ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನನಗೆ ಪ್ರಧಾನಿ ನರೇಂದ್ರ ಮೋದಿಯ ಭಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನ್ಯಾಶನಲ್ ಹೆರಾಲ್ಡ್ ಪ್ರಕರಣ ಕುರಿತ ಪ್ರಶ್ನೆಗೆ ರಾಹುಲ್ ಗಾಂಧಿ ನೀಡಿದ ಉತ್ತರವಿದು. ತಾವು ಹೇಳುವುದು ನ್ಯಾಶನಲ್ ಹೆರಾಲ್ಡ್ ಕುರಿತಾಗಿದೆ. ಆದರೆ, ಇದು ಬೆದರಿಸುವ ಯತ್ನ. ಅವರು ಸಣ್ಣ ಒತ್ತಡದಿಂದ ನಮ್ಮನ್ನು ಧ್ವನಿಯಿಲ್ಲದಂತೆ ಮಾಡುವುದಕ್ಕೆ ಸಾಧ್ಯವಿದೆಯೆಂದು ಭಾವಿಸುತ್ತಾರೆ.
“ನಾನು ನರೇಂದ್ರ ಮೋದಿಗೆ ಹೆದರುವುದಿಲ್ಲ. ಅವರು ಎಷ್ಟು ಅಡೆತಡೆಗಳನ್ನು ಬೇಕಾದರೂ ಹಾಕಬಹುದು. ಆದರೆ, ಸತ್ಯಕ್ಕೆ ಅಡೆತಡೆಗಳನ್ನೊಡ್ಡಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
ನ್ಯಾಶನಲ್ ಹೆರಾಲ್ಡ್‌ನ ವಿವಿಧ ಕಚೇರಿಗಳಲ್ಲಿ ಇಡಿ ತಪಾಸಣೆ ನಡೆಸಿದ್ದು, ದಿಲ್ಲಿಯಲ್ಲಿ 12 ಜಾಗದಲ್ಲಿ ತಪಾಸಣೆ ನಡೆದಿದೆ ಎಂಬುದಾಗಿ ವರದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಇವರಲ್ಲಿ ಸೇರುತ್ತಾರೆ. ಅವರ ಹೇಳಿಕೆ ಪಡೆದ ಮೇಲೆ ತಪಾಸಣೆಗೆ ಇಡಿ ಮುಂದಾಗಿದೆ.
ನ್ಯಾಶನಲ್ ಹೆರಾಲ್ಡ್ ಕೇಂದ್ರಕ್ಕೆ ಇಡಿ ದಾಳಿಯ ಬೆನ್ನಿಗೆ ಕಾಂಗ್ರೆಸ್ ನಾಯಕರು ಡೈರಕ್ಟರ್ ಆಗಿರುವ ಯಂಗ್ ಇಂಡಿಯಾ ಕಂಪೆನಿಯ ದಿಲ್ಲಿ ಕಚೇರಿಗೆ ಇಡಿ ಬೀಗ ಹಾಕಿದೆ. ಇದರ ಬೆನ್ನಿಗೆ ಈ ವಿಷಯದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
#WATCH | Delhi: "I am not at all scared of Modi. They can put up more barricades. Truth can't be barricaded..," says Congress MP Rahul Gandhi after reaching the Parliament. pic.twitter.com/dsJBCQKQ2C
— ANI (@ANI) August 4, 2022
हम नरेंद्र मोदी से नहीं डरते हैं। उनको जो करना है, कर लें- कुछ फर्क नहीं पड़ेगा।
देश की रक्षा करने, लोकतंत्र की रक्षा करने, देश में भाईचारे को कायम रखने का काम मैं करता रहूंगा।
हम डरते नहीं हैं : श्री @RahulGandhi pic.twitter.com/70ak49uZBY
— Congress (@INCIndia) August 4, 2022












