ನೇಪಾಳ ಪ್ರವಾಹ: ಸಾವಿನ ಸಂಖ್ಯೆ 538ಕ್ಕೆ ಏರಿಕೆ; 393 ಶವಗಳ ಗುರುತು ಪತ್ತೆಯಾಗಿಲ್ಲ; ರಕ್ಷಿಸಲ್ಪಟ್ಟವರಲ್ಲಿ 85 ಮಂದಿ ಭಾರತೀಯರು

0
223

ಸನ್ಮಾರ್ಗ ವಾರ್ತೆ

ಕಾಠ್ಮಂಡು: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಸಾವಿಗೀಡಾದವರ ಸಂಖ್ಯೆ 538ಕ್ಕೆ ತಲುಪಿದೆ ಎಂದು ವರದಿಯಾಗಿದೆ. 393 ಶವಗಳ ಗುರುತು ಪತ್ತೆಯಾಗಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಭಾರತೀಯ ಮೂಲದ 100 ಜನರು ನಾಪತ್ತೆಯಾಗಿದ್ದಾರೆ. ವಿವಿಧ ದೇಶಗಳ 1,500ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಈ ಮಧ್ಯೆ, ವಿಮಾನ ಪಡೆಗಳು ವಿಪತ್ತು ಪೀಡಿತ ರಾಸುವಾ ಪ್ರದೇಶದಿಂದ 117 ವಿದೇಶಿಯರನ್ನು ರಕ್ಷಿಸಿವೆ. ಇವರಲ್ಲಿ 85 ಮಂದಿ ಭಾರತೀಯ ನಾಗರಿಕರು ಮತ್ತು 16 ಮಂದಿ ಚೀನಾದವರು ಸೇರಿದ್ದಾರೆ. 60ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 40 ಕಿಲೋಮೀಟರ್‌ಗೂ ಹೆಚ್ಚು ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿರುವುದರಿಂದ ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿದೆ.

ಇದರೊಂದಿಗೆ, ರಾಸುವಾದಲ್ಲಿ ಎರಡನೇ ಪ್ರವಾಹದ ಬಗ್ಗೆ ಚೀನಾ ಎಚ್ಚರಿಕೆ ನೀಡಿದೆ. ಹಿಮಸ್ಪೋಟ ಉಂಟಾಗುವ ಸಾಧ್ಯತೆಯಿರುವುದರಿಂದ ನದಿ ತೀರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಈ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಪತ್ತಿನ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದೆ. ರಕ್ಷಣಾ ಕಾರ್ಯಾಚರಣೆಯ ಕುರಿತು ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ನೇಪಾಳಕ್ಕೆ ಅಗತ್ಯ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೋಗುವ ಮೂರನೇ ವಿಮಾನ ಇಂದು ಹೊರಡಲಿದೆ. ಈ ವಿಮಾನವು 12 ಟನ್ ಸಾಮಗ್ರಿಗಳೊಂದಿಗೆ ಪ್ರಯಾಣ ಬೆಳೆಸಲಿದೆ.