ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗುವುದಿಲ್ಲ; ಅಖಿಲೇಶ್ ಯಾದವ್

0
688

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 18: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು.

ಈ ಸಂಬಂಧ ಪ್ರಶ್ನೆಯೊಂದಕ್ಕೆ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುವುದಿಲ್ಲ ಎಂದಿದ್ದಾರೆ.

ಇಂಡಿಯ ಕೂಟವನ್ನು ಬಲಿಷ್ಠಗೊಳಿಸಬೇಕು. ಅದಕ್ಕಾಗಿ ಈಗ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಗುರಿ. ಬಿಜೆಪಿ ಕಾಂಗ್ರೆಸ್ ನನ್ನನ್ನು ಕಾರ್ಯಕ್ರಮಕ್ಕೆ ಸಾಮಾನ್ಯವಾಗಿ ಕರೆಯುವುದಿಲ್ಲ. ಆದುದರಿಂದ ಹೋಗುವುದಿಲ್ಲ ಎಂದು ಹೇಳಿದರು. ಆದರೆ ಕಾಂಗ್ರೆಸ್ ನಾಯಕರು ಅಖಿಲೇಶ್ ಯಾದವ್‍ರನ್ನು ಕರೆದಿದ್ದೇವೆ ಎಂದು ಹೇಳಿದ್ದಾರೆ.

ಫೆಬ್ರವರಿ 14ಕ್ಕೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ್ ಯಾತ್ರೆ ಉತ್ತರಪ್ರದೇಶಕ್ಕೆ ಬರಲಿದೆ. ಹತ್ತು ದಿವಸ ಉತ್ತರಪ್ರದೇಶದಲ್ಲಿ ಸುತ್ತಾಡಲಿದೆ. ಪ್ರಧಾನಿಯ ಸ್ವಕ್ಷೇತ್ರ ವಾರಣಾಸಿಯಲ್ಲಿ ಕೂಡ ಯಾತ್ರೆ ಪಯಣಿಸುತ್ತದೆ. ಆದರೆ ಆರ್ ಎಲ್‍ ಡಿ ತನ್ನ ಪ್ರತಿನಿಧಿಗಳನ್ನು ಭಾರತ್ ಜೋಡೊ ನ್ಯಾಯ ಯಾತ್ರೆಗೆ ಕಳುಹಿಸುತ್ತದೆ ಎಂದು ವರದಿಯಾಗಿದೆ.