ತಕ್ಷಣ ಪರಿಹಾರ ಬೇಕು ಎಂಬ ಧಾವಂತ

0
277

✍️ ಜಾಸಿಮುಲ್ ಮುತವ್ವ

ಎಲ್ಲವೂ ಕ್ಷಿಪ್ರಗತಿಯಲ್ಲಾಗ ಬೇಕೆಂಬುದು ಪ್ರಸಕ್ತ ಕಾಲದ ಬೇಡಿಕೆಯಾಗಿದೆ. ವಿವಾಹವೂ ಬೇಗ ನಡೆಯಬೇಕು. ವಿವಾಹದ ಮಾತುಕತೆಗಳೂ ಬೇಗ ಮುಗಿಯಬೇಕು. ಶಿಕ್ಷಣ, ಹವ್ಯಾಸ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ವಿವಾಹ ವಿಚ್ಛೇದನ ಕೂಡಾ ಅಷ್ಟೇ ವೇಗದಲ್ಲಿ ನಡೆಯುತ್ತದೆ. ಹೀಗೇ ಎಲ್ಲದಕ್ಕೂ ವೇಗದ ಓಟ. ಆಹಾರ ಕೂಡಾ ತಕ್ಷಣ ಸಿಗಬೇಕು. ಶಿಕ್ಷಣವೂ ವೇಗದಲ್ಲಿ ಮುಗಿಯಬೇಕು. ನೆಟ್ ಕೂಡಾ ಬೇಗ ಸಿಗಬೇಕು. ಅದರಲ್ಲೂ ಫಾಸ್ಟ್ ಇರಬೇಕು. ವಾಹನವೂ ಸ್ಪೀಡ್ ಓಡಬೇಕು. ಮುಂಜಾನೆಯಿಂದ ಸಾಯಂಕಾಲದವರೆಗೆ ವೇಗದ ಓಟದಲ್ಲಿರಬೇಕು. ಎಲ್ಲರಲ್ಲಿಯೂ ಫಾಸ್ಟ್ ಎಂಬ ಜಪ.

ಅಷ್ಟೇ ಏಕೆ ನಮ್ಮ ನಮಾಝ್, ದಿಕ್ರ್ ದುಆ ಆರಾಧನೆಗಳೆಲ್ಲವೂ ಫಾಸ್ಟಾಗಿ ಇರಬೇಕು. ಇಹಲೋಕದ ಅಂತ್ಯದ ಸೂಚನೆಯಾಗಿ ಪ್ರವಾದಿಯವರು(ಸ) ಈ ಬಗ್ಗೆ ಕಾಲದ ವೇಗದ ಓಟವನ್ನು ಪ್ರಸ್ತಾಪಿಸಿದ್ದಾರೆ. ಸಹನೆ, ವಿವೇಕ, ಸಮಾಧಾನ ಇವೆಲ್ಲವೂ ಅಪರೂಪವಾಗುತ್ತಿರುವ ಕಾಲಘಟ್ಟವಿದು.

ಇದು ನಮ್ಮ ಚರ್ಚೆ ಮತ್ತು ಅಧ್ಯಯನದ ಒಂದು ಸಮಸ್ಯೆಯಾಗಿದೆ. ನಮ್ಮನ್ನು ಭೇಟಿ ಮಾಡುವ ಕೆಲವರಿಗೆ ಫಾಸ್ಟ್ ಫುಡ್ ಸಿಗುವ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬೇಕು. ದಾಂಪತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕುಟುಂಬದ ಶೈಕ್ಷಣಿಕ ಚರ್ಚೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ತುಂಬಾ ತ್ರಾಸದಾಯಕ ವಿಚಾರ. ತನ್ನ ಮಗನ ಕೆಲವು ಸಮಸ್ಯೆಗಳೊಂದಿಗೆ ನನ್ನನ್ನು ಭೇಟಿ ಮಾಡಿದ ಓರ್ವ ತಾಯಿಯ ಜೊತೆ ನಾನು ಹೇಳಿದೆ:

“ಇದಕ್ಕೆ ಕಡಿಮೆ ಎಂದರೆ ಒಂದು ವರ್ಷದ ಚಿಕಿತ್ಸೆ ಬೇಕು. ಅದೊಂದು ವಿಶೇಷ ರೀತಿಯ ಚಿಕಿತ್ಸೆಯಾಗಿದೆ.” ಅದಕ್ಕೆ ಅವರು,

“ಸಮಸ್ಯೆಯನ್ನು ಒಂದು ತಿಂಗಳೊಳಗೆ ಪರಿಹರಿಸಿಕೊಡಲು ನಿಮ್ಮಲ್ಲಿ ಬೇರೆ ಏನಾದರೂ ದಾರಿಯಿಲ್ಲವೇ?” ಎಂದು ಕೇಳಿದಾಗ ಮುಗುಳ್ನಕ್ಕ ನಾನು “ನಾನು ಮಂತ್ರವಾದಿಯಲ್ಲ. ನನಗೆ ಹಾಗೇನೂ ಅಂತಹ ವಿಶೇಷವಾದ ಸಾಮರ್ಥ್ಯವೂ ಇಲ್ಲ ಎಂದೆ.

