಪಿ ಟಿಕೇಟಿನಲ್ಲಿ ಸ್ಪರ್ಧಿಸಿ ಶಾಸಕನಾಗಿದ್ದರು. ಗಲಭೆಯ ವೇಳೆ ಕೋಮುದ್ವೇಷ ಹರಡಿದ್ದಾರೆ ಎಂಬ ಪ್ರಕರಣದಲ್ಲಿ ಅವರು ಕೋರ್ಟಿಗೆ ಶರಣಾದರು.

ಗಲಭೆ ಸಮಯದಲ್ಲಿ ಜನಸತ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾವಲ್ ಗ್ರಾಮದ ಆರಾಧನಾಲಯ ಅಶುದ್ಧಗೊಳಿಸಿದ್ದಕ್ಕೆ ಮುಝಪ್ಫರ್ ನಗರ ಪೊಲೀಸರು ಕೇಸು ಹಾಕಿದ್ದರು. ಉತ್ತರಪ್ರದೇಶದ ಕತೌಲಿ ಶಾಸಕರಾಗಿರುವ ಸೆಯ್ನಿಗೆ 25,000ರೂಪಾಯಿ ಸಮಾನ ಮೊತ್ತ ಮತ್ತು ಇಬ್ಬರ ಜಾಮೀನಿನಲ್ಲಿ ಕೋರ್ಟು ಜಾಮೀನು ಮಂಜೂರು ಮಾಡಿದೆ. ಎಪ್ರಿಲ್ 22ಕ್ಕೆ ವಿಚಾರಣೆ ವೇಳೆ ಹಾಜರಾಗಬೇಕೆಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.