ಕೇರಳ: ಮಹಾರಾಜ ಕಾಲೇಜಿನ ಫೆಟರ್ನಿಟಿ ಕಾರ್ಯಕರ್ತನ ಮೇಲೆ ಎಸ್ಎಫ್ಐ ಕಾರ್ಯಕರ್ತರಿಂದ ಹಲ್ಲೆ

0
112

ಸನ್ಮಾರ್ಗ ವಾರ್ತೆ

ಕೇರಳದ ಮಹಾರಾಜ ಕಾಲೇಜಿನ ಫೆಟರ್ನಿಟಿ ಕಾರ್ಯಕರ್ತನನ್ನು ಎಸ್ಎಫ್ ಐ ಕಾರ್ಯಕರ್ತರು ತೀವ್ರವಾಗಿ ಥಳಿಸಿದ ಘಟನೆ ನಡೆದಿದೆ. ಆಂಬುಲೆನ್ಸ್ ಗೆ ಹತ್ತಿ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾರ್ಯಕರ್ತರ ಮೇಲೂ ಇವರು ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡಿರುವ ಬಿಲಾಲ್ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಜನವರಿ 17ರ ರಾತ್ರಿ 12 ಗಂಟೆಯ ವೇಳೆ ಈ ಘಟನೆ ನಡೆದಿದೆ. ಕಾಲೇಜು ಪರಿಸರದಲ್ಲಿ ಎಸ್ಎಫ್ಐ ಕಾರ್ಯಕರ್ತರು ಬಿಲಾಲನ್ನು ತೀವ್ರವಾಗಿ ಥಳಿಸಿದ್ದಾರೆ. ಚಿಕಿತ್ಸೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ತಲುಪಿದ ಬಿಲಾಲ್ ಅನ್ನು ಬೆನ್ನಟ್ಟಿ ಕಾರ್ಯಕರ್ತರು ಅಲ್ಲೂ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಎರ್ನಾಕುಲಂನ ಇಂದಿರಾ ಆಸ್ಪತ್ರೆಗೆ ಬಿಲಾಲನ್ನು ತಲುಪಿಸುವುದಕ್ಕಾಗಿ ಆಂಬುಲೆನ್ಸ್ ಗೆ ಸಾಗಿಸಲಾಯಿತಾದರೂ ಆಂಬುಲೆನ್ಸ್ ಗೆ ಹತ್ತಿ ಮತ್ತೆ ಥಳಿಸಿದ್ದಾರೆ.

ಎರ್ನಾಕುಲಂ ಮಹಾರಾಜ್ ಕಾಲೇಜಿನ ಘರ್ಷಣೆಗೆ ಸಂಬಂಧಿಸಿ ಅಮಲ್ ಎಂಬವರ ಜೊತೆ ಬಿಲಾಲನ್ನು ಕೂಡ ಪೊಲೀಸರು ಕಷ್ಟಡಿಗೆ ತೆಗೆದುಕೊಂಡಿದ್ದರು. ಎಸ್ ಎಫ್ ಐ ಯೂನಿಟ್ ಸೆಕ್ರೆಟರಿ ನಾಸರ ಅಬ್ದುಲ್ಲಾ ರಹಮಾನ್ ಗೆ ಚೂರಿ ಇರಿತ ಪ್ರಕರಣದಲ್ಲಿ ಫೆಟರ್ನಿಟಿ ಪಾತ್ರ ಇದೆ ಎಂಬುದು ಎಸ್ಎಫ್ಐ ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.