ರೋಗಿಗಳಿಂದ ಹಣ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ; ಆಸ್ಪತ್ರೆಯಲ್ಲಿ ದರ ಪಟ್ಟಿ ಅಳವಡಿಸಲು ಆದೇಶ

0
73

ಸನ್ಮಾರ್ಗ ವಾರ್ತೆ

ಬೆಂಗಳೂರು, ನ.12: ಜನ ಖಾಸಗಿ ಆಸ್ಪತ್ರೆಗೆ ಕಾಲಿಟ್ಟರೆ ಮುಗಿಯಿತು, ಕುಳಿತರೆ, ನಿಂತರೆ ಬಿಲ್. ಸುಲಿಗೆಗೆ ಮುಂದಾಗಿವೆ ಖಾಸಗಿ ಆಸ್ಪತ್ರೆಗಳು. ಜ್ವರ, ಕೆಮ್ಮು, ನೆಗಡಿ ಅಂತಾ ಹೋದರೆ ಸಾವಿರಾರು ರೂಪಾಯಿ ಬಿಲ್ ಮಾಡ್ತಾರೆ. ಇದು ಜನರ ಚಿಂತೆ, ಪರದಾಟಕ್ಕೆ ಕಾರಣವಾಗಿದೆ.

ಹೀಗಾಗಿ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಕೆಪಿಎಂಇ ಮುಖಾಂತರ ಅಂಗೀಕೃತವಾದ ಆಸ್ಪತ್ರೆಗಳು ಚಿಕಿತ್ಸಾ ದರ ಪಟ್ಟಿಯನ್ನ ಆಸ್ಪತ್ರೆಯ ಅವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಅಳವಡಿಸಬೇಕು. ಯಾವ ಯಾವ ಚಿಕಿತ್ಸೆಗಳಿಗೆ ದರ ಎಷ್ಟು ಎಂಬ ದರ ನಿಗದಿಯ ಪಟ್ಟಿಯನ್ನ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶ ನೀಡಿದೆ.

ಹೌದು, ಕೆಪಿಎಂಇ ಮುಖಾಂತರ ಅಂಗೀಕೃತವಾದ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ದರ ಪಟ್ಟಿ ಬೋರ್ಡ್ ಗಳನ್ನುಅ ಆಸ್ಪತ್ರೆಗಳ ಹೊರಗೆ ಅಳವಡಿಸುವಂತೆ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಯಾವೆಲ್ಲ ಚಿಕಿತ್ಸೆಗೆ ಏನು ದರ ಅಂತಾ ನಿಗದಿ ಮಾಡಿರುವ ಪಟ್ಟಿಯನ್ನು ಆಸ್ಪತ್ರೆಯ ಅವರಣದಲ್ಲಿ ಸಾರ್ವಜನಿಕರಿಗೆ ತೊರುವ ರೀತಿಯಲ್ಲಿ ಹಾಕಬೇಕು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಸ್ಪತ್ರೆಗಳ ಹೊರ ಭಾಗದಲ್ಲಿ ದರ ಪಟ್ಟಿ ಅಳವಡಿಸಬೇಕು. ಇಲ್ಲದಿದ್ದರೆ ದರ ಪಟ್ಟಿ ಅಳವಡಿಸದ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದೆ.

ಖಾಸಗಿ ಆಸ್ಪತ್ರೆ ಅಂದರೆ ಜನ ಬೆಚ್ಚಿಬೀಳ್ತಾರೆ. ಚಿಕಿತ್ಸೆಗೆ ಹೋದರೆ ಸಾಕು ಲಕ್ಷ ಲಕ್ಷ ಸುಲಿಗೆ ಮಾಡ್ತೀದ್ದು. ಹೀಗಾಗಿ ಆರೋಗ್ಯ ಇಲಾಖೆ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳಿಗೆ ಶಾಕ್ ನೀಡಲು ಮುಂದಾಗಿದ್ದು ಚಿಕಿತ್ಸಾ ದರ ಪಟ್ಟಿ ಅಳವಡಿಸುವಂತೆ ಹೇಳಿದೆ. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಅಂತಾ ಕಾದು ನೋಡಬೇಕಿದೆ.