ಏನು ಕೇಳಿದ್ರೂ ನೋ ಎನ್ನುವ ಹೆತ್ತವರು

0
253

✍️ ಜಾಸಿಮುಲ್ ಮುತವ್ವ

ತಂದೆ-ತಾಯಂದಿರು ನಿರ್ಲಕ್ಷ್ಯದಿಂದ ಆಡುವ ಕೆಲವು ಮಾತುಗಳು ಮಕ್ಕಳ ಗುಣ ಸ್ವಭಾವವನ್ನು, ಭವಿಷ್ಯವನ್ನು ನಾಶಪಡಿಸುತ್ತದೆ. ಮಾತುಗಳು ಮತ್ತು ವಚನಗಳು ಶಿಕ್ಷಣದ ಅಡಿಪಾಯವಾಗಿದೆ. ನಾವು ನಮ್ಮ ಮಕ್ಕಳನ್ನು ಮಾತುಗಳ ಮೂಲಕ ಎದುರುಗೊಳ್ಳುತ್ತೇವೆ. ಅವರನ್ನು ಮಾತಿನ ಮೂಲಕವೇ ಅವರ ಒಳಿತು ಕೆಡುಕುಗಳನ್ನು ಪ್ರಸ್ತಾಪಿಸುತ್ತೇವೆ. ಅವರನ್ನು ಮಾತಿನ ಮೂಲಕವೇ ಪ್ರೋತ್ಸಾಹಿಸುತ್ತೇವೆ, ಹೊಗಳುತ್ತೇವೆ. ಅವರೊಂದಿಗಿನ ಕೋಪವನ್ನು ಕೂಡಾ ಮಾತಿನಿಂದಲೇ ಪ್ರಕಟಿಸುತ್ತೇವೆ. ಹೀಗಿರುವಾಗ ನಮ್ಮ ಮಕ್ಕಳಿಗೆ ಶಿಕ್ಷಣ ತರಬೇತಿಯನ್ನು ನೀಡಿ ಬೆಳೆಸುವುದು ಮಾತು ಅಥವಾ ಕೃತಿಯಿಂದಾಗಿದೆ.

ಮಕ್ಕಳ ದಾರಿ ತಪ್ಪಿದ ಬದುಕಿಗೆ ಮುಖ್ಯ ಕಾರಣ ಮಾತು ಮತ್ತು ಮಾತಿನ ದುರ್ಬಳಕೆಯಾಗಿದೆ ಎಂಬುದು ನನ್ನ ಅನುಭವಕ್ಕೆ ಬಂದ ವಿಚಾರ. ಮನೆ ಬಿಟ್ಟು ಹೋದ ಓರ್ವ ಯುವಕನ ಜೊತೆ ಸಂವಾದಿಸುವ ಅವಕಾಶ ನನಗೆ ಲಭ್ಯವಾಯಿತು. ಅವನ ಮಾತುಗಳನ್ನೆಲ್ಲಾ ಆಲಿಸಿದಾಗ ಅವನ ಮಾತಾಪಿತರೇ ಸಮಸ್ಯೆಯಾಗಿದ್ದಾರೆಂದು ಅರ್ಥವಾಯಿತು. ಮಾತಾಪಿತರಿಂದ ನಿರಂತರ ಕೇಳಿ ಬರುತ್ತಿರುವ ಕೆಟ್ಟ ಬೈಗುಳಗಳು, ಆತನನ್ನು ಮನೆಬಿಟ್ಟು ಓಡಿ ಹೋಗಲು ಪ್ರೇರೇಪಿಸಿತ್ತು. ದಾರಿ ತಪ್ಪಿದ ಓರ್ವ ಹೆಣ್ಮಗಳು ನನ್ನನ್ನು ಭೇಟಿಯಾಗಿದ್ದಳು. ಆಕೆಯ ನಡೆಯ ಬಗ್ಗೆ ಆಕೆಗೆ ಸಂತೃಪ್ತಿಯಿಲ್ಲ. ಆದರೆ ಮಾತಾಪಿತರ ಚುಚ್ಚು ಮಾತುಗಳಿಗೆ ಆಕೆ ನಿರಂತರ ಗುರಿಯಾಗುತ್ತಿದ್ದಳು. ಈ ಮಾತಾಪಿತರಿಗೆ ಒಂದು ಪಾಠ ಕಲಿಸಬೇಕೆಂಬ ಉದ್ದೇಶದಿಂದ ಪ್ರತೀಕಾರ ನಡೆಸಿದ್ದಳು. ನಾಲಗೆ ಮಾಡುವ ಆಪತ್ತು ಮಕ್ಕಳ ಬದುಕನ್ನೇ ನಾಶಪಡಿ ಸುತ್ತದೆ ಎಂಬುದನ್ನು ಅಧಿಕೃತವಾಗಿ ನಾನು ಹೇಳಬಲ್ಲೆ.

