ಚೀನಾ ಸರಕಾರದ ವಿರುದ್ಧ ಟೀಕೆ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ನಾಪತ್ತೆ

0
496

ಸನ್ಮಾರ್ಗ ವಾರ್ತೆ

ಬೀಜಿಂಗ್,ಜ.4: ಚೀನಾ ಸರಕಾರದ ವಿರುದ್ದ ವಿವಾದತ್ಮಕ ಹೇಳಿಕೆ ನೀಡಿದ ಬೆನ್ನಿಗೆ ಆಲಿಬಾಬಾ ಸಂಸ್ಥಾಪಕ ಚೀನದ ಟೆಕ್ ಕೋಟ್ಯಾಧಿಪತಿ ಜಾಕ್ ಮಾ ಎರಡು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.

ಜಾಕ್ ಮಾ ಟ್ಯಾಲೆಂಟ್ ಶೋ ಆಫ್ರಿಕನ್ ಬಿಸಿನೆಸ್ ಹೀರೋಸ್‍ನ ಕೊನೆ ಎಪಿಸೋಡಿನಲ್ಲಿ ಭಾಗವಹಿಸಿಲ್ಲ. ಅವರ ನಿಗೂಢ ನಾಪತ್ತೆಯು ವದಂತಿಗಳಿಗೆ ಕಾರಣವಾಗಿದೆ. ಅಕ್ಟೊಬರ್ 24ಕ್ಕೆ ನಡೆದ ಬಿಸಿನೆಸ್ ಕಾನ್ಫರೆನ್ಸ್‌ನಲ್ಲಿ ಜಾಕ್ ಮಾ ಮಾಡಿದ ಭಾಷಣ ವಿವಾದಕ್ಕೆ ಗುರಿಯಾಗಿತ್ತು. ಚೀನದ ನಿಯಂತ್ರಣದಲ್ಲಿರುವ ಬ್ಯಾಂಕ್‍ಗಳು ಅವಕಾಶವನ್ನು ಕಳೆಕೊಳ್ಳುತ್ತಿದೆ. ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ನೇತೃತ್ವದ ದೇಶದ ವ್ಯಾಪಾರ ನಿಯಂತ್ರಣ ಕೌನ್ಸಿಲ್ ಕಾಲಹರಣಗೊಂಡ ಶಿಲಾಯುಗಕ್ಕೆ ಸಮಾನವಾದ ತತ್ವಗಳಲ್ಲಿ ಕೆಲಸ ಮಾಡುತ್ತಿದೆ. ಹೊಸ ವ್ಯವಸ್ಥೆ ರೂಪಿಸಬೇಕೆಂದು ಅವರು ಹೇಳಿದ್ದರು.

ಜಾಕ್ ಮಾರ ಟೀಕೆಯ ಬೆನ್ನಿಗೆ ಅವರ ಗ್ರೂಪ್ ವಿರುದ್ಧ ಚೀನ ಸರಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ವರದಿಯಾಗಿತ್ತು. ಟೀಕೆ ಅವರ ಮತ್ತು ಅವರ ಉಪಕಂಪೆನಿಗಳ ವಿವರಗಳಿಗೆ ಬೃಹತ್ ಪ್ರತಿಕೂಲವಾಗಿ ಬಾಧಿಸಿತ್ತು. ಶೇರು ಮೌಲ್ಯ ಕಡಿಮೆಯಾಗಿತ್ತು. ನಷ್ಟಹೆಚ್ಚಿದಾಗ ಅತ್ಯಂತ ಶ್ರೀಮಂತರ ಪಟ್ಟಿಯಿಂದ ಜಾಕ್ ಮಾ ಕುಸಿದರು. ನಂತರ ಜಾಕ್ ಮಾ ಸಾರ್ವಜನಿಕವಾಗಿ ಕಂಡು ಬಂದಿಲ್ಲ. ಜಾಕ್‍ರ ಬದಲು ಆಲಿಬಾಬಾದ ಎಕ್ಸಿಕ್ಯೂಟಿವ್ ಲೂಸಿ ಪೆಂಗ್ ಆಫ್ರಿಕನ್ ಬಿಸಿನೆಸ್ ಹೀರೋಸಿನಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದರು. ಬೀಜಿಂಗ್ ಕಾರ್ಯಕ್ರಮದ ಜಡ್ಜ್ ಸ್ಥಾನದಿಂದ ಅವರ ಚಿತ್ರವನ್ನು ಕೂಡ ತೆಗೆದು ಹಾಕಲಾಗಿದೆ. ಆದರೆ, ಸಮಯದ ಕೊರತೆಯಿಂದ ಜಾಕ್ ಮಾ ಕೊನೆಯ ಶೆಡ್ಯೂಲಿನಲ್ಲಿ ಭಾಗವಹಿಸಿಲ್ಲ ಎಂದು ಆಲಿಬಾಬಾ ವಕ್ತಾರ ಫೈನಾನ್ಸಿಯಲ್ ಟೈಮ್ಸ್‌ಗೆ ತಿಳಿಸಿದ್ದರು.