ಅಲ್ ಉಸ್ತಾದ್ ಸಿದ್ದೀಕ್ ಹಸನ್: ಸುಹೈಲ್ ಉಪ್ಪಿನಂಗಡಿಯವರ ಬರಹ

0
1383

ಬರಹ: ಸುಹೈಲ್ ಉಪ್ಪಿನಂಗಡಿ

ಇಂದು ನಮ್ಮನ್ನಗಲಿದ ಜಮಾಅತೆ ಇಸ್ಲಾಮೀ ಹಿಂದ್ ನ‌ ಹಿರಿಯ ನಾಯಕ, ವಿದ್ವಾಂಸ ಪ್ರೊಫೆಸರ್ ಸಿದ್ದೀಕ್ ಹಸನ್ ರವರ ಕುರಿತು…

ಕೊಟ್ಟದ್ದು ಅಲ್ಲಾಹನು ಮರಳಿ ಪಡೆದದ್ದೂ ಅಲ್ಲಾಹನು. ರಹಿಮಲ್ಲಾಹು ಅಲೈಕ ಯಾ ಸಯ್ಯಿದೀ….

ವಿಷನ್ 2016 ರ ಹಿಂದೆ ಸುತ್ತಾಡಿ ಸಿದ್ದೀಕ್ ಹಸನ್ ರವರು ಹಾಸಿಗೆ ಹಿಡಿದರೆಂದರೆ ಅತಿಶಯೋಕ್ತಿಯಾಗಲಾರದೆಂದು ನಂಬುತ್ತೇನೆ. ಇಸ್ಲಾಮೀ ಕಾರ್ಯಚಟುವಟಿಕೆಯಲ್ಲಿ ನನಗೆ ಸಿದ್ದೀಕ್ ಹಸನ್ ರವರು ಆದರ್ಶಪ್ರಾಯ ವ್ಯಕ್ತಿಯಾಗಿರುವುದರಿಂದ ಅವರ ಕುರಿತು ಒಂದೆರಡು ಮಾತುಗಳನ್ನು ಹೇಳದಿರಲಾಗದು.

ಸಿದ್ದೀಕ್ ಹಸನ್ ರವರು ಸಮಾಜ ಸೇವೆಯಲ್ಲಿ ತಮ್ಮ ಅಮೂಲ್ಯವಾದ ಜೀವನವನ್ನು ಸವೆಸಿ ಆಧುನಿಕ ಕಲ್ಟಾಗಲು (Midern Cult) ಅವರು ಒಮ್ಮೆಯೂ ಪ್ರಯತ್ನಿಸಲಿಲ್ಲ. ಅವರ ನಿಷ್ಕಳಂಕ ಸೇವೆಯಿಂದ ಅವರೊಬ್ಬ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರು.

ಅವರ ಆವೇಶ, ಅವರ ಸರಳ ಬದುಕು ಮತ್ತು ಅವರ ಕಠಿಣ ಪರಿಶ್ರಮ ನಮಗೆಲ್ಲರಿಗೂ ಮಾದರಿಯಾಗಬೇಕು. ಈ ಪರಿಶ್ರಮ ಕೇವಲ ಸಂಘಟನಾ ವರ್ತುಲದಲ್ಲಿ ಮಾತ್ರ ಇದ್ದದ್ದಲ್ಲ. ಬದಲಾಗಿ ಕೇರಳ ರಾಜ್ಯದಿಂದ ಹಿಡಿದು ಆಚೆ ದೆಹಲಿಯವರೆಗೂ ಅವರ ಮಹನೀಯ ಉಪಸ್ಥಿತಿಯನ್ನು (Honourable Existence) ಅವರ ಪರಿಶ್ರಮದ ಮೂಲಕ ಅವರಿಗೆ ಪ್ರದರ್ಶಿಸಲು ಸಾಧ್ಯವಾಗಿದೆ.

ಅಲ್ಲ! ಹಾಗಲ್ಲ! ಅದನ್ನು ಅಲ್ಲಾಹನೇಅಲ್ ಉಸ್ತಾದ್ ಸಿದ್ದೀಕ್ ಹಸನ್ ಈ ಸಮಾಜದೆದುರು ಅನಾವರಣಗೊಳಿಸಿದ್ದಾನೆ ಎನ್ನುವುದೇ ಸರಿ. ದ’ಅ್’ವತ್ ನಗರದ ಹಿರಾ ಸಮ್ಮೇಳನದಲ್ಲಿ ಮತ್ತು ಕೊಚ್ಚಿಯ ಮರೈನ್ ಡ್ರೈವ್ ನಲ್ಲಿ ನಡೆದ ಮೀಡಿಯಾ ಒನ್ ಪ್ರಸ್ತುತಿ ಕಾರ್ಯಕ್ರಮದಲ್ಲಿ ಭಕ್ತಿ-ಶ್ರದ್ಧೆ ಹಾಗೂ ಈಮಾನಿನ ಆವೇಶದಿಂದ ಭಾಷಣ ಮಾಡುತ್ತಿದ್ದ ಅವರನ್ನು ಕೇರಳದ ಜಿಲ್ಲಾ ಸಮ್ಮೇಳನವೊಂದರಲ್ಲಿ ಹದಗೆಟ್ಟ ಆರೋಗ್ಯದ ಕಾರಣದಿಂದಾಗಿ ನಿರರ್ಗಳವಾಗಿ ಭಾಷಣ ಮಾಡಲು ಸಾಧ್ಯವಿಲ್ಲದ ಸಾಮಾನ್ಯ ವ್ಯಕ್ತಿ ಎಂಬಂತೆ ಕಂಡರು. ಅವರ ಹದಗೆಟ್ಟ ಆರೋಗ್ಯದ ಸ್ಥಿತಿ ನೋಡಿ ಅನಿವಾಸಿ ಭಾರತೀಯನಾಗಿದ್ದ ನಾನು ಅಂದು ತುಂಬಾ ಅತ್ತದ್ದಿದೆ. ಅವರು ಹಲವು ಕನಸನ್ನು ಹೊತ್ತು ಕೊಂಡು ಭಾರತದ ಇಕ್ಕೆಲಗಳಲ್ಲಿ ತಿರುಗುತ್ತಿದ್ದರು. ಅದು ಸಾಕಾರ ಗೊಳ್ಳಲು ಅವರು ಪ್ರಯತ್ನಿಸಿದ್ದ ರೀತಿ ಅನಿರ್ವಚನೀಯ.

ಅಲ್ಲಾಹನು ಸಿದ್ದೀಕ್ ಹಸನ್ ರವರ ಕಬರ್ ಜೀವನದ ಏಕಾಂತತೆಯನ್ನು ದೂರೀಕರಿಸಲಿ. ಅವರ ಲೋಪದೋಷಗಳನ್ನು ಮನ್ನಿಸಲಿ. ತರುವಾಯ ಅಲ್ಲಾಹನು ಅವರನ್ನು ತಳಭಾಗದಲ್ಲಿ ಹಾಲು-ಜೇನಿನ ಕಾಲುವೆಗಳು ಹರಿಯುವ ಸ್ವರ್ಗದಲ್ಲಿ ಪ್ರವೇಶಗೊಳಿಸಲಿ.

ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಜಲಾಲುದ್ದೀನ್ ಉಮರಿ ಹಾಗೂ ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಾದತುಲ್ಲಾ ಹುಸೇನಿಯವರ ಜೊತೆಗೆ ದೆಹಲಿಯ ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಕಚೇರಿಯಲ್ಲಿ ಸಿದ್ದೀಕ್ ಹಸನ್ (ಮಧ್ಯದಲ್ಲಿ ಕುಳಿತವರು)