ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಫೆ. 19: ಭಾರತ ಸಂದರ್ಶನಕ್ಕೆ ಕೆಲವೇ ದಿನಗಳಿರುವಂತೆ ಡೊನಾಲ್ಡ್ ಟ್ರಂಪ್ ವ್ಯಾಪಾರ ಒಪ್ಪಂದ ಈಗ ಇಲ್ಲ. ವ್ಯಾಪಾರ ಒಪ್ಪಂದವನ್ನು ಭಾರತ ಸರಿಯಾದ ರೀತಿಯಲ್ಲಿ ಪರಿಗಣಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸದ್ಯ ಇಲ್ಲ. ದೊಡ್ಡ ಘೋಷಣೆಯ ನಂತರ ನಡೆಯಲಿದೆ ಎಂದು ಜಾಯಿಂಟ್ ಬೇಸ್ ಅಂಡ್ರೂಸ್ನಲ್ಲಿ ಪತ್ರಕರ್ತರಿಗೆ ಟ್ರಂಪ್ ತಿಳಿಸಿದರು.
ಭಾರತ ಸಂದರ್ಶನದಿಂದ ಈಗಿನ ವ್ಯಾಪಾರ ಸಂಬಂಧದಲ್ಲಿ ಬದಲಾವಣೆಯನ್ನು ತರಬಹುದು ಎಂಬ ನಿರೀಕ್ಷೆಯನ್ನು ಟ್ರಂಪ್ ವ್ಯಕ್ತಪಡಿಸಿದರು. ಟ್ರಂಪ್ ವ್ಯಾಪಾರ ಒಪ್ಪಂದದಲ್ಲಿ ಅತೃಪ್ತಿ ಪ್ರಕಟಿಸಿದರೂ ಭಾರತ ಸಂದರ್ಶನಕ್ಕೆ ಉತ್ಸುಕನಾಗಿದ್ದೇನೆ ಎಂದು ಹೇಳಿದರು. ನರೇಂದ್ರ ಮೋದಿ ತುಂಬ ಇಷ್ಟ. ಗುಜರಾತಿನಲ್ಲಿ 70 ಲಕ್ಷ ಜನರು ತನ್ನನ್ನು ಸ್ವಾಗತಿಸುವರೆಂದು ಮೋದಿ ತಿಳಿಸಿದ್ದಾರೆ ಎಂದು ಅವರು ಹೇಳಿದರು. ಫೆಬ್ರವರಿ 24, 25ಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.












