ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರಷ್ಯಾದ ಸ್ಪುಟ್ನಿಕ್-5 ವ್ಯಾಕ್ಸಿನ್ ಅನ್ನು ಭಾರತದಲ್ಲಿ ನಿಯಂತ್ರಿತವಾಗಿ ಉಪಯೋಗಿಸಲು ಅನುಮತಿ ನೀಡಲಾಗಿದೆ. ಡ್ರಗ್ಸ್ ಕಂಟ್ರೋಲರ್ ಅಧೀನದ ತಜ್ಞ ಸಮಿತಿ ಸೋಮವಾರ ಸೇರಿದ ಸಭೆಯಲ್ಲಿ ವ್ಯಾಕ್ಸಿನ್ ತುರ್ತಾಗಿ ಪ್ರಾಮುಖ್ಯತೆ ಇರುವಲ್ಲಿ ನಿಯಂತ್ರಿತವಾಗಿ ಉಪಯೋಗಿಸಬಹುದು ಎಂದು ಅನುಮತಿ ನೀಡಿತು.
ರಷ್ಯದ ಗಮಲೆಯ ರಿಸರ್ಚ್ ಇನ್ಸಿಟಿಟ್ಯೂಟ್ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ಇದಾಗಿದ್ದು ವಿವಿಧ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತಳೆಯಲಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ.
ಭಾರತದಲ್ಲಿ ಅನುಮತಿ ಲಭಿಸಿದ ಮೂರನೇ ವ್ಯಾಕ್ಸಿನ್ ಸ್ಪುಟ್ನಿಕ್ 5 ಆಗಿದೆ. ಸೀರಂ ಇನ್ಸಿಟಿಟ್ಯೂಟಿನ ಕೊವಿಶೀಲ್ಡ್, ಭಾರತ್ ಬಯೊಟೆಕ್ನ ಕೊವಾಕ್ಸಿನ್ ಇನ್ನೆರಡು ವ್ಯಾಕ್ಸಿನ್ ಆಗಿದೆ. ವ್ಯಾಕ್ಸಿನ್ ಕೊರತೆ ಇರುವುದರಿಂದ ವ್ಯಾಕ್ಸಿನ್ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಪುಟ್ನಿಕ್ 5 ತುರ್ತು ಬಳಕೆಗಾಗಿ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.












