ಸನ್ಮಾರ್ಗ ವಾರ್ತೆ
ತೃಶೂರ್, ಜ. 16: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಮತ್ತು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದು ಈ ವೇಳೆ ಪೌರತ್ವ ಕಾನೂನು ಜಾರಿಗೊಳಿಗಿಸಿದ ಪ್ರಧಾನಿಯವರ ಪೌರತ್ವ ದಾಖಲೆಯನ್ನು ಕೇಳಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿದೆ. ಕೇರಳದ ವಿಆರ್ ಪುರಂ ನ ಜೋಷಿ ಎಂಬವರು ಅರ್ಜಿ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ. ದೇಶದ ಈಗಿನ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಭಾರತ ಪ್ರಜೆ ಆಗಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ಅಧಿಕೃತ ದಾಖಲೆಗಳನ್ನು ಮಾಹಿತಿ ಹಕ್ಕು ಪ್ರಕಾರ ಕೊಡಬೇಕೆಂದು ಜೋಷಿ ಆಗ್ರಹಿಸಿದ್ದಾರೆ. ಪ್ರಧಾನಿಯ ಪೌರತ್ವದಾಖಲೆ ಸಿಕ್ಕಿದರೆ ಜನರು ಅದರಂತೆ ದಾಖಲೆಗಳನ್ನು ಇಟ್ಟುಕೊಂಡರೆ ಸಾಕಾಗುತ್ತದೆ. ಅದಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಜೋಷಿ ಹೇಳಿದರು.
ಪ್ರಧಾನಿಯ ಪದವಿ ಸರ್ಟಿಫಿಕೆಟ್ ಕುರಿತು ವಿವಾದ ಇರುವಾಗಲೇ ಪೌರತ್ವ ದಾಖಲೆ ಕೇಳಿ ಅರ್ಜಿ ಸಲ್ಲಿಸಲಾಗಿದೆ.












