ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ಜಾರಿಯಾಗಲ್ಲ: ದೀದಿ ನಿಮ್ಮನ್ನೂ ನಿಮ್ಮ ಆಸ್ತಿಯನ್ನೂ ಸಂರಕ್ಷಿಸುತ್ತಾಳೆ: ಮಮತಾ ಬ್ಯಾನರ್ಜಿ

0
362

ಸನ್ಮಾರ್ಗ ವಾರ್ತೆ

ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳು ಒಗ್ಗಟ್ಟಾಗಿ ಇರಬೇಕು ಮತ್ತು ಸುಳ್ಳು ಪ್ರಚಾರಗಳನ್ನು ತಿರಸ್ಕರಿಸಬೇಕು ಎಂದು ಅವರು ಕರೆಕೊಟ್ಟಿದ್ದಾರೆ. ವಕ್ಫ್ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಯ ನಡುವೆ ಅವರ ಈ ಹೇಳಿಕೆ ಹೊರ ಬಿದ್ದಿದೆ

ಅಲ್ಪಸಂಖ್ಯಾತರಿಗಾಗಿ ಮತ್ತು ಅವರ ಆಸ್ತಿಗಾಗಿ ನಾನು ಹೋರಾಡುವೆ. ವಕ್ಫ್ ತಿದ್ದುಪಡಿ ಕಾಯ್ದೆಯು ನಿಮಗೆ ನೋವುಂಟು ಮಾಡಿದೆ ಅನ್ನೋದು ನನಗೆ ಗೊತ್ತು. ಪಶ್ಚಿಮ ಬಂಗಾಳದಲ್ಲಿ ವಿಭಜಿಸಿ ಆಳುವ ತಂತ್ರ ನಡೆಯಲ್ಲ. ದೀದಿ ನಿಮ್ಮನ್ನೂ ನಿಮ್ಮ ಆಸ್ತಿಯನ್ನೂ ಸಂರಕ್ಷಿಸುತ್ತಾಳೆ. ಬಂಗಾಳದಲ್ಲಿ ಜೀವಿಸುವವರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಜಕೀಯ ಸಂಚಿಗೆ ಸಮುದಾಯಗಳು ಬಲಿಬೀಳಬಾರದು ರಾಜಕೀಯದ ಮಂದಿ ನಿಮ್ಮನ್ನು ಪ್ರಚೋದಿಸಿ ಬಲೆಗೆ ಸಿಲುಕಿಸಲು ಯತ್ನಿಸುತ್ತಾರೆ. ನೀವು ಅದಕ್ಕೆ ಬಲಿ ಬೀಳಬಾರದು. ನಾವು ಜೊತೆಯಾಗಿ ನಿಂತರೆ ಜಗತ್ತನ್ನೇ ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.

ವಿಭಜಿಸುವ ಅಜೆಂಡಾವನ್ನೇ ಬಂಗಾಳದಲ್ಲಿ ಬಿಜೆಪಿ ಹೊಂದಿದೆ ಮೊದಲು ಅವರು ಸಂವಿಧಾನವನ್ನು ಗೌರವಿಸಲು ಕಲಿಯಬೇಕು. ಆ ಬಳಿಕವೇ ಅವರು ಹಕ್ಕುಗಳ ಬಗ್ಗೆ ಮಾತಾಡಲಿ ಎಂದು ಮಮತಾ ಹೇಳಿದ್ದಾರೆ.