ಫೆಲಸ್ತೀನ್ ಮಕ್ಕಳ ದಿನಾಚರಣೆ: ಇಸ್ರೇಲ್ ಜೈಲಿನಲ್ಲಿ 140 ಮಕ್ಕಳು ಬಂಧಿ

0
869

ಸನ್ಮಾರ್ಗ ವಾರ್ತೆ

ವೆಸ್ಟ್‌ಬ್ಯಾಂಕ್: ಎಪ್ರಿಲ್ ಐದಕ್ಕೆ ಫೆಲಸ್ತೀನ್ ರಾಷ್ಟ್ರೀಯ ಶಿಶು ದಿನವಾಗಿದ್ದು ಈ ದಿನದಂದೂ ಸಣ್ಣ ಮಕ್ಕಳ ಸಹಿತ 140ಕ್ಕೂ ಹೆಚ್ಚು ಮಕ್ಕಳು ಇಸ್ರೇಲಿನ ಜೈಲಿನಲ್ಲಿರುವುದಾಗಿ ವರದಿಯಾಗಿದೆ. ಫೆಲಸ್ತೀನ್ ಪ್ರಿಸನ್ರ್ಸ್ ಕ್ಲಬ್ ಈ ವರದಿಯನ್ನು ಹೊರಬಿಟ್ಟಿದೆ. ಇವರಲ್ಲಿ ಇಬ್ಬರು ಸರಕಾರದ ನೇರ ಬಂಧನದಲ್ಲಿದ್ದಾರೆ. ಎಲ್ಲ ವರ್ಷವೂ 500ರಿಂದ 7000 ಮಕ್ಕಳನ್ನು ಇಸ್ರೇಲಿನ ಸೈನಿಕರು ಪ್ರಾಸಿಕ್ಯೂಟ್ ಮಾಡುತ್ತದೆ ಎಂದು ಸಂಘಟನೆಯ ವರದಿಯಲ್ಲಿ ತಿಳಿಸಲಾಗಿದೆ.

ಮಾರ್ಚ್ 21ರವರೆಗೆ ಇರುವ ಲೆಕ್ಕದ ಪ್ರಕಾರ 230 ಫೆಲಸ್ತೀನಿ ಮಕ್ಕಳನ್ನು ಇಸ್ರೇಲಿನ ಅತಿಕ್ರಮಿತ ಸೇನೆಯು ಬಂಧಿಸಿದೆ. ಇದರಲ್ಲಿ ಹೆಚ್ಚು ಜರುಸೆಲೇಂನಿಂದ ಬಂಧನವಾಗಿದೆ. ಬಂಧಿತರೆಲ್ಲರೂ ಹದಿನೆಂಟು ವರ್ಷಕ್ಕಿಂತ ಕೆಳ ವಯೋಮಾನದವರಾಗಿದ್ದಾರೆ.

ಇಸ್ರೇಲಿನ ಅಕ್ರಮ ವಲಸಗರು ಫೆಲಸ್ತೀನಿನ ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇಸ್ರೇಲ್ ಸೇನೆ ಅವರನ್ನು ನಿರಂತರ ಬಂಧಿಸಿ ಜೈಲಿಗೆ ಹಾಕುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ಇಲ್ಲಿ ಅಮೆರಿಕ ಸೈನಿಕ ಉಪಕರಣ ಉಪಯೋಗಿಸುವವರೆಗೂ ಅಮೆರಿಕದ ಕಾನೂನಿನ ನಿರಂತರ ಉಲ್ಲಂಘನೆಯಾಗುತ್ತಿದೆ ಎಂದು ಮಾಜಿ ಅಮೆರಿಕ ಸೆನೆಟಿನ ಅಧಿಕಾರಿ ಇಲಾನ್ ವಿಲಿಯಮ್ಸ್ ಹೇಳಿದರು.