ಮಕ್ಕಳ ಸಮಸ್ಯೆಗೆ ಅಥವಾ ಅವರೊಂದಿಗಿನ ಸಮಸ್ಯೆಗಳ ಪರಿಹಾರಕ್ಕೆ ಮೂರು ಸುವರ್ಣಾವಕಾಶಗಳಿವೆ: ಸಹನೆ, ಯೋಜನೆ, ಪ್ರಾರ್ಥನೆ.”
ಪತ್ನಿಯೊಂದಿಗೆ ಸಮಸ್ಯೆಯಿರುವ ಓರ್ವರಿಗೆ ತಕ್ಷಣ ಪರಿಹಾರ ಬೇಕು. ನಾನು ಅವರ ಜೊತೆ “ನೀವು ಸಂವಹನ ನಡೆಸುತ್ತಿರುವುದು ಲೋಹದಿಂದ ಉತ್ಪಾದಿಸಿದ ವಸ್ತುಗಳ ಜೊತೆಯಲ್ಲ, ಬದಲಾಗಿ ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಸೃಷ್ಟಿಯೊಂದಿಗೆ ಎಂಬ ಪ್ರಜ್ಞೆ ನಿಮ್ಮಲ್ಲಿರಲಿ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮೂರು ಸುವರ್ಣ ನಿಮಿಷಗಳಿವೆ, ಅದನ್ನು ಪಾಲಿಸಬೇಕು: ಸಹನೆ, ಯೋಜನೆ, ಪ್ರಾರ್ಥನೆ. ಉಳಿದ ದಾಂಪತ್ಯ ಸಮಸ್ಯೆಗಳನ್ನು ಸಂತೃಪ್ತ ರೀತಿಯಲ್ಲಿ ಪರಿಹರಿಸಲು ಸಮಯ ಬೇಕು” ಎಂದೆ.

ಹಣ್ಣಾಗುವುದಕ್ಕಿಂತ ಮುಂಚೆಯೇ ಕಾಯಿಯನ್ನು ಕಿತ್ತರೆ ತಿನ್ನಲು ರುಚಿಯಿರದು. ನಾವು ಎದುರಿಸುವ ಯಾವುದೇ ಸಮಸ್ಯೆಗಳನ್ನು ಎರಡು ವಿಧದಲ್ಲಿ ನೋಡಬೇಕಾಗುತ್ತದೆ; ಒಂದು ಐಹಿಕ ಮತ್ತೊಂದು ಪಾರತ್ರಿಕ. ಇದು ಪ್ರವಾದಿ ವರ್ಯರು(ಸ) ಕಲಿಸಿದ ರೀತಿಯಾಗಿದೆ. ಅಪಸ್ಮಾರ ಕಾಯಿಲೆಯ ಓರ್ವ ಮಹಿಳೆ ಪ್ರವಾದಿವರ್ಯ(ಸ)ರನ್ನು ಭೇಟಿಯಾಗಿ “ನನ್ನ ರೋಗ ಶಮನಕ್ಕಾಗಿ ಪ್ರಾರ್ಥಿಸ ಬೇಕು” ಎಂದು ಹೇಳಿದರು. ಆಗ ಪ್ರವಾದಿವರ್ಯರು(ಸ) ಅವರೊಂದಿಗೆ, “ನೀವು ಸಹನೆ ವಹಿಸಿರಿ. ನೀವು ಸಹನೆಯ ಮಾರ್ಗ ಅನುಸರಿಸಿದರೆ ನಿಮಗೆ ಸ್ವರ್ಗ ಪ್ರಾಪ್ತಿಯಾಗುವುದು. ಅಥವಾ ನಿಮ್ಮ ನೋವನ್ನು ನಿವಾರಿಸಲು ಅಲ್ಲಾಹನೊಂದಿಗೆ ಪ್ರಾರ್ಥಿಸುವೆನು” ಎಂದರು.