  1. ಮಕ್ಕಳನ್ನು ಪ್ರಾಣಿಗಳ ಹೆಸರಿನ ಜೊತೆ ಹೋಲಿಸಿ ತೆಗಳುವುದು. ಉದಾಹರಣೆಗೆ, ಕತ್ತೆ, ನಾಯಿ, ಕೋಣ. ಜಂತು, ಮುಂತಾದ ಪದಗಳನ್ನು ಬಳಸಿ ತೆಗಳುವುದು.
  2. ಮಕ್ಕಳ ವಿಕಲತೆಯಂತಹ ಪದಗಳನ್ನು ಬಳಸುವುದು. ದುರಾದೃಷ್ಟವಂತ, ಕಳ್ಳ, ಸುಳ್ಳ, ಕುರೂಪಿ, ಮೂರ್ಖ, ಕರಿಯ, ಓರೆಗಣ್ಣ ಮುಂತಾದ ಪದಗಳನ್ನು ಬಳಸಿ ತೆಗಳುವುದು. ಅವಹೇಳನ ಬೆಂಕಿಯಾಗಿದೆ. ಅದು ಹೃದಯವನ್ನು ಸುಡುವುದು.
  3. ಮತ್ತಿತರ ಮಕ್ಕಳೊಂದಿಗೆ ಹೋಲಿಕೆ: ಅದು ಮಕ್ಕಳ ಸ್ವಂತಿಕೆಯನ್ನು ದಮನಿಸುತ್ತದೆ. ಯಾಕೆಂದರೆ ಪ್ರತಿಯೊಂದು ಮಗುವಿಗೂ ಅವರದ್ದೇ ಆದ ಭಾವನೆ ಗುಣ ವಿಶೇಷತೆ ಇರುತ್ತದೆ.
  4. ಮನಸ್ಸನ್ನೇ ದಮನಿಸುವ ಚುಚ್ಚು ಮಾತುಗಳು; ನಿನಗೆ ಎಷ್ಟು ಹೇಳಿದರೂ ಅರ್ಥವಾಗುವುದಿಲ್ಲ. ಸುಮ್ಮ ನಿರು ಶೈತಾನ್, ನಿನ್ನಿಂದ ಯಾವುದೇ ಪ್ರಯೋಜನವಲ್ಲ. ನಿನ್ನನ್ನು ಸಾಕುವುದಕ್ಕಿಂತ ಬಾಳೆ ಗಿಡ ನೆಟ್ಟರೆ ಸಾಕಿತ್ತು… ಇಂತಹ ನಿಂದನೆಯ ಮಾತುಗಳು ನಿರಂತರ ಕೇಳಿ ಬಂದಾಗ ಮಕ್ಕಳಲ್ಲಿ ನಿರಾಶಾಭಾವ ಬೆಳೆಯುತ್ತದೆ.
  5. ಬೆದರಿಕೆ: ನಿನ್ನನ್ನು ಹೊಡೆದು ಕೈಕಾಲು ಕತ್ತರಿಸಿ ಹಾಕುವೆ. ನಿನ್ನನ್ನು ಕೊಂದು ಹಾಕುವೆ. ನಿನ್ನನ್ನು ಸುಟ್ಟು ಹಾಕಿ ನಾನು ಕೂಡಾ ಸಾಯುವೆ… ಇತ್ಯಾದಿ ಮಾತುಗಳು.
  6. ಏನೇ ಕೇಳಿದರೂ ಆಲೋಚಿಸದೆಯೇ ಇಲ್ಲ ಇಲ್ಲ ಇಲ್ಲ ಎನ್ನುವ ನಿಷೇದಾತ್ಮಕ ಉತ್ತರದ ಮಾತು ಗಳ ನಿರಂತರ ಪ್ರಯೋಗ.
  7. ಶಾಪದ ಪದ ಪ್ರಯೋಗ: ನೀನೊಮ್ಮೆ ಸತ್ತು ಹೋದರೆ ಸಾಕು, ಎಲ್ಲಿ ಕಳುಹಿಸಿದರೂ ನೀನು ಸರಿ ಯಾಗಲ್ಲ… ಇಂತಹ ಮಾತುಗಳು ನಿರಂತರ ಮಕ್ಕಳ ಕಿವಿಗೆ ಬಿದ್ದರೆ ಅವರ ಮನದಲ್ಲಿ ನಕಾರಾತ್ಮಕ ಭಾವ ಉಂಟಾಗುತ್ತದೆ.
  8. ಇತರರ ಮುಂದೆ ನಿಂದಿಸುವುದು, ಅವಮಾನಿ ಸುವುದು. ಮಕ್ಕಳ ಲೋಪ ದೋಷಗಳನ್ನು ಇತರರ ಮುಂದೆ ಪ್ರಸ್ತಾಪಿಸಿ ಅವಮಾನಿತರಾಗುವಂತೆ ಮಾಡು ವುದು. ಯಾವ ಮಕ್ಕಳೂ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವುದನ್ನು ಸಹಿಸಲಾರ.

