ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ. 23: ದೇಶಕ್ಕೆ ಬರುವ ವಲಸಿಗರನ್ನು 60 ದಿವಸಗಳ ಕಾಲ ಸಂಪೂರ್ಣ ನಿಷೇಧಿಸಲು ಅಮೆರಿಕ ಸರಕಾರ ತೀರ್ಮಾನ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆಯ ಕುರಿತ ವಿವರಗಳನ್ನು ಹೊರಗೆ ಬಿಟ್ಟಿದ್ದು, ಕೊರೊನಾ ವ್ಯಾಪನದಿಂದ ಅಮೆರಿಕದ ಪ್ರಜೆಗಳು ಕೆಲಸ ಕಳಕೊಳ್ಳುವ ಪರಿಸ್ಥಿತಿಯಿರುವುದರಿಂದ ವಲಸೆಗಾರರಿಗೆ ನಿಷೇಧ ಹೇರಲಾಗುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿಯ ಆಧಾರದಲ್ಲಿ ನಿಷೇಧವನ್ನು ಎಷ್ಟರವರೆಗೆ ಮುಂದುವರಿಸಬೇಕೆನ್ನುವ ತೀರ್ಮಾನ ನಂತರ ಮಾಡಲಾಗುವುದು.
ಅಮೆರಿಕದಲ್ಲಿ ಕಾಯಂ ವಾಸ ಬಯಸುವ ಗ್ರೀನ್ ಕಾರ್ಡ್ನವರಿಗೆ ಮಾತ್ರ ನಿಷೇಧ ಅನ್ವಯವಾಗಲಿದೆ. ತಾತ್ಕಾಲಿಕವಾಗಿ ಅಮೆರಿಕ ಪ್ರವೇಶಿಸುವವರಿಗೆ ನಿಷೇಧ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಉದ್ಯೋಗ ಇಲ್ಲದ ಪ್ರಜೆಗಳಿಗೆ ಉದ್ಯೋಗ ಖಾತರಿ ಪಡಿಸುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಕೆಲಸದಿಂದ ಪ್ರಜೆಗಳನ್ನು ತೆಗೆದು ಹಾಕಿ ಅವರ ಬದಲಿಗೆ ಹೊಸ ವಲಸಿಗರನ್ನು ನೇಮಕಗೊಳಿಸುವುದು ತಪ್ಪು ಮತ್ತು ಅನ್ಯಾಯವಾಗಿದೆ. ನಾವು ಮೊದಲು ಪ್ರಜೆಗಳಾಗಿರುವ ಕಾರ್ಮಿಕರನ್ನು ಸಂರಕ್ಷಿಸಬೇಕಾಗಿದೆ ಎಂದು ಟ್ರಂಪ್ ಹೇಳಿದರು. ಲಾಕ್ ಡೌನ್ ನಂತರ ದೇಶದಲ್ಲಿ ಕಳೆದವಾರದವರೆಗೆ 22 ದಶಲಕ್ಷ ಮಂದಿ ನಿರುದ್ಯೋಗ ಸೌಲಭ್ಯಗಳಿಗೆ ಮನವಿ ಸಲ್ಲಿಸಿದ್ದಾರೆ. ವಲಸೆಗಾರರಿಗೆ ಅಮೆರಿಕದಲ್ಲಿ ಜೀವಿಸಲು ಮತ್ತು ಕೆಲಸ ಮಾಡಲು ಇದ್ದ ಅನುಮತಿಯನ್ನು ಟ್ರಂಪ್ ಸರಕಾರ ನಿಷೇಧಿಸಿದೆ. ಕಳೆದ ಒಂದು ವರ್ಷ ಲಕ್ಷ ಮಂದಿಗೆ ಅಮೆರಿಕ ಗ್ರೀನ್ ಕಾರ್ಡ್ ನೀಡಿತ್ತು.
ಟ್ರಂಪ್ರ ವಲಸೆ ನಿಷೇಧದ ವಿರುದ್ಧ ಡೆಮಕ್ರಾಟಿಕ್ ಪಾರ್ಟಿ ಬಲವಾಗಿ ಪ್ರತಿಭಟಿಸಿದೆ. ಕೊರೊನಾ ಪ್ರತಿರೋಧಿಸುವಲ್ಲಿ ಟ್ರಂಪ್ ವಿಫಲವಾಗಿದ್ದು ಬೇರೆಡೆಗೆ ಗಮನ ಹರಿಸುಲಿಕ್ಕಾಗಿ ವಲಸೆ ನಿಷೇಧ ಜಾರಿಗೊಳಿಸುತ್ತಿದ್ದಾರೆ ಎಂದು ಭಾರತೀಯ ಮೂಲದ ಕಮಲಾ ಹಾರಿಸ್ ಆರೋಪಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












