ಸನ್ಮಾರ್ಗ ವಾರ್ತೆ
ಚೆನ್ನೈ,ಜೂ.28: ತಮಿಳ್ನಾಡಿನ ಟಿವಿ ಚ್ಯಾನೆಲ್ ಕ್ಯಾಮರಾ ಮೆನ್ ಕೊರೋನ ಪೀಡಿತರಾಗಿ ಮೃತಪಟ್ಟಿದ್ದು ವರದಿಯಾಗಿದ್ದು ಮೃತರನ್ನು ರಾಜ್ ಟಿವಿಯ ಕೆಮರಾಮೆನ್ ವೆಲ್ಮುರುಗನ್ ಎಂದು ಗುರುತಿಸಲಾಗಿದೆ. ಅವರಿಗೆ ನಲ್ವತ್ತಾರು ವರ್ಷ ವಯಸ್ಸಾಗಿತ್ತು.
ತಮಿಳ್ನಾಡಿನಲ ಮಾಧ್ಯಮ ಕ್ಷೇತ್ರದಲ್ಲಿ ಕೊರೋನಕ್ಕೆ ಬಲಿಯಾದ ಮೊದಲ ವ್ಯಕ್ತಿ ವೆಲ್ಮುರುಗನ್ ಆಗಿದ್ದಾರೆ. ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ ಹದಿನೈದು ದಿವಸಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಭಾರತದಲ್ಲಿ ಅತೀ ಹೆಚ್ಚು ಕೊರೋನ ಪ್ರಕರಣಗಳಿರುವ ರಾಜ್ಯಗಳಲ್ಲಿ ತಮಿಳ್ನಾಡು ಕೂಡ ಒಂದು. ತಮಿಳ್ನಾಡಿನಲ್ಲಿ ಹಲವು ಪತ್ರಕರ್ತರು ಕೊರೋನಕ್ಕೆ ತುತ್ತಾಗಿದ್ದು, ಕಳೆದ 24 ಗಂಟೆಗಳಲ್ಲಿ 3713 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












