ಗುಜರಾತ್ ಸಾಮೂಹಿಕ ಹತ್ಯೆ; ಮೋದಿ ವಿರುದ್ಧ ಟ್ವೀಟ್ ತೆಗೆದು ಹಾಕಲು ಜಮ್ಮು ಕಾಶ್ಮೀರ ಪೊಲೀಸ್‍ಗೆ ಒತ್ತಡ

0
1006

ಸನ್ಮಾರ್ಗ ವಾರ್ತೆ

ಜಮ್ಮುಕಾಶ್ಮೀರ, ಎ. 23: 2002ರ ಗುಜರಾತ್ ಜನಾಂಗೀಯ ಹತ್ಯೆ ಕುರಿತು ನೀಡಿದ್ದ ಹೇಳಿಕೆಯನ್ನು ವಿಮರ್ಶಿಸಿ ಜಮ್ಮುಕಾಶ್ಮೀರ ಸೈಬರ್ ಪೊಲೀಸ್ ವಿಭಾಗ ಸೂಪರಿಟೆಂಡೆಂಟ್ ತಾಹಿರ್ ಅಶ್ರಫ್ ಮಾಡಿದ್ದ ಟ್ವೀಟ್ ವಿವಾದವಾಗಿದೆ. 2002ರ ಗಲಭೆಯ ಕುರಿತು ನರೇಂದ್ರ ಮೋದಿಯ ನಾಯಿ ಮರಿ ಹೋಲಿಕೆ ಅವರ ನಿಜವಾದ ಸ್ವಭಾವವನ್ನು ತೋರಿಸುತ್ತಿದೆ. ….ಕ್ರೌರ್ಯವಿದು ” ಎಂದು ತಾಹಿರ್ ಅಶ್ರಫ್ ಟ್ವೀಟ್ ಮಾಡಿದ್ದರು.

ರಾಜ್ಯದ ಸೈಬರ್ ಪೊಲೀಸ್ ವಿಭಾಗ ಈ ಟ್ವೀಟ್‍ ಅನ್ನು ತೆರವುಗೊಳಿಸಲು ಸೂಚಿಸಿದೆ. ಎನ್‍ಡಿಟಿವಿಯು ಅಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ನಡೆಸಿತ್ತು. ಆಗ ಅವರು, ಗುಜರಾತ್ ಜನಾಂಗೀಯ ಹತ್ಯೆಯ ಕುರಿತ ಪ್ರಶ್ನೆಗೆ ಒಂದು ನಾಯಿ ಮರಿ ಕಾರಿನಡಿಗೆ ಬಿದ್ದರೂ ತನಗೆ ನೋವಾಗುತ್ತದೆ ಎಂದು ಹೇಳಿದ್ದರು. ತಾಹಿರ್ ಅಶ್ರಫ್‍ರ ಟ್ವೀಟ್ ಅನ್ನು ಬಿಜೆಪಿ ಕಾರ್ಯಕರ್ತರು ಪುನಃ ವಿವಾದ ಮಾಡಿದ್ದಾರೆ. ಹಲವು ಮಂದಿ ಇದನ್ನು ರೀಟ್ವೀಟ್ ಮಾಡಿ ಅಶ್ರಫ್ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿದ್ದಾರೆ. ನಂತರ ಪೊಲೀಸರು ಟ್ವೀಟ್ ತೆಗೆದು ಹಾಕಲು ಅಶ್ರಫ್‍ರಿಗೆ ಸೂಚಿಸಿದ್ದಾರೆ.

ದೇಶವಿರೋಧಿ ಎಂದು ಆರೋಪಿಸಿ 26 ವರ್ಷದ ಮಹಿಳಾ ಫೋಟೊ ಜರ್ನಲಿಸ್ಟ್ ವಿರುದ್ಧ ಯುಎಪಿಎ ಹೇರಲಾದ ಬಳಿಕ ಅಶ್ರಫ್‍ರ ಟ್ವೀಟ್ ಪುನಃ ಚರ್ಚೆಗೆ ಬಂದಿದೆ. ಫ್ರೀಲ್ಯಾನ್ಸ್ ಫೋಟೊಗ್ರಾಫರ್ ಝಹ್ರಾ ದೇಶವಿರೋಧಿ ಚಟುವಟಿಕೆಗಳನ್ನು ದೊಡ್ಡದೆಂಬಂತೆ ಚಿತ್ರಿಸುತ್ತಿದ್ದಾರೆ. ಕಾನೂನು ನಿರ್ವಹಣೆ ಏಜೆನ್ಸಿಯ ವರ್ಚಸ್ಸಿಗೆ ಹಾನಿ ತರುವ ಪೋಸ್ಟ್ ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಪೊಲೀಸರು ಯುಎಪಿಎ ಹೇರಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.