ಮಕ್ಕಳ ವಯಸ್ಸು ಹದಿನಾರು ದಾಟುವ ತನಕ ಬೈಗುಳ, ಚುಚ್ಚು ಮಾತುಗಲು, ಅಸಭ್ಯ ಮಾತುಗಳು ತಂದೆ-ತಾಯಂದಿರಿಂದ ಕೇಳುತ್ತಿರುತ್ತಾರೆ ಎಂದು ಅಧ್ಯಯನ ತಿಳಿಸುತ್ತದೆ.

ಪ್ರವಾದಿವರ್ಯರು(ಸ) ಬಹಳ ಸಂಕ್ಷಿಪ್ತವಾಗಿ ಇದನ್ನು ಅರ್ಥ ಗರ್ಭಿತವಾಗಿ ಸೂಚಿಸಿದ್ದಾರೆ. “ಸತ್ಯವಿಶ್ವಾಸಿಯು ಆಕ್ಷೇಪದ ಮಾತುಗಳನ್ನು ಹಿಡಿದುಕೊಂಡು ನಡೆಯುವ ವನೋ, ಶಪಿಸುವವನೋ, ಅಸಭ್ಯ ಮಾತುಗಳನ್ನು ಉದುರಿಸುವವನೋ ಆಗಿರಲಾರ! ಮಕ್ಕಳ ವ್ಯಕ್ತಿತ್ವವನ್ನೇ ನಾಶಪಡಿಸುವ ಮಾತುಗಳ ಬದಲು ಅವರನ್ನು ಪ್ರೀತಿಸಿ ಪ್ರಶಂಸಿಸುತ್ತಾ ಗೌರವಾದರದ ಮಾತುಗಳನ್ನು ಬಳಸೋಣ.

“ನಾವು ನಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡುತ್ತೇವೆ. ಆಹಾರ, ಆಟದ ಸಾಮಾನುಗಳು, ಮನರಂಜನೆ, ಶಿಕ್ಷಣ ಹೀಗೆ ಎಲ್ಲವನ್ನೂ ನೀಡುತ್ತೇವೆ. ಆದರೆ ಮಾತುಗಳಿಂದ ಅವರನ್ನು ಕೊಲ್ಲುತ್ತೇವೆ. ಇದು ಕುರ್‌ಆನಿನ ಶಿಕ್ಷಣಕ್ಕೆ ವಿರುದ್ಧವಾದುದು.”