ಫೆಲೆಸ್ತೀನ್ ಶಾಸನ ಸಭೆಯನ್ನು ವಿಸರ್ಜಿಸುವಂತೆ ಕೋರಿದ ಅಬ್ಬಾಸ್: ತಿರಸ್ಕರಿಸಿದ ಹಮಾಸ್

0
514

ಫೆಲೆಸ್ತೀನ್ ಶಾಸನ ಸಭೆಯನ್ನು ವಿಸರ್ಜಿಸುವ  ಫೆಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ರ ನಿರ್ಧಾರವನ್ನು ಹಮಾಸ್ ತಿರಸ್ಕರಿಸಿದೆ.

ಫೆಲೆಸ್ತೀನ್ ಶಾಸನ ಸಭೆಯನ್ನು ವಜಾಗೊಳಿಸುವ ಮತ್ತು ಆರು ತಿಂಗಳವರೆಗೆ ಚುನಾವಣೆಯನ್ನು  ತಡೆದಿಟ್ಟುಕೊಳ್ಳುವ ಪ್ರಸ್ತಾಪವು ಅವ್ಯವಸ್ಥೆಗೆ ಕಾರಣವಾಗಬಹುದಾಗಿದ್ದು, ರಾಜಕೀಯ ಅವ್ಯವಸ್ಥೆಯನ್ನು ಹುಟ್ಟು ಹಾಕಬಹುದು ಎಂದು ಹಮಾಸ್ ಎಚ್ಚರಿಸಿದೆ.

ಫೆಲೆಸ್ತೀನ್ ಶಾಸನ ಸಭೆಯನ್ನು ವಿಸರ್ಜಿಸುವ ಅಬ್ಬಾಸ್ ರ ನಿರ್ಧಾರವು  ಸಂವಿಧಾನಾತ್ಮಕ ಅಥವಾ ಕಾನೂನು ಸಮ್ಮತಿಯನ್ನು ಹೊಂದಿಲ್ಲ ಎಂದು ಹಮಾಸ್ ಹೇಳಿಕೆ ನೀಡಿದೆ.

ಅಬ್ಬಾಸ್ ಅವರ ಪ್ರಕಟಣೆಯು ಅವರ ಫತಾಹ್ ಪಕ್ಷ ಮತ್ತು ಹಮಾಸ್ ನಡುವಿನ ಭಿನ್ನಾಭಿಪ್ರಾಯಕ್ಕೆ ಹೊಸ ಸೇರ್ಪಡೆಯಂತಾಗಿದೆ.

ಅಬ್ಬಾಸ್ ರನ್ನು ತಡೆಯುವಂತೆ ಹಮಾಸ್ ಫೆಲೆಸ್ತೀನ್ ಜನರಿಗೆ ಮತ್ತು ಇತರ ರಾಜಕೀಯ ಬಣಗಳಿಗೆ ಕರೆ ಕೊಟ್ಟಿದೆ. ಅಬ್ಬಾಸ್ ರ ಪಕ್ಷವು ಆಕ್ರಮಿತ ಪಶ್ಚಿಮ ತೀರ ಭಾಗಗಳ ಆಡಳಿತ ನಿಯಂತ್ರಣವನ್ನು ಹೊಂದಿದೆ.

ಪ್ಯಾಲೇಸ್ಟಿನಿಯನ್ ಸಾಮರಸ್ಯ ಸಾಧಿಸಲು ಈಜಿಪ್ಟಿನ ಪ್ರಯತ್ನಗಳಿಗೆ ಏಟು ನೀಡುತ್ತಿರುವ ಅಬ್ಬಾಸ್ ರ ಕ್ರಮಗಳನ್ನು ತಡೆಯಲು ನಾವು ಈಜಿಪ್ಟಿಗೆ ಕರೆ ನೀಡುತ್ತೇವೆ” ಎಂದು ಹೇಳಿದೆ.

ಕಳೆದ ತಿಂಗಳು, ಹಮಾಸ್ ಮತ್ತು ಫತಾಹ್ ನಿಯೋಗಗಳು ಫೆಲೆಸ್ತೀನ್  ವಿವಾದವನ್ನು ಕೊನೆಗೊಳಿಸಲು ಕೈರೋದಲ್ಲಿ ಈಜಿಪ್ಟಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.

ಆರು ತಿಂಗಳೊಳಗೆ ಚುನಾವಣೆ

2006 ರ ಚುನಾವಣೆಯಲ್ಲಿ ಗೆದ್ದು ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ನ್ನು ನಿರ್ಬಂಧಿಸಲು ಫತಾಹ್ ಪಕ್ಷ ಪ್ರಯತ್ನಿಸುತ್ತಿದ್ದು, ಗಾಜಾ ಪಟ್ಟಿ ಶಾಸನ ಸಭೆಯನ್ನು ಬಹುಮಟ್ಟಿಗೆ ನಿಷ್ಕ್ರಿಯಗೊಳಿಸಲಾಗಿದೆ.

ನ್ಯಾಯಾಲಯವು ಫೆಲೆಸ್ತೀನ್ ಶಾಸನ ಸಭೆ ವಿಸರ್ಜಿಸಲು ನಿರ್ಧರಿಸಿದೆ ಮತ್ತು ಆರು ತಿಂಗಳಲ್ಲಿ ಸಂಸತ್ತಿನ ಚುನಾವಣೆಗೆ ಕರೆ ನೀಡಿದೆ ಮತ್ತು ಈ ನಿರ್ಧಾರವನ್ನು ನಾವು ತಕ್ಷಣವೇ ಕಾರ್ಯಗತಗೊಳಿಸಬೇಕಾಗಿದೆ”ಎಂದು  ರಾಮಲ್ಲಾದಲ್ಲಿ ನಡೆದ ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್(ಪಿಎಲ್ಓ) ಸಭೆಯಲ್ಲಿ ಅಬ್ಬಾಸ್ ಹೇಳಿದ್ದಾರೆ.

ಫೆಲೆಸ್ತೀನ್ ನಲ್ಲಿ ಎರಡೂ ಪಕ್ಷಗಳ ನಡುವೆ ಏಕತೆಯನ್ನು ಸ್ಥಾಪಿಸುವ  ಈಜಿಪ್ಟಿನ ಪ್ರಯತ್ನಗಳಿಗೆ ಹಮಾಸ್ ತಡೆಯೊಡ್ಡುತ್ತಿದೆ ಎಂದು ಅವರು ಆರೋಪಿಸಿದರು.