ಸನ್ಮಾರ್ಗ ವಾರ್ತೆ
ನವದೆಹಲಿ: ಗಾತ್ರದ ಮಿತಿಯನ್ನು ಮೀರಿದ ಚಾಕುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಬ್ಲಿಂಕಿಟ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ತನಿಖೆಯ ವೇಳೆ ಅಪರಾಧಗಳಲ್ಲಿ ಭಾಗಿಯಾದ ಕೆಲವರು ಆನ್‌ಲೈನ್ ಮೂಲಕ ಚಾಕು ಖರೀದಿಸಿರುವುದು ಪತ್ತೆಯಾಯಿತು. ನಿಯಮಗಳ ಪ್ರಕಾರ, 7.62 ಸೆಂ.ಮೀ ಉದ್ದ ಮತ್ತು 1.72 ಸೆಂ.ಮೀ ಅಗಲ ಮೀರಿದ ಬ್ಲೇಡ್‌ಗಳ ಮಾರಾಟ ನಿಷೇಧವಾಗಿದೆ. ಪೊಲೀಸರು ಆರ್ಡರ್ ಮಾಡಿದ ಚಾಕುವಿನ ಬ್ಲೇಡ್ ಸುಮಾರು 8 ಸೆಂ.ಮೀ ಉದ್ದ ಮತ್ತು 2.5 ಸೆಂ.ಮೀ ಅಗಲವಾಗಿತ್ತು ಎಂದು ತಿಳಿಸಿದ್ದಾರೆ. ಚಾಕುವಿನ ಬ್ಲೇಡ್ ಗಾತ್ರವು ಸರ್ಕಾರಿ ಅಧಿಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ತಪಾಸಣೆಯಲ್ಲಿ 16 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗುರುಗ್ರಾಮ್‌ನ ಗೋದಾಮಿನಿಂದ ಇನ್ನೂ 32 ಚಾಕುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.












