ಇನ್ನು ಮುಂದೆ ಹಜ್ಜ್ ಸುಲಭ: ಸೌದಿಯಿಂದ ಕ್ರಾಂತಿಕಾರಿ ಯೋಜನೆ

0
262

ಸನ್ಮಾರ್ಗ ವಾರ್ತೆ

ಜಿದ್ದಾ: ಜಗತ್ತಿನ ಯಾವುದೇ ವ್ಯಕ್ತಿ ಆಯಾ ರಾಷ್ಟ್ರದ ಸರ್ಕಾರಿ ವ್ಯವಸ್ಥೆ ಅಥವಾ ಸಂಸ್ಥೆಯ ಮೂಲಕ ಹಜ್ ನಿರ್ವಹಿಸುವುದರ ಬದಲು ವೈಯಕ್ತಿಕವಾಗಿ ಹಜ್ ನಿರ್ವಹಿಸುವುದಕ್ಕೆ ಅನುಮತಿ ಕೋರಿದರೆ ಅದನ್ನು ಮಾನ್ಯ ಮಾಡಲು ಸೌದಿ ಮುಂದಾಗಿದೆ. ಈ ಕುರಿತಂತೆ ಹೆಚ್ಚಿನ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ. ಇದು ಜಾರಿಯಾದರೆ ಭಾರತ ಸಹಿತ ಜಗತ್ತಿನ ಯಾವುದೇ ರಾಷ್ಟ್ರದ ವ್ಯಕ್ತಿ ಹಜ್ ನಿರ್ವಹಣೆಗಾಗಿ ವೈಯಕ್ತಿಕ ಕೋರಿಕೆ ಸಲ್ಲಿಸಬಹುದು.

ಈಗ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ಹಜ್ ಗುಂಪುಗಳ ಅಧೀನದಲ್ಲಿ ಮಾತ್ರ ಹಜ್ ನಿರ್ವಹಿಸುವುದಕ್ಕಾಗಿ ಸೌದಿಗೆ ಬರಬಹುದಾಗಿದೆ. ಇದೀಗ ಈ ಹೊಸ ನಿಯಮ ಜಾರಿಗೆ ಬಂದರೆ ಯಾವುದೇ ಗುಂಪುಗಳ ಹಂಗಿಲ್ಲದೆ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ಹಜ್ ನಿರ್ವಹಿಸುವುದಕ್ಕೆ ಅರ್ಜಿ ಹಾಕಬಹುದು ಮತ್ತು ವೈಯಕ್ತಿಕವಾಗಿ ಹಜ್ ನಿರ್ವಹಿಸುವುದಕ್ಕೆ ಅವಕಾಶ ಕೂಡ ಲಭಿಸಬಹುದು. ಇದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಆದರೆ ಇದು ಯಾವಾಗ ಆರಂಭವಾಗುತ್ತದೆ ಎಂಬ ವಿವರ ಲಭಿಸಿಲ್ಲ.