ಬಂದರ್ ಟೆಂಪೋ ಚಾಲಕ-ಮಾಲಕರ ಸಂಘಕ್ಕೆ ಚಾಲನೆ

0
183

ಸನ್ಮಾರ್ಗ ವಾರ್ತೆ
ಮಂಗಳೂರು: ಬಂದರ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು‌. ಇದರ ಉದ್ಘಾಟನಾ ಕಾರ್ಯಕ್ರಮವು ಪೋಲಿಸ್ ಲೈನ್‌ನಲ್ಲಿರುವ ನಾಸಿಕ್ ಬಿ. ಎಚ್ ಬಂಗೇರ ಸಭಾ ಭವನದಲ್ಲಿ ನಡೆಯಿತು.

ಸಂಘದ ಲೋಗೋವನ್ನು ಅನಾವರಣಗೊಳಿಸಿ
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾಡಿದ ಮಂಗಳೂರು ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೇಪಾಡಿಯವರು, “ಸರ್ಕಾರದ ವತಿಯಿಂದ ಇತರ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ಟೆಂಪೋ ಚಾಲಕರಿಗೆ ಸಿಗುವಂತಾಗಬೇಕು. ಟೆಂಪೋ ಚಾಲಕರನ್ನು ಸರ್ಕಾರ ಯಾಕೆ ಕಡೆಗಣಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಸಂಘಟಿತ ಹೋರಾಟಕ್ಕೆ ಬಲವಿದೆ. ಎಲ್ಲರೂ ಒಗ್ಗಟ್ಟಾಗಿ ನಿಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಬೇಕಿದೆ. ಈಗ ನೀವು ಮಾಡುವ ಪ್ರಯತ್ನ ಮುಂದೆ ನಿಮಗೆ ಅನುಕೂಲವಾಗಲಿದೆ ಎಂದು ಸಲಹೆ ಇತ್ತರು.

ಇನ್ನೊರ್ವ ಅಥಿತಿಯಾಗಿ ಭಾಗವಹಿಸಿದ ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಮಾತನಾಡಿ, ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ತುಳು ನಾಡ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ರಂಜಿತ್ ಶೆಟ್ಟಿ ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿಯ ದೇವದಾಸ್ ಎನ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಮಕ್ಬೂಲ್ ಅಹ್ಮದ್ ಕುದ್ರೋಳಿ ವಿಷಯ ಮಂಡಿಸಿದರು.

ಸ್ಟೀಲ್ ಟ್ರೇರ್ಡಸ್ ಅಸೋಸಿಯೇಸನ್‌ನ ಕಾರ್ಯದರ್ಶಿ ಮೊಯ್ದೀನ್ ಸೈಫ್‌‌ರವರು ಸಂಘದ ಧ್ವಜವನ್ನು ಅನಾವರಣ ಗೊಳಿಸಿದರು. ಕಾಸಿಮ್‌ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು‌.