ಹೊಸ ವರ್ಷ; ಪ್ರಶ್ನಿಸುತಿದೆ ಮನಸು!?

0
260

ಸನ್ಮಾರ್ಗ ವಾರ್ತೆ

ವರ್ಷ ಬದಲಾಗಿ ಬರುತಿದೆ
ನನ್ನಲ್ಲಿ ಬದಲಾವಣೆ ಆಗುತಿದೆಯೆ ಹುಡುಕುತಿರುವೆ ನಾನು…. ಪ್ರಶ್ನಿಸಿಕೊಳ್ಳುತ್ತಿರುವೆ ನನ್ನಲ್ಲೆ ನಾನು

ಬರಿ ಕ್ಯಾಲೆಂಡರ್ ಬದಲಾವಣೆ ಯಿಂದ ಬದುಕು ಬದಲಾಗುತ್ತದೆಯೇ?
ಪ್ರಶ್ನಿಸುತಿದೆ ಎನ ಮನಸು

ಕೂಡಿಸಿದ್ದೇನು?
ಕಳೆದದ್ದೇನು…..? ಯಾವುದರಿಂದ ಬಾಗಿಸಲ್ಪಟ್ಟಿವೆ ಕೇಳುತಿದೆ ಮನಸು ನನ್ನೊಂದಿಗೆ

ವರ್ಷಗಳು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲೆ ಮುಗಿಯುತಿದೆ…
ವಯಸ್ಸು ಸವೆಯುತಿದೆ
ನನ್ನ ಸಾಧನೆಯೇನು ಪ್ರಶ್ನಿಸಿಕೊಳ್ಳುತ್ತಿರುವೆ ನನ್ನಲ್ಲೆ ನಾನು

ಅಹಂಕಾರ ಕಡಿಮೆಯಾಯಿತೆ
ಕೋಪ ತಾಪಗಳು ಕಡಿಮೆಯಾಯಿತೆ
ಒಳ್ಳೆಯತನ ಎಷ್ಟು ಉಳಿದಿದೆ
ಪ್ರಶ್ನಿಸಿಕೊಳ್ಳುತ್ತಿರುವೆ ನನ್ನಲ್ಲೆ ನಾನು

ಹೊಸವರ್ಷ ಬರುತ್ತಲೇ ಇರುತ್ತದೆ
ಬದುಕು ಮಾತ್ರ ಬದಲಾಗಲೇ ಇಲ್ಲವೇ
ಪ್ರಶ್ನಿಸುತಿದೆ ಮನಸು

ನನ್ನವರೆನ್ನುವವರು
ಯಾರು?
ಗೊಂದಲದ
ನಡುವೆ ಬದುಕು….
ಪ್ರಾಯ ಅರುವತ್ತು ದಾಟಿದರೂ ಪ್ರಬುದ್ಧತೆ ನಿನಗಿಲ್ಲವಾದರೆ ಪ್ರಾಯಕ್ಕೆ ಬೆಲೆಯೇನು?
ಕೇಳುತಿದೆ ಮನಸು

ಇಪ್ಪತ್ತ ಮೂರರ ಮೂನ್ನೂರ ಅರುವತ್ತೈದು ಪುಟಗಳ ಪುಸ್ತಕವೊಂದು ಸಿದ್ಧವಾಗಿದೆ…..
ಇಪ್ಪತ್ತನಾಲಕನು ಪೂರ್ತಿಗೊಳಿಸುವವರಾರೋ…..
ನಡುಗುತ ಕೇಳುತಿದೆ ಮನಸು

ಕರ್ಮ ತಟ್ಟೆಯಾಗಿ ಪೂರ್ಣಗೊಂಡ ಇಪ್ಪತ್ತಮೂರು
ಸತ್ಕರ್ಮವೆಷ್ಟು ತುಂಬಿದೆ ಅದರಲಿ ….
ಹೃದಯವು ಭಾರವಾಗುತಿದೆ…

ಹೊಸ ವರುಷ
ಹೊಸ ತಿಂಗಳು ಹೊಸ ದಿನ
ಹೊಸ ನಿಮಿಷ ಹೊಸ ಉಸಿರು ಸಾವಿನ ಸಿದ್ಧತೆ….
.
ಏನೋ ಇನ್ನೇನೋ…..

ಬದುಕಿನಲ್ಲಿ ಕಳೆದವರೆಲ್ಲೋ
ಮನದಾಳದಲ್ಲಿ ಕೆಲವರು…
.
ಬದುಕಿಗೆ ಅರ್ಥ ಬರೆಯುವವರಾರೋ…..

ಉತ್ತರ ಹುಡುಕದಿರು
ಬದುಕು ನಡೆದತ್ತ ನಡೆದುಬಿಡು…

ನೀನು ಜೀವನ ರೇಖೆಯ ನಡುವೆ ಬರೆದ ಸುಂದರ ಅಕ್ಷರವಾಗು

ಲೇಖನಿಗಳು ಬರೆದು ಮುಗಿಯುತ್ತವೆ
ಆದರೆ ರೇಖೆಗಳ ನಡುವಿರುವುದು ಬಾಕಿ ಉಳಿಯುತ್ತದೆ.

✍️ರೈಹಾನ್ ವಿ.ಕೆ.
ಸಚೇರಿಪೇಟೆ