ಕೊರೋನ: ಬೇರೆ ರಾಜ್ಯದವರು ಕರ್ನಾಟಕ ಪ್ರವೇಶಿಸಲು ಆರ್‌ಟಿಪಿಸಿಆರ್ ಕಡ್ಡಾಯ

0
473

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೇರಳ ಸಹಿತ ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಗಾಗಿರಬೇಕಾಗಿದೆ. ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಕೂಡ ಆರ್‌ಟಿಪಿಸಿಆರ್ ಸರ್ಟಿಫಿಕೆಟ್ ಹಾಜರುಪಡಿಸಬೇಕಿದೆ. ವಿಮಾನ, ಬಸ್, ರೈಲು, ಟ್ಯಾಕ್ಸಿ, ಖಾಸಗಿ ವಾಹನಗಳಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವವರು 72 ಗಂಟೆಗಳೊಳಗೆ ಪಡೆದುಕೊಂಡ ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟನ್ನು ತೋರಿಸಬೇಕು.

ಕೇರಳದಿಂದ ಬರುವವರಿಗೆ ಈ ಹಿಂದೆ ಆರ್‌ಟಿಪಿಸಿಆರ್ ನೆಗಟಿವ್ ಸರ್ಟಿಫಿಕೆಟ್ ಕಡ್ಡಾಯದಿಂದ ಸಡಿಲಿಕೆ ಮಾಡಲಾಗಿತ್ತು. ಎರಡು ಡೋಸ್ ವ್ಯಾಕ್ಸಿನ್ ಸ್ವೀಕರಿಸಿದವರು ವ್ಯಾಕ್ಸಿನ್ ಸರ್ಟಿಫಿಕೆಟ್ ಕೊಟ್ಟರೆ ಸಾಲುತ್ತಿತ್ತು. ವ್ಯಾಕ್ಸಿನ್ ತೆಗೆಯದವರು 72 ಗಂಟೆಗಳೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಕಡ್ಡಾಯವಿತ್ತು. ಆದರೆ ಈ ಆದೇಶವನ್ನು ಈಗ ನವೀಕರಿಸಲಾಗಿದೆ.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾ ಗಡಿಗಳ ಎಲ್ಲ ಸ್ಥಳಗಳಲ್ಲಿ ತಪಾಸಣೆ ತೀವ್ರಗೊಳಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಾಗಿದ್ದು ಕಾನೂನು ಉಲ್ಲಂಘಿಸುವವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಸರಕಾರಿ ಆದೇಶದಲ್ಲಿದೆ.