ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಅದಾನ್ ಕೊಡುವುದನ್ನು ನಿಷೇಧಿಸಬೇಕು- ಶಿವಸೇನೆ

0
818

ಸನ್ಮಾರ್ಗ ವಾರ್ತೆ

ಮುಂಬೈ,ಡಿ.3: ಮಸೀದಿಗಳಲ್ಲಿ ಲೌಡ್‌ಸ್ಪೀಕರಿನಲ್ಲಿ ಅದಾನ್ ಕೊಡುವುದನ್ನು ನಿಷೇಧಿಸಬೇಕೆಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ. ಮಸೀದಿಗಳ ಲೌಡ್ ಸ್ಪೀಕರ್‌ಗಳು ಶಬ್ದ ಮಾಲಿನ್ಯ ಮಾಡುತ್ತಿವೆ. ಇದು ಪರಿಸರಕ್ಕೆ ಹಾನಿಕರವಾಗಿದೆ ಎಂದು ಆರೋಪಿಸಲಾಗಿದ್ದು, ಆದುದರಿಂದ ಮಸೀದಿಯ ಲೌಡ್‍ಸ್ಪೀಕರ್ ನಿಷೇಧಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರಕಾರ ತರಬೇಕಾಗಿದೆ ಎಂದು ಆಗ್ರಹಿಸಲಾಗಿದೆ.

ಇದೇ ವೇಳೆ ಶಿವಸೇನೆ ಹಿಂದುತ್ವವನ್ನು ದೂರ ಎಸೆದಿದೆ ಎಂಬ ಬಿಜೆಪಿಯ ಆರೋಪವನ್ನು ಪತ್ರಿಕೆ ಟೀಕಿಸಿದೆ. ಮುಸ್ಲಿಂ ಮಕ್ಕಳಿಗೆ ಅದಾನ್ ಸ್ಪರ್ಧೆ ಆಯೋಜಿಸಬೇಕೆಂದು ಶಿವಸೇನೆ ನಾಯಕ ಪಾಂಡುರಂಗ ಸ್ಕಾಪಾಲಿಯ ಈ ಹಿಂದೆ ಆಗ್ರಹಿಸಿದ್ದರು. ಇದನ್ನು ಬಿಜೆಪಿ ಟೀಕಿಸಿತ್ತು. ನಂತರ ಮಸೀದಿಗಳ ಲೌಡ್ ಸ್ಪೀಕರ್‌ಗೆ ನಿಷೇಧ ಹೇರಬೇಕೆಂದು ಹೇಳಿ ಶಿವಸೇನೆ ರಂಗಪ್ರವೇಶಿಸಿದೆ.