ಆಗ ಮಹಿಳೆಯು, “ನಾನು ಸಹನೆಯ ಮಾರ್ಗ ಅನುಸರಿಸುವೆನು. ಆದರೆ ನಾನು ಅಪಸ್ಮಾರ ಕಾಯಿಲೆಗೆ ಒಳಗಾಗಿ ಪ್ರಜ್ಞಾಹೀನಳಾಗಿ ಬಿದ್ದಾಗ ನನ್ನ ವಸ್ತ್ರಗಳು ಅಸ್ತವ್ಯಸ್ತವಾಗುತ್ತವೆ. ನನ್ನ ನಗ್ನತೆ ಬಹಿರಂಗವಾಗದಂತೆ ಪ್ರಾರ್ಥಿಸಿದರೆ ಸಾಕು” ಎಂದಾಗ ಪ್ರವಾದಿವರ್ಯರು(ಸ) ಪ್ರಾರ್ಥಿಸಿದರು. ಅವರು ಸಂತೋಷಭರಿತರಾದರು. ಇಲ್ಲಿ ಪ್ರವಾದಿ ವರ್ಯರು(ಸ) ಮುಂದಿರಿಸಿದ ಮೊದಲ ಆಯುಧ ಸಹನೆ ವಹಿಸಿರಿ, ಅದಕ್ಕೆ ಪ್ರತಿಫಲ ದೊರೆಯುತ್ತದೆ ಎಂದಾಗಿದೆ. ಎರಡನೆಯದ್ದು ತಕ್ಷಣದ ಪರಿಹಾರ. ಅವರು ಸಹನೆಯ ಮಾರ್ಗ ಅನುಸರಿಸಿ ದರು, ಜೊತೆಗೆ ತನ್ನ ದೇಹದ ರಕ್ಷಣೆಯ ಭರವಸೆಯನ್ನೂ ಪಡೆದರು. ನಾವು ಎದುರಿಸುವ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಪರಿಹರಿಸಬೇಕೆಂಬ ಬಗ್ಗೆ ಪಾಠವನ್ನು ಈ ಹದೀಸ್ ನೀಡುತ್ತದೆ. ಹಾಗೆಯೇ ಈ ಹದೀಸ್‌ನಲ್ಲಿ ಹಲವಾರು ಸಂದೇಶಗಳಿವೆ.

ಒಂದು: ಎಲ್ಲ ಸಮಸ್ಯೆಗಳಿಗೆ ಒಂದೇ ಏಟಿಗೆ ಪರಿಹಾರ ಲಭ್ಯವಾಗದು.

ಎರಡು: ಎಲ್ಲಾ ಸಮಸ್ಯೆಗಳಿಗೆ ಸಹನೆಯು ಪರಿಹಾರವಾಗಿದೆ.

ಮೂರು: ಬದುಕಿನಲ್ಲಿ ಬರುವ ಎಲ್ಲಾ ಸಮಸ್ಯೆಗಳೂ ಪರಲೋಕದ ಯಶಸ್ಸಿನ ಬಂಡ ವಾಳವಾಗಿದೆ ಎಂಬುದನ್ನು ಮರೆಯ ಬಾರದು. ಅಲ್ಲಾಹನಿಂದ ದೊರೆಯು ವಂಥದ್ದು ಶಾಶ್ವತವೂ, ಅತ್ಯುತ್ತಮವಾದುದೂ ಆಗಿದೆ.

ನಾಲ್ಕು: ಸ್ವರ್ಗ ಪ್ರಾಪ್ತಿಗೆ, ಮಹತ್ತರವಾದ ಪ್ರತಿಫಲಕ್ಕೆ ಅರ್ಹವಾದ ಸಹನೆಯ ಮಾರ್ಗವನ್ನು ಓರ್ವ ಮುಸ್ಲಿಮನಿಗೆ ಆಯ್ದುಕೊಳ್ಳ ಬಹುದು. ಆ ಮಾರ್ಗದಲ್ಲಿ ಬರುವ ಎಲ್ಲಾ ಸಂಕಷ್ಟಗಳನ್ನು ಬಹಳ ಸಂತೋ ಷದಿಂದ ಸ್ವೀಕರಿಸಿ ಸ್ಥಿರವಾಗಿರಬೇಕು. ಮನಶ್ಶಾಂತಿ ಮತ್ತು ನೆಮ್ಮದಿಯ ಕೀಲಿಕೈ ಸಹನೆಯಾಗಿದೆ.

ಸಹನೆಯಿಂದ ಪ್ರತಿಫಲ ಬಯಸಿ ಆ ಗುಣವನ್ನು ಅಳವಡಿಸಿಕೊಳ್ಳುವ ಕುರಿತು ಸ್ವಾರಸ್ಯಕರವಾದ ಕಥೆಯೊಂದಿದೆ.

ಓರ್ವ ದೊರೆಯು ದರಿದ್ರನಾದ ತನ್ನ ಗುಲಾಮನೊಂದಿಗೆ, “ಈ ಬೆತ್ತದಿಂದ ನಾನು ನಿನಗೆ ನೀಡುವ ಪ್ರತಿಯೊಂದು ಏಟಿಗೂ ಒಂದೊAದು ಬಂಗಾರದ ನಾಣ್ಯಗಳನ್ನು ನೀಡುವೆನು” ಎಂದು ಹೇಳಿದನು. ಆ ಬಡವನು ಸಾಕಷ್ಟು ಹೊಡೆತಗಳನ್ನು ತಿನ್ನಲು ಬಯಸಿದ್ದನು. ಆ ಏಟಿನಿಂದ ನೋವು ಇಲ್ಲವೆಂದಲ್ಲ, ಬದಲಾಗಿ ಆ ಬಳಿಕ ಸಿಗುವ ಬಂಗಾರದ ನಾಣ್ಯಗಳ ಬಯಕೆಯಿಂದ ಆತ ಒಪ್ಪಿದ್ದ. ಹಾಗೆಯೇ ಸಂಕಷ್ಟ, ನೋವು, ಯಾತನೆಗಳ ಸಂದರ್ಭದಲ್ಲಿ ಸಹನೆ ವಹಿಸಬೇಕು. ಮಹತ್ತರವಾದ ಪ್ರತಿಫಲವನ್ನು ಬಯಸಿದಾಗ ಸತ್ವ ಪರೀಕ್ಷೆಗಳು ತೃಣ ಸಮಾನವಾಗಿ ಕಂಡು ಬರುತ್ತವೆ.

ಕುಟುಂಬದ ಸಮಸ್ಯೆಗಳನ್ನು ಎದುರಿಸುವ ಪ್ರತಿಯೊಬ್ಬರಿಗೂ ನಾನು ಒಂದು ಸಂದೇಶವನ್ನು ನೀಡಬಯಸುತ್ತೇನೆ. ಅದೆಷ್ಟೋ ಸಮಸ್ಯೆಗಳನ್ನು ನಾನು ನಿಭಾಯಿಸಬೇಕಾಗಿ ಬಂದಿದೆ. ಅದೆಷ್ಟೋ ಬಹಳ ಸಂಕೀರ್ಣವಾದ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಸಲಹೆ ನೀಡಿದ್ದೇನೆ. ನಿರಾಶೆಯ ಮುಖ ಭಾವದಿಂದ ಅವರು ಬರುವರು. ಸುದೀರ್ಘವಾದ ಕಾಯುವಿಕೆಯ ಬಳಿಕ ಅವರ ಸಮಸ್ಯೆಗಳು ಪರಿಹಾರವಾಗುವುದು.

22 ವರ್ಷಗಳಿಂದ ಮಾದಕ ವ್ಯಸನಿಯಾಗಿದ್ದ ಪತಿಯನ್ನು ಪತ್ನಿ ಉಪಚರಿಸಿದಳು; ಆಕೆಯ ಕಠಿಣ ಪರಿಶ್ರಮದ ಮಾಧುರ್ಯವನ್ನು ನಂತರ ಅವರಿಗೆ ಆಸ್ವಾದಿಸಲು ಸಾಧ್ಯವಾಯಿತು. 12 ವರ್ಷಗಳ ವರೆಗೆ ಸಂತಾನ ಭಾಗ್ಯವಿಲ್ಲದ ದಂಪತಿಗಳು ಸಹನೆ ವಹಿಸಿದರು; ಈಗ ಅವರಿಗೆ ಮಕ್ಕಳಾಗಿವೆ, ಮೊಮ್ಮಕ್ಕಳೂ ಆಗಿವೆ. ಪತಿಯ ವಂಚನೆ, ಪರಸ್ತ್ರೀ ಸಂಗ ಅರಿತೂ ಎಂಟು ವರ್ಷಗಳವರೆಗೆ ಸಹಿಸಿದ ಓರ್ವ ಮಹಿಳೆಯ ಬಗ್ಗೆ ನನಗೆ ಅರಿವಿದೆ; ನಂತರ ಆತನು ಬದಲಾದನು. ಮಕ್ಕಳ ಬಗ್ಗೆಯೂ ಮನೆಯ ಬಗ್ಗೆಯೂ ಗಮನ ಹರಿಸದ ಪತ್ನಿಯನ್ನು 5 ವರ್ಷಗಳ ಕಾಲ ಸಹಿಸಿದ ಪತಿಯ ಬಗ್ಗೆಯೂ ಅರಿವಿದೆ; ಈಗ ಆಕೆ ಬದಲಾದಳು, ಪ್ರಬುದ್ಧಳಾದಳು. 35 ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದ ಪತಿಯನ್ನು ಸಹಿಸಿದ ಪತ್ನಿಯ ಬಗ್ಗೆಯೂ ಗೊತ್ತು; ಈಗ ಆತ ಮದ್ಯದಿಂದ ದೂರವಾಗಿ ಉತ್ತಮ ಮನುಷ್ಯನಾಗಿ ಬದಲಾಗಿದ್ದಾನೆ. ನಾವು ಚಿಂತಿಸಬೇಕು.