ಜೊಹಾನಸ್ಬರ್ಗ್, ಮೇ 31:ದಕ್ಷಿಣಾ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸ ಸಚಿವ ಸಂಪುಟದಲ್ಲಿ ಮಹಿಳೆಯರನ್ನು ಪುರುಷರ ಅನುಪಾತಕ್ಕೆ ಸಮಗೊಳಿಸಿ ಲಿಂಗ ಸಮಾನತೆಯನ್ನು ಸಾರುವ ಮೂಲಕ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಈ ತಿಂಗಳು ನಡೆದಿದ್ದ ಚುನಾವಣೆಯಲ್ಲಿ ರಾಮಫೋಸ ನೇತೃತ್ವದ ಆಫ್ರಿಕನ್ ಕಾಂಗ್ರೆಸ್ 57.7 ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಪಾರ್ಟಿಗೆ ಅಧಿಕಾರಕ್ಕೆ ಸಿಕ್ಕ ಬಳಿಕ ಅತಿ ಕಡಿಮೆ ಗಾತ್ರದ ಸಚಿವ ಸಂಪುಟ ಕೂಡ ಇದು ಆಗಿದೆ. ಮಾಜಿ ಅಧ್ಯಕ್ಷ ಜೇಕಬ್ ಸುಮಾರ ಸಚಿವ ಸಂಪುಟದಲ್ಲಿ ಭಾರತ ಮೂಲದ ಪ್ರವೀಣ್ ಗಾರ್ಡನ್, ಇಬ್ರಾಹೀಂ ಪಟೇಲ್ ಇದ್ದರು. ಹೊಸ ಸಂಪುಟದಲ್ಲಿಯೂ ಅವರಿದ್ದಾರೆ. ಆದರೆ ಭ್ರಷ್ಟಾಚಾರ ಆರೋಪಿತ ಜೇಕಬ್ ಸುಮರ ಸಂಪುಟದಲ್ಲಿದ್ದ ಹೆಚ್ಚಿನವರಿಗೆ ರಾಮಫೋಸ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